AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಿ ನಕ್ಷತ್ರದ ಗುಣ ಇದು, ನೀರಿನಿಂದ ಮೊಸರು ಮಾಡಲು ಈ ನಕ್ಷತ್ರದಲ್ಲಿ ಮಳೆಯಾಗಬೇಕು

ಇದು ಮಳೆ ನಕ್ಷತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದಾಗಿದೆ. ಸೂರ್ಯ ಈ ನಕ್ಷತ್ರವನ್ನು ಪ್ರವೇಶಿಸಿದಾಗ ಸುರಿದ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದರೆ ಅದೇ ಮುತ್ತಾಗುತ್ತದೆ ಎನ್ನುವುದು ಕವಿಸಮಯ. ಸ್ವಾತಿಯ ಮಳೆಯಿಂದ ವರ್ಷದ ಮೊಸರನ್ನು ಮಾಡುತ್ತಾರೆ. ಹೊಸ ಮೊಸರು ತಯಾರಾಗುವುದು ಸ್ವಾತಿ ಮಳೆಯ ನೀರಿನಿಂದ ಎಂದರೆ ಅಚ್ಚರಿಯಾದೀತು. ಎಷ್ಟೋ ಕಡೆಗಳಲ್ಲಿ ಈ ಕ್ರಮ ಇನ್ನೂ ಇದೆ.

ಸ್ವಾತಿ ನಕ್ಷತ್ರದ ಗುಣ ಇದು, ನೀರಿನಿಂದ ಮೊಸರು ಮಾಡಲು ಈ ನಕ್ಷತ್ರದಲ್ಲಿ ಮಳೆಯಾಗಬೇಕು
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 22, 2025 | 3:38 PM

Share

ಖಗೋಳದಲ್ಲಿ ಕ್ರಾಂತಿವೃತ್ತದ ಸಮೀಪದಲ್ಲಿ ಕುಂಕುಮದ ಬಣ್ಣದಲ್ಲಿ ಒಂದು ನಕ್ಷತ್ರ ಮಿನುಗುತ್ತಿದ್ದರೆ ಅದು ಸ್ವಾತೀ. ಇದು ನಕ್ಷತ್ರ ಚಕ್ರದ ಐದನೇ ನಕ್ಷತ್ರ. ವಾಯು ಇದರ ಅಧಿದೇವತೆ. ಇದು ಮಳೆ ನಕ್ಷತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದಾಗಿದೆ. ಸೂರ್ಯ ಈ ನಕ್ಷತ್ರವನ್ನು ಪ್ರವೇಶಿಸಿದಾಗ ಸುರಿದ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದರೆ ಅದೇ ಮುತ್ತಾಗುತ್ತದೆ ಎನ್ನುವುದು ಕವಿಸಮಯ. ಸ್ವಾತಿಯ ಮಳೆಯಿಂದ ವರ್ಷದ ಮೊಸರನ್ನು ಮಾಡುತ್ತಾರೆ. ಹೊಸ ಮೊಸರು ತಯಾರಾಗುವುದು ಸ್ವಾತಿ ಮಳೆಯ ನೀರಿನಿಂದ ಎಂದರೆ ಅಚ್ಚರಿಯಾದೀತು. ಎಷ್ಟೋ ಕಡೆಗಳಲ್ಲಿ ಈ ಕ್ರಮ ಇನ್ನೂ ಇದೆ. ಅಂತಹ ಶ್ರೇಷ್ಠ ನಕ್ಷತ್ರ ಇದು. ದೇವಗಣಕ್ಕೆ ಸೇರಿದ ನಕ್ಷತ್ರವಿದು. ರೂ ರೇ ರೋ ತಾ ನಾಮಾಕ್ಷರಗಳನ್ನು ಇಟ್ಟುಕೊಂಡಿರುವ ಇದು ಅಂತ್ಯನಾಡಿ. ಸ್ತ್ರೀಲಿಂಗ ಹಾಗೂ ಸ್ಥಿರನಕ್ಷತ್ರ.

ದಾನಿ :

ಈ ನಕ್ಷತ್ರದವರಲ್ಲಿ ದಾನದ ಸ್ವಾಭಾವವಿದ್ದು, ತಮ್ಮ ಕೈಲಾಯದ ಸಹಕಾರವನ್ನು ಮಾಡುವರು. ಏನಿದೆಯೋ ಅದನ್ನು ಇನ್ನೊಬ್ಬರಿಗೆ ನೀಡುವ ಗುಣ ಇವರಲ್ಲಿ ಇರುವುದು.

ವ್ಯಾಪಾರಿ :

ಇದು ತುಲಾ ರಾಶಿಯಲ್ಲಿ ಪೂರ್ಣವಾಗಿ ಬರುವ ನಕ್ಷತ್ರವಾಗಿದ್ದು ತುಲಾರಾಶಿಗೆ ಹೇಳಿದ ಎಲ್ಲ ಸ್ವಭಾವವೂ ಇರುವುದು. ಅದರಲ್ಲಿ ವ್ಯಾಪಾರವೂ ಒಂದಾಗಿದ್ದು, ಕ್ರಯ ವಿಕ್ರಯಗಳ ಬಗ್ಗೆ ವಿಶೇಷ ಮಾಹಿತಿ, ಆಲೋಚನೆ, ಯೋಜನೆಗಳನ್ನು ಹಾಕಿಕೊಳ್ಳುವರು. ಲಾಭ ನಷ್ಟಗಳ ಬಗೆಗೂ ವಿವೇಚನೆ ಇರಲಿದೆ.

ಕರುಣೆ :

ಕಠೋರತೆ ಇವರಲ್ಲಿ ಇರದು. ತುಂಬ ಮೃದು ಹೃದಯ ಇವರದ್ದು. ಅನ್ಯರ ಸಂಕಟಕ್ಕೆ ಕರಗುವರು, ಸಹಾಯವನ್ನೂ ನೀಡುವರು.

ಪ್ರಿಯವಾದ ಮಾತು :

ಇವರ ಮಾತು ಪ್ರಿಯವಾಗಲಿದೆ. ಅಂದರೆ ಹೇಳಬೇಕಾದ ರೀತಿಯಲ್ಲಿ ಹೇಳಿ, ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುತ್ತಾರೆ ಅಥವಾ ಆಗಬೇಕಾದ ಕೆಲಸವು ಆಗಲಿದೆ.

ಧರ್ಮದ ಆಶ್ರಯ :

ಧರ್ಮವನ್ನು ಬಿಟ್ಟು ಅಧರ್ಮದ ಕಾರ್ಯವನ್ನು ಮಾಡಲು ಮನಸ್ಸು ಒಪ್ಪದು. ಒಮ್ಮತದಿಂದ ಮಾಡಿದರೂ ಪಾಪಪ್ರಜ್ಞೆ ಕಾಡುವುದು.

ವಿದಗ್ಧ :

ಕಾರ್ಯದಲ್ಲಿ ಕುಶಲತೆಯೇ ವಿದಗ್ಧತೆ. ಎಂತಹ ಕೆಲಸವನ್ನು ಬುದ್ಧಿಶಕ್ತಿಯಿಂದ ಸ್ಮಾರ್ಟ್ ಆಗಿ ಮಾಡುವ ತಜ್ಞತೆ ಇರಲಿದೆ.

ಪ್ರಿಯವಲ್ಲಭ :

ಹೆಂಡತಿಗೆ ಪ್ರೀತಿಪಾತ್ರನಾಗಿ ಇರುವನು. ಸ್ವತಂತ್ರವಾಗಿ ಮಾಡಿದರೂ ಸಂಗಾತಿಗೆ ಪ್ರಿಯವಾದುದನ್ನೇ ಮಾಡಿ ಸಂತೋಷಪಡಿಸುವನು.

ದೇವಭಕ್ತ :

ದೇವರಲ್ಲಿ ನಂಬಿಕೆ, ಶ್ರದ್ಧೆ ಇರಲಿದೆ. ದೇವತೋಪಾಸನೆ, ದೇವಾಲಯ, ಪುಣ್ಯಸ್ಥಳಗಳ ಭೇಟಿ ಪ್ರಿಯವಾಗಲಿದೆ. ಧಾರ್ಮಿಕ ಕಾರ್ಯವನ್ನು ಹೆಚ್ಚು ಮಾಡುವಿರಿ ಅಥವಾ ಪಾಲ್ಗೊಳ್ಳುವಿರಿ.

ಹೀಗೆ ಅಪರೂಪದ ನಕ್ಷತ್ರ ಈ ಸ್ವಾತಿ. ಸೃಷ್ಟಿಯ ವಿಸ್ಮಯವನ್ನು ತೆರೆಯುತ್ತ ಹೋದರೆ, ಮುಗಿದ ಒರತೆ. ಒಂದನ್ನು ಹಿಡಿದರೆ, ಅದು ಆಳಕ್ಕೆ ಸೆಳೆದು ಮತ್ತೆಲ್ಲಿಗೋ ಕೊಂಡೊಯ್ಯುತ್ತದೆ. ಇಂತಹ ಖಗೋಲಕ್ಕೆ ಏನೆಂದರೂ ಕಡಿಮೆ.

ಲೋಹಿತ ಹೆಬ್ಬಾರ್ – 8762924271

ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ