Mauni Amavasya 2025: ಈ ಅಮಾವಾಸ್ಯೆ ದಿನ ಅಗ್ನಿ ಗ್ರಹ ಕುಜನ ನೀಚ ಸ್ಥಿತಿ: ಎಲ್ಲರಿಗೂ ಅಶುಭ ಕಾದಿದೆ

ಇದೇ ಜನವರಿ 29ನೇ ತಾರೀಕಿನ ಬುಧವಾರದ ಅಮಾವಾಸ್ಯೆಯ ದಿನದಂದ ಶುರುವಾಗಿ ಹದಿನೈದು ದಿನಗಳ ಕಾಲ ಗ್ರಹ ಸ್ಥಿತಿಗಳು ಅಪಾಯಕಾರಿಯಾಗಿದೆ. ಅಗ್ನಿ ಗ್ರಹ ಎಂದು ಕರೆಸಿಕೊಳ್ಳುವ ಕುಜ ಗ್ರಹವು ಅಗ್ನಿ- ಪೃಥ್ವಿ ತತ್ವದ ರಾಶಿಗಳಾದ ಧನುಸ್ಸು- ಮಕರವನ್ನು ವೀಕ್ಷಣೆ ಮಾಡುತ್ತದೆ. ಈ ಸ್ಥಿತಿಯು ಏನೇನು ಪರಿಣಾಮವನ್ನು ಬೀರಬಹುದು ಎಂಬುದನ್ನು ಈ ಲೇಖನದಲ್ಲಿ ವಿಸ್ತೃತವಾಗಿ ತಿಳಿಸಲಾಗಿದೆ.

Mauni Amavasya 2025: ಈ ಅಮಾವಾಸ್ಯೆ ದಿನ ಅಗ್ನಿ ಗ್ರಹ ಕುಜನ ನೀಚ ಸ್ಥಿತಿ: ಎಲ್ಲರಿಗೂ ಅಶುಭ ಕಾದಿದೆ
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ಡಾ. ಭಾಸ್ಕರ ಹೆಗಡೆ

Updated on:Jan 29, 2025 | 5:33 PM

ಈ ಲೇಖನವನ್ನು ನೀವು ಕೊನೆಯ ತನಕ ಓದಿಕೊಳ್ಳಿ. ಏಕೆ ಈ ಮಾತನ್ನ ಆರಂಭದಲ್ಲಿಯೇ ಹೇಳ್ತಾ ಇದ್ದೀನಿ ಅಂದರೆ, ಈ ಬಾರಿಯ ಅಮಾವಾಸ್ಯೆ, ಅಂದರೆ ಜನವರಿ 29, 2025ರ ಅಮಾವಾಸ್ಯೆಯಂದು ಗ್ರಹ ಸ್ಥಿತಿಗಳು ಬಹಳ ಕ್ರೂರವಾಗಿವೆ. ಆದ್ದರಿಂದ ಆ ದಿನದ ಆಚೆಗೂ ಹಾಗೂ ಮುಂಚೆಯೂ ಅದರದೇ ಆದ ನಕಾರಾತ್ಮಕ ಪ್ರಭಾವಗಳನ್ನ ಪ್ರಕೃತಿಯ ಮೇಲೂ ಹಾಗೂ ಮನುಷ್ಯರ ಸ್ವಭಾವದ ಮೇಲೂ ಕಾಣಬಹುದು. ಒಟ್ಟು ಹದಿನೈದು ದಿನಗಳ ಕಾಲ ಕರಾಳವಾದ ಪ್ರಭಾವ ಇರುತ್ತದೆ. ಅಗ್ನಿ ಗ್ರಹ ಎಂದು ಕರೆಯುವ ಕುಜನು ಅಮಾವಾಸ್ಯೆಯ ಬುಧವಾರದಂದು ಮಿಥುನ ರಾಶಿಯಲ್ಲಿ ಇರುತ್ತದೆ. ಕುಜ ಗ್ರಹಕ್ಕೆ ನಾಲ್ಕು, ಏಳು ಹಾಗೂ ಎಂಟನೇ ದೃಷ್ಟಿ ಇದೆ. ಅಂದರೆ ತಾನು ಇರುವಂಥ ರಾಶಿಯಿಂದ ನಾಲ್ಕನೇ ಮನೆ, ಏಳನೇ ಮನೆ ಹಾಗೂ ಎಂಟನೇ ಮನೆಯ ವೀಕ್ಷಣೆಯನ್ನು ಮಾಡುತ್ತದೆ. ಹೀಗೆ ವೀಕ್ಷಣೆ ಮಾಡುವುದರ ಫಲಿತವೇ ಈಗ ಹೇಳಲು ಹೊರಟಿರುವಂಥ ಎಚ್ಚರಿಕೆಯ ವಿಚಾರ.

ಯಾವುದೇ ಗ್ರಹವು ತಾನು ನೀಚ ಸ್ಥಿತಿಯನ್ನು ತಲುಪುವಂಥ ರಾಶಿಯ ಸಮೀಪದಲ್ಲಿ ಸಂಚಾರ ಮಾಡುತ್ತಿರುತ್ತದೋ ಆಗ ನೀಚ ಅಥವಾ ಅಪಾಯಕಾರಿ ಫಲಗಳನ್ನು ನೀಡುತ್ತದೆ. ಮಿಥುನ ರಾಶಿಯಲ್ಲಿರುವ ಕುಜ ಗ್ರಹವು ತನ್ನ ನೀಚ ಸ್ಥಿತಿಯನ್ನು ತಲುಪುವುದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ ನಂತರ. ಆದರೆ ನೀಚ ಸ್ಥಿತಿಗೆ ಸಮೀಪ ಅಂದರೆ, ಮಿಥುನ ರಾಶಿಯ ಕೊನೆ ಭಾಗದಲ್ಲಿ ಸಂಚರಿಸುವಾಗಲೂ ಅಂಥದ್ದೇ ದುಷ್ಫಲವನ್ನು ನೀಡುತ್ತದೆ. ಮಿಥುನ ರಾಶಿಯಲ್ಲಿ ಇರುವ ಕುಜನು ಏಳನೇ ರಾಶಿ- ಅಗ್ನಿ ತತ್ವದ ಧನುಸ್ಸು ಹಾಗೂ ಪೃಥ್ವಿ ತತ್ವದ ಮಕರ ರಾಶಿಯ ವೀಕ್ಷಣೆ ಮಾಡುತ್ತದೆ. ಅಲ್ಲೇ, ಅಂದರೆ ಮಕರ ರಾಶಿಯಲ್ಲಿ ಅದರ ಅಷ್ಟಮ ಸ್ಥಾನವಾದ ಸಿಂಹ ರಾಶಿಯ ಅಧಿಪತಿ ರವಿ ಸಹ ಇದೆ. ಎಂಟನೇ ಮನೆಯ ಅಧಿಪತಿ ರವಿಯನ್ನು ನೀಚ ಸ್ಥಿತಿಯ ಫಲಗಳನ್ನೇ ನೀಡುವ ಕುಜ ಗ್ರಹವು ವೀಕ್ಷಿಸುತ್ತದೆ. ಅದೇ ರಾಶಿಯಲ್ಲಿ ಬುಧ ಗ್ರಹವು ಇದ್ದು, ಆತ ಬುದ್ಧಿಯ ಕಾರಕನಾಗಿದ್ದು, ಅದರ ಮೇಲೂ ಕುಜ ಗ್ರಹದ ದೃಷ್ಟಿ ಬೀಳುತ್ತದೆ.

ಇನ್ನು ಇದೇ ವೇಳೆ ಆ ನಿರ್ದಿಷ್ಟ ದಿನ ಅಮಾವಾಸ್ಯೆಯಾಗಿ, ಮಕರ ರಾಶಿಯಲ್ಲೇ ಚಂದ್ರನು ಸಹ ಇದ್ದು, ತನ್ನ ಸಂಪೂರ್ಣ ಬಲವನ್ನು ಕಳೆದುಕೊಂಡು, ಪಾಪಗ್ರಹ ಎನಿಸಿಕೊಳ್ಳುತ್ತಾನೆ. ಆರಂಭದಲ್ಲಿಯೇ ಹೇಳಿದಂತೆ ಕುಜನು ಅಗ್ನಿ ಗ್ರಹ, ಚಂದ್ರನು ಮನಸ್ಸಿಗೆ, ನೀರಿಗೆ ಕಾರಕ. ರವಿಯು ಸರ್ಕಾರ, ಹೃದಯ, ಕಣ್ಣು ಹಾಗೂ ತಂದೆಯನ್ನು ಪ್ರತಿನಿಧಿಸಲಿದ್ದು, ಶನಿಯ ಆಧಿಪತ್ಯದ ಮಕರ ರಾಶಿಯಲ್ಲಿ ಇರುತ್ತಾನೆ. ಈ ಎಲ್ಲವೂ ಏನನ್ನು ಸೂಚಿಸುತ್ತದೆ ಅಂದರೆ, ಅಮಾವಾಸ್ಯೆಯೂ ಸೇರಿದಂತೆ ಅಲ್ಲಿಂದ ಮುಂದಿನ ಹದಿನೈದು ದಿನ ಬಹಳ ಅಪಾಯಕಾರಿ ಹಾಗೂ ಅನಾಹುತಗಳು ಸಂಭವಿಸುತ್ತವೆ ಎಂಬುದನ್ನು ತಿಳಿಸುತ್ತದೆ. ಅದರಲ್ಲೂ ಭಾರತದ ಉತ್ತರ ಭಾಗದಲ್ಲಿ, ಅಂದರೆ ಉತ್ತರ ಭಾರತದಲ್ಲಿ ದೊಡ್ಡ ಅನಾಹುತಗಳು ಸಂಭವಿಸುತ್ತವೆ ಎಂಬುದನ್ನು ಹೇಳಬಹುದು.

ಈ ಸಮಯಕ್ಕೆ ಉತ್ತರ ಭಾರತದಲ್ಲಿ, ಅದರಲ್ಲೂ ಅಷ್ಟು ದೊಡ್ಡ ಮಹಾಕುಂಭ ಮೇಳ ನಡೆಯುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಲೇ ಬೇಕು. ಮನಸ್ಸಿನ ಕಾರಕ ಚಂದ್ರನೇ ತನ್ನ ಬಲವನ್ನು ಕಳೆದುಕೊಂಡು ಬಿಡುವುದರಿಂದ ಎಂಥ ಸಾತ್ವಿಕ- ಸಜ್ಜನ ಜನರ ಮನಸ್ಸಿನ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತಾನೆ. ಕುಜ ಬೆಂಕಿ ಹಾಗೂ ಚಂದ್ರ ನೀರು ಈ ಎರಡರ ಅಪಾಯವನ್ನೂ ಅನಾಹುತವನ್ನೂ ಮುಂಚಿತವಾಗಿಯೇ ಅಂದಾಜಿಸಬೇಕು ಹಾಗೂ ಅಗತ್ಯ ಪ್ರಮಾಣದ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಈ ರೀತಿಯ ಗ್ರಹ ಸ್ಥಿತಿ ಯಾವಾಗಲೂ ಬರುವಂಥದ್ದಲ್ಲ, ನೂರು ವರ್ಷಗಳಿಗೆ ಒಮ್ಮೆ ಇಂಥದ್ದೊಂದು ಗ್ರಹ ಸ್ಥಿತಿಯ ನಿರ್ಮಾಣ ಆಗುತ್ತದೆ.

ರಾಜಕೀಯವಾಗಿಯೂ ಅನಿರೀಕ್ಷಿತವಾದ ಬದಲಾವಣೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಹೆಸರಿರುವ ರಾಜಕಾರಣಿಗಳ ತಂತ್ರವನ್ನು ಸಹ ಮುರಿಯುವಂತೆ ಸಣ್ಣ ವಯಸ್ಸಿನ ಅಥವಾ ರಾಜಕೀಯದಲ್ಲಿ ತುಂಬ ದೊಡ್ಡ ಅನುಭವವೇನೂ ಇರದವರು ಪಟ್ಟುಗಳನ್ನು ಹಾಕಿ, ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸುತ್ತಾರೆ. ಕಾಲಪುರುಷನ ಚಕ್ರದಲ್ಲಿ ಆರನೇ ಮನೆಯಾದ ಕನ್ಯಾ ರಾಶಿಯಲ್ಲಿ ಕೇತು ಗ್ರಹವಿದ್ದು, ಅದರ ಮೇಲೂ ಕುಜ ಗ್ರಹದ ದೃಷ್ಟಿ ಇರುತ್ತದೆ. ಇನ್ನೂ ಕಾಯೋಣ, ಇನ್ನೊಂದಿಷ್ಟು ಸಮಯ ನೋಡೋಣ ಎಂದು ತಾಳ್ಮೆಯಿಂದ ಕಾಯುತ್ತಾ ಬಂದ ನಾಯಕರು, ವ್ಯಕ್ತಿಗಳು ಏಕಾಏಕಿ ತಮ್ಮ ಧೋರಣೆಯನ್ನೇ ಬದಲಾಯಿಸುತ್ತಾರೆ. ಇನ್ನು ಸಹಿಸುವ ಮಾತೇ ಇಲ್ಲ ಎಂದು ದಂಗೆ ಏಳುತ್ತಾರೆ, ಯಾರೂ ನಿರೀಕ್ಷೆ ಕೂಡ ಮಾಡದಂಥ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.

ಇದನ್ನೂ ಓದಿ: ನಾಳೆ ಮೌನಿ ಅಮಾವಾಸ್ಯೆ; ಶನಿ, ಪಿತೃ ದೋಷದಿಂದ ಪರಿಹಾರ ಪಡೆಯಲು ಈ ರೀತಿ ಮಾಡಿ

ಬಹಳ ಎಚ್ಚರಿಕೆಗಳು ಅವಶ್ಯವಿದ್ದು, ಎಲ್ಲರಿಗೂ ಭಗವಂತನ ಕೃಪಾಶೀರ್ವಾದ ಬೇಕಾಗಿದೆ. ಇದರ ಹೊರತಾಗಿಯೂ ಶುಭಂಭವತು, ಒಳಿತಾಗಲಿ.

ಲೇಖಕರು: ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ

(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಜ್ಯೋತಿಷ್ಯದ ಆಧಾರದಲ್ಲಿ ಲೇಖಕರು ತಿಳಿಸಿದ್ದಾರೆ. ಇದು ವೈಯಕ್ತಿಕವಾದ ಅಭಿಪ್ರಾಯವಾಗಿದೆ. ಇದನ್ನು ಟಿವಿ9 ಕನ್ನಡ ಡಿಜಿಟಲ್ ವೆಬ್ ಸೈಟ್ ಆಗಲೀ ಹಾಗೂ ಅದರ ಸಹೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ. -ಸಂಪಾದಕರು)

Published On - 5:56 pm, Tue, 28 January 25

ಸುಧಾಕರ್ ಆರೋಪಗಳನ್ನು ರಾಜ್ಯ ಚುನಾವಣಾಧಿಕಾರಿ ಗಮನಿಸಿರುತ್ತಾರೆ: ರಾಜೀವ್
ಸುಧಾಕರ್ ಆರೋಪಗಳನ್ನು ರಾಜ್ಯ ಚುನಾವಣಾಧಿಕಾರಿ ಗಮನಿಸಿರುತ್ತಾರೆ: ರಾಜೀವ್
ನನಗೆ ತ್ರಿವಿಕ್ರಮ್ ಪರಿಚಯವೇ ಇರಲಿಲ್ಲ: ಆ ಘಟನೆ ನೆನೆದ ಕಿಚ್ಚ ಸುದೀಪ್
ನನಗೆ ತ್ರಿವಿಕ್ರಮ್ ಪರಿಚಯವೇ ಇರಲಿಲ್ಲ: ಆ ಘಟನೆ ನೆನೆದ ಕಿಚ್ಚ ಸುದೀಪ್
ಗಾಂಧೀಜಿಯನ್ನು ಆದರಿಸುವವರಿಂದ ಇಂಥ ಪದಬಳಕೆಯೇ?: ಕುಮಾರಸ್ವಾಮಿ
ಗಾಂಧೀಜಿಯನ್ನು ಆದರಿಸುವವರಿಂದ ಇಂಥ ಪದಬಳಕೆಯೇ?: ಕುಮಾರಸ್ವಾಮಿ
ನಾವು ದುರ್ಬಲರಲ್ಲ, ನಮ್ಮ ಶಕ್ತಿ ಏನೆನ್ನುವುದನ್ನು ತೋರಿಸುತ್ತೇವೆ: ಸುಧಾಕರ್
ನಾವು ದುರ್ಬಲರಲ್ಲ, ನಮ್ಮ ಶಕ್ತಿ ಏನೆನ್ನುವುದನ್ನು ತೋರಿಸುತ್ತೇವೆ: ಸುಧಾಕರ್
ಹಣ ತೆಗೆಯಲು ಸಾಧ್ಯವಾಗದೇ ಎಟಿಎಂ ಮಷಿನ್ ಹೊತ್ತೊಯ್ದ ಖದೀಮರು
ಹಣ ತೆಗೆಯಲು ಸಾಧ್ಯವಾಗದೇ ಎಟಿಎಂ ಮಷಿನ್ ಹೊತ್ತೊಯ್ದ ಖದೀಮರು
ಬಿಗ್ ಬಾಸ್ ಬಳಿಕ ಸಿಸಿಎಲ್ ಮೇಲೆ ಸುದೀಪ್ ಗಮನ; ಸುದ್ದಿಗೋಷ್ಠಿಯ ಲೈವ್ ನೋಡಿ..
ಬಿಗ್ ಬಾಸ್ ಬಳಿಕ ಸಿಸಿಎಲ್ ಮೇಲೆ ಸುದೀಪ್ ಗಮನ; ಸುದ್ದಿಗೋಷ್ಠಿಯ ಲೈವ್ ನೋಡಿ..
ಹನುಮಂತ ಸ್ಥಿತಪ್ರಜ್ಞ, ಯಾವತ್ತೂ ಅಹಂಭಾವ ಪ್ರದರ್ಶಿಸಿದವನಲ್ಲ: ಅಭಿಮಾನಿ
ಹನುಮಂತ ಸ್ಥಿತಪ್ರಜ್ಞ, ಯಾವತ್ತೂ ಅಹಂಭಾವ ಪ್ರದರ್ಶಿಸಿದವನಲ್ಲ: ಅಭಿಮಾನಿ
ಬಿಗ್ ಬಾಸ್ ವಿನ್ನರ್ ಹನುಮಂತನ ಮದುವೆ ಮಾತುಕತೆ ಹೇಗೆ ನಡೆದಿದೆ?
ಬಿಗ್ ಬಾಸ್ ವಿನ್ನರ್ ಹನುಮಂತನ ಮದುವೆ ಮಾತುಕತೆ ಹೇಗೆ ನಡೆದಿದೆ?
ಶ್ರೀರಾಮುಲು ಮತ್ತು ತನ್ನ ನಡುವೆ ಏನೂ ನಡೆದಿಲ್ಲವೆಂಬಂತೆ ಮಾತಾಡಿದ ರೆಡ್ಡಿ
ಶ್ರೀರಾಮುಲು ಮತ್ತು ತನ್ನ ನಡುವೆ ಏನೂ ನಡೆದಿಲ್ಲವೆಂಬಂತೆ ಮಾತಾಡಿದ ರೆಡ್ಡಿ
ಮೊಬೈಲ್​ನಲ್ಲಿ ರೀಲ್ಸ್ ನೋಡುತ್ತಾ ಕುಳಿತ ವೈದ್ಯ, ಅತ್ತ ಮಹಿಳೆ ಸಾವು
ಮೊಬೈಲ್​ನಲ್ಲಿ ರೀಲ್ಸ್ ನೋಡುತ್ತಾ ಕುಳಿತ ವೈದ್ಯ, ಅತ್ತ ಮಹಿಳೆ ಸಾವು