AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 11ರ ದಿನಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 11ರ ಭಾನುವಾರದ ದಿನ ಭವಿಷ್ಯ(daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 11ರ ದಿನಭವಿಷ್ಯ
Numerology Prediction
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Dec 11, 2022 | 5:50 AM

Share

ನಿಮ್ಮ ಜನ್ಮಸಂಖ್ಯೆಗೆ (Numerology Prediction) ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 11ರ ಭಾನುವಾರದ ದಿನ ಭವಿಷ್ಯ(daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಸೈಟು, ಮನೆ ಅಥವಾ ಅಪಾರ್ಟ್‌ಮೆಂಟ್ ಖರೀದಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತವಾದದ್ದು ದೊರೆಯುವ ಅವಕಾಶ ಇದೆ. ಆದರೆ ಶೀತ, ಜ್ವರದಂಥ ಸಮಸ್ಯೆ ಕಾಡಬಹುದು, ಎಚ್ಚರಿಕೆಯಿಂದ ಇರಬೇಕು. ಈ ದಿನ ನೀವಿರುವ ಸಮೀಪದಲ್ಲಿ ಇರುವ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆಯಿರಿ.

ಜನ್ಮಸಂಖ್ಯೆ 2

ಮನಸ್ಸಿನಲ್ಲಿ ಒಂದು ಬಗೆಯ ಉಲ್ಲಾಸ ಇರುತ್ತದೆ. ಮಕ್ಕಳ ಜತೆಗೆ ಅಥವಾ ನಿಮಗಿಂತ ಚಿಕ್ಕ ವಯಸ್ಸಿನವರೊಂದಿಗೆ ಉತ್ತಮವಾದ ಸಮಯ ಕಳೆಯುವ ಅವಕಾಶ ಇದೆ. ಈ ದಿನದ ದ್ವಿತೀಯಾರ್ಧದಲ್ಲಿ ನಿಮ್ಮ ಮನೆಗೆ ಅತಿಥಿಗಳು ಭೇಟಿ ನೀಡುವ ಅವಕಾಶ ಇದೆ. ಇದರಿಂದ ಸಂಭ್ರಮ ಹೆಚ್ಚಾಗಲಿದೆ.

ಜನ್ಮಸಂಖ್ಯೆ 3

ಕೃಷಿಯನ್ನು ಮಾಡುತ್ತಿರುವವರಿಗೆ ಈ ದಿನ ವಿಶೇಷವಾಗಿರುತ್ತದೆ. ಮನೆಗೆ ಹೊಸದಾಗಿ ವಸ್ತುಗಳನ್ನು ತರುವ ಸಾಧ್ಯತೆ ಇದೆ. ಮತ್ತು ಇದಕ್ಕಾಗಿ ಸ್ವಲ್ಪ ಮೊತ್ತವನ್ನಾದರೂ ಸಾಲ ಮಾಡಬೇಕಾಗಬಹುದು. ಇನ್ನು ಕಾಲು ನೋವಿನಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯೋಪಚಾರದ ಬಗ್ಗೆ ಮಾಹಿತಿ ದೊರೆಯಲಿದೆ.

ಜನ್ಮಸಂಖ್ಯೆ 4

ಹಳೇ ಸ್ನೇಹಿತರನ್ನು ಭೇಟಿ ಆಗುವ ಯೋಗ ಇದ್ದು, ಪುಷ್ಕಳವಾದ ಭೋಜನವನ್ನು ಸವಿಯುವ ಯೋಗ ಇದೆ. ದೀರ್ಘಕಾಲದಿಂದ ನಿಮ್ಮ ಮನಸ್ಸಿನಲ್ಲಿ ಇರುವ ವಿಚಾರವನ್ನು ಹೇಳಿಕೊಳ್ಳುವುದಕ್ಕೆ ಸನ್ನಿವೇಶ ಸೃಷ್ಟಿ ಆಗಲಿದೆ. ತೀರ್ಥಕ್ಷೇತ್ರ ದರ್ಶನ ಮಾಡಬೇಕು ಅಂದುಕೊಳ್ಳುವವರು ಸಿದ್ಧತೆ ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 5

ಎಲ್ಲವನ್ನೂ ಮೊದಲಿಂದ ಶುರು ಮಾಡಬೇಕಾಗುತ್ತದೆ. ಅದು ಸ್ನೇಹ, ಸಂಬಂಧ, ಈಗಾಗಲೇ ಅರ್ಧವಾದರೂ ಮಾಡಿ ಮುಗಿಸಿದ ಕೆಲಸ ಹೀಗೆ ಎಲ್ಲವನ್ನೂ ಆರಂಭದಿಂದ ಪ್ರಾರಂಭಿಸಬೇಕಾಗುತ್ತದೆ. ಹೋಟೆಲ್ ಉದ್ಯಮದವರು ಸರ್ಕಾರದಿಂದ ಇರುವ ನಿಯಮಗಳನ್ನು ಪಾಲಿಸುತ್ತಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಜನ್ಮಸಂಖ್ಯೆ 6

ಸ್ತ್ರೀಯರಾಗಿದ್ದಲ್ಲಿ ಪುರುಷರ ವಿಚಾರವಾಗಿ, ಪುರುಷರಾಗಿದ್ದಲ್ಲಿ ಸ್ತ್ರೀಯರ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು. ನಿಮ್ಮ ಮಾತು, ಬಾಡಿ ಲಾಂಗ್ವೇಜ್ ಅನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಅಥವಾ ಬೇಕೆಂತಲೆ ಅಪಪ್ರಚಾರವನ್ನು ಮಾಡಬಹುದು. ಮದ್ಯಪಾನದ ಅಭ್ಯಾಸ ಇರುವವರು ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 7

ಈ ದಿನ ನಿಮ್ಮನ್ನು ಒಂಟಿತನ ಬಹಳ ಕಾಡುತ್ತದೆ. ನಿಮಗೆ ಈ ಸಲಹೆ ತಮಾಷೆ ಅನಿಸಬಹುದು; ಒಂದು ಸಿನಿಮಾಗೆ ಹೋಗಬೇಕೆನಿಸಿದರೆ ಹೋಗಿ. ಸ್ನೇಹಿತರ ಮನೆಗೆ ಹೋಗಬೇಕೆನಿಸಿದರೆ ಹೋಗಿ. ಆದರೆ ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಾ ಮನಸ್ಸನ್ನು ಕಹಿ ಮಾಡಿಕೊಳ್ಳಬೇಡಿ. ಕೆಲವು ಕಹಿ ವಿಚಾರಗಳಿಗೆ ಮರೆವು ಮದ್ದು.

ಜನ್ಮಸಂಖ್ಯೆ 8

ದಾನ- ಧರ್ಮಗಳಿಂದ, ಮತ್ತೊಬ್ಬರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಗಾರ್ಡನಿಂಗ್, ಸಂಗೀತ ಕೇಳುವುದು ಹೀಗೆ ಸಮಯ ಕಳೆಯಲಿದ್ದೀರಿ. ನಿಮ್ಮ ಇನ್‌ಟ್ಯೂಷನ್ ಬಹಳ ಚೆನ್ನಾಗಿ ಕೆಲಸ ಮಾಡಲಿದೆ. ನಿಮಗೆ ದೊರೆಯುವ ಪ್ರೇರಣೆಯಿಂದ ಭವಿಷ್ಯದಲ್ಲಿ ಅನುಕೂಲ ಇದೆ.

ಜನ್ಮಸಂಖ್ಯೆ 9

ಸಂಬಂಧವೇ ಇಲ್ಲದ ವಿಚಾರ, ವ್ಯಕ್ತಿಗಳಿಗಾಗಿ ವೃಥಾ ಅಲೆದಾಟ ಇದೆ. ನಿಮ್ಮ ಜೇಬಿನಿಂದಲೇ ಖರ್ಚು ಕೂಡ ಆಗಬಹುದು. ಆದ್ದರಿಂದ ನೀವಾಗಿಯೇ ಯಾವುದನ್ನು ಮೈ ಮೇಲೆ ಹಾಕಿಕೊಳ್ಳಬೇಡಿ. ನಿಮ್ಮ ಅಗ್ರೆಸಿವ್ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಿ. ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಸೂಕ್ತ ವೈದ್ಯರಲ್ಲಿ ಕೂಡಲೇ ತೋರಿಸಿಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು