Nitya Bhavishya: ರಾಶಿ ಭವಿಷ್ಯ; ಇತರರ ತಪ್ಪಿಗೆ ನಿಮ್ಮನ್ನು ಗುರಿಮಾಡುವರು-ಎಚ್ಚರ
ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಫೆಬ್ರವರಿ 10) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಶತಭಿಷಾ, ಯೋಗ: ವರೀಯಾನ್, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:53 ರಿಂದ 11:20ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:41 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:59 ರಿಂದ 08:27ರ ವರೆಗೆ.
ಸಿಂಹ ರಾಶಿ : ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಸ್ಥಾನವು ಸಿಗಲಿದೆ. ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳನ್ನು ನೀವು ಅಲಕ್ಷ್ಯ ಮಾಡುವುದು ಸರಿಯಾಗದು. ಕೆಟ್ಟ ಕನಸನ್ನು ನೀವು ನೆನಪಿನಲ್ಲಿ ಇಡುವಿರಿ. ಕೆಲವರ ಮೇಲೆ ನಂಬಿಕೆಯನ್ನು ಇಡಲಾರಿರಿ. ನಿಮ್ಮ ಸಂಗಾತಿಗಾಗಿ ನೀವು ಯಾವುದಾದರೂ ಉದ್ಯೋಗವನ್ನು ನೀಡುವಿರಿ. ಕೆಲವು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ನಿಮ್ಮ ಬಹುದಿನದ ವಿದೇಶ ಪ್ರಯಾಣದ ಕನಸು ಇಂದು ನನಸಾಗುವುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಪ್ರೇಮಿಗಳಿಗೆ ಇಂದು ಶುಭವಾಗಿಲ್ಲ. ನಿರಂತರ ಓಡಾಟದಿಂದ ವಿಶ್ರಾಂತಿಯು ಸಿಗಲಿದೆ.
ಕನ್ಯಾ ರಾಶಿ : ಕುಟುಂಬದ ಇಂದಿನ ಜೀವನವು ಅನೂಹ್ಯ ತಿರುವುಗಳಿಂದ ಇರಬಹುದು. ಏಕಾಂತದಲ್ಲಿ ಇಂದು ನೆಮ್ಮದಿಯನ್ನು ಕಾಣಬಯಸುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವುದು. ಮಕ್ಕಳ ವಿವಾಹದ ಕುರಿತು ಅತಿಯಾದ ಚಿಂತೆ ಇರುವುದು. ನಿರುದ್ಯೋಗಿಗಳಿಗೆ ಎಲ್ಲರಿಂದ ಮಾನಸಿಕ ಹಿಂಸೆ ಆಗಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ಸಂತೋಷವಾಗುವುದು. ಹೊಸತನ್ನು ಏನನ್ನಾದರೂ ಮಾಡಬೇಕೆಂಬ ಬಯಕೆ ಬರುವುದು. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಯಾರ ಬಗ್ಗೆಯೂ ತಾರತಮ್ಯ ಭಾವವನ್ನು ತೋರಿಸುವುದು ಬೇಡ. ಆಸ್ತಿ ವ್ಯವಹಾರಗಳಿಂದ ನಿಮಗೆ ಲಾಭವು ಇರುವುದು. ಇತರರ ತಪ್ಪಿಗೆ ನಿಮ್ಮನ್ನು ಗುರಿಮಾಡುವರು. ಉದ್ಯೋಗಸ್ಥರು ಪ್ರಗತಿಯನ್ನು ಕಾಣುವರು. ಆರ್ಥಿಕ ಸಹಕಾರವನ್ನು ಯಾರಾದರೂ ಕೇಳಿಬರಬಹುದು.
ತುಲಾ ರಾಶಿ : ಇಂದು ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಕಾರ್ಯವು ಸಿಗಲಿದೆ. ನಿಮ್ಮ ಬಹುಕಾಲ ಬಾಕಿಯಿರುವ ಕೆಲಸಗಳ ಬಗ್ಗೆ ನೆಮ್ಮದಿ ಇರದು. ಸಣ್ಣ ವಿಚಾರಕ್ಕೆ ಯಾರದ್ದಾದರೂ ವಿರೋಧ ಮಾಡುವಿರಿ. ಸ್ವಾಭಿಮಾನಕ್ಕೆ ತೊಂದರೆಯಾಗಬಹುದು. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಹಣ ಬಂದರೂ ಸಂತೋಷ ಇರುವುದಿಲ್ಲ. ನೀವು ಇಂದು ನಿಮ್ಮ ಕಾರ್ಯವನ್ನು ಉತ್ಸಾಹದಿಂದ ಮಾಡುತ್ತೀರಿ. ಬಹಳ ಕಾರ್ಯವೂ ಇದರಿಂದ ಅನಾಯಸವೆನಿಸಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ. ಬಿಟ್ಟು ಬಿಟ್ಟು ಬರುವ ಅನಾರೋಗ್ಯದಿಂದ ನಿಮಗೆ ಮಾನಸಿಕ ಹಿಂಸೆ ಆಗುವುದು. ಸಂಶೋಧನೆಗೆ ಮಾರ್ಗದರ್ಶನ ಸಿಗಲಿದೆ. ಯಾವ ಒಪ್ಪಂದಕ್ಕೂ ನಿಮ್ಮ ಸಹಮತ ಇರದು. ಬೇಸರಕ್ಕೆ ಕಾರಣವನ್ನು ಹುಡುಕುತ್ತ ಇರುವುದಕ್ಕಿಂತ ಬೇರೆಯ ಕಾರ್ಯದಲ್ಲಿ ಮಗ್ನರಾಗಿ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಮಕ್ಕಳ ಪ್ರಗತಿಯು ಇಂದು ಸಫಲತೆಯನ್ನು ಕಾಣುವುದು.
ವೃಶ್ಚಿಕ ರಾಶಿ : ಇಂದಿನ ನಿಮ್ಮ ಘಟನೆಯು ಯಾರನ್ನೂ ಇಷ್ಟಪಡಲು ಆಗದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿಯನ್ನು ತಂದೀತು. ಯಾರಾದರೂ ಹಣವನ್ನು ಹೂಡಿಕೆ ಮಾಡುವುದನ್ನು ತಡೆಯುತ್ತೀರಿ. ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ಸಂಸಾರದಲ್ಲಿ ಯಾವುದೋ ವಿಚಾರಕ್ಕೆ ಜಗಳಕ್ಕೆ ಇಳಿಯಬೇಡಿ. ದೃಢವಾದ ಮನಸ್ಸಿನಿಂದ ಮುಂದುವರಿಯಿರಿ. ವಿದ್ಯಾರ್ಥಿಗಳು ಮನೆಯಿಂದ ದೂರ ಇರಬೇಕಾದ ಸ್ಥಿತಿ ಬರಬಹುದು. ಮಹಿಳೆಯರು ತಮ್ಮ ಕಾರ್ಯದಲ್ಲಿ ದಕ್ಷತೆಯನ್ನು ತೋರುವರು. ಶ್ರಮ ವಹಿಸಿ ಮಾಡಿದ ಕಾರ್ಯಕ್ಕೆ ಉತ್ತಮ ಫಲವು ಸಿಗಲಿದೆ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ಹಿತಶತ್ರುಗಳಿಂದ ಏನಾದರೂ ತೊಂದರೆ ಬರಬಹುದು. ಅಪಾಯದ ಮುನ್ಸೂಚನೆ ಸಿಕ್ಕಾಗ ಅದನ್ನು ಉಪಾಯದಿಂದ ಸರಿಮಾಡಿಕೊಳ್ಳಲು ಪ್ರಯತ್ನಿಸಿ. ಕೆಲಸವನ್ನು ಮಾಡಿಸಿಕೊಳ್ಳಲು ನೀವು ಹೆಚ್ಚು ಸಮಯವನ್ನು ನೀಡುವಿರಿ.