Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 15ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 15ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 15ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Jan 15, 2025 | 1:50 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಏಕಾಏಕಿ ಹಣದ ಮೂಲಗಳು ತೆರೆದುಕೊಳ್ಳಲಿವೆ. ಯಾವುದಕ್ಕೂ ಇರಲಿ ಎಂಬಂತೆ ಸುಮ್ಮನೆ ಪ್ರಯತ್ನ ಮಾಡಿದ್ದವು ಕೂಡ ಹಣದ ಮೂಲವಾಗಿ ಬದಲಾಗುವುದನ್ನು ಕಣ್ಣೆದುರು ನೋಡಲಿದ್ದೀರಿ. ನಿಮ್ಮ ಮುಂದೆ ಎದುರಾಗುವ ಸವಾಲು ಏನೆಂದರೆ, ಯಾವ ವ್ಯಕ್ತಿಯ ಆಫರ್ ಗೆ ಆದ್ಯತೆ ನೀಡುತ್ತೀರಿ ಎಂಬುದಾಗಿರುತ್ತದೆ. ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಗಳು, ಟ್ಯಾಕ್ಸ್ ಕನ್ಸಲ್ಟೆಂಟ್ ಗಳು ಈ ಪೈಕಿ ನೀವು ಯಾವುದೇ ಆಗಿದ್ದರೂ ಅತ್ಯುತ್ತಮ ದಿನ ಇದಾಗುವ ಎಲ್ಲ ಸಾಧ್ಯತೆಗಳು ಇವೆ. ವೃತ್ತಿಪರವಾಗಿ ಏಣಿಯನ್ನು ಏರುವುದಕ್ಕೆ ಬೇಕಾದ ವೇದಿಕೆಯೊಂದು ಸಿದ್ಧವಾಗಲಿದೆ. ಮೇಲುನೋಟಕ್ಕೆ ತುಂಬ ದೊಡ್ಡ ಸವಾಲು ಇದೆ ಎಂದೆನಿಸಬಹುದು. ಆದರೆ ಧೈರ್ಯ ಮಾಡಿ ಮುನ್ನುಗ್ಗಿದರೆ ಮುಂದಿನ ಹಂತಕ್ಕೆ ತಲುಪಿಕೊಳ್ಳುವ ಅವಕಾಶವೊಂದು ತೆರೆದುಕೊಳ್ಳಲಿದೆ. ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಇವೆರಡು ಈ ದಿನ ಬಹಳ ಮುಖ್ಯವಾಗಲಿದೆ. ಪ್ರಭಾವಿಗಳ ಸಂಪರ್ಕ ಸಹ ಸಿಕ್ಕಿ, ವೃತ್ತಿಜೀವನದ ಮುಂದಿನ ಹಂತಕ್ಕೆ ತಲುಪುವ ದಿನ ಇದಾಗಿರುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸೋದರ- ಸೋದರಿಯರ ವಿಚಾರದಲ್ಲಿ ಅಸಮಾಧಾನ ಮೂಡಲಿದೆ. ನೀವು ಪಾರದರ್ಶಕವಾಗಿ ನಡೆದುಕೊಳ್ಳುತ್ತಿದ್ದೀರಿ. ಆದರೆ ಅವರು ನಿಮ್ಮಿಂದ ಹಲವು ವಿಚಾರಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗಲಿದೆ. ನೀವು ಇತ್ತೀಚೆಗಷ್ಟೇ ಖರೀದಿಸಿದ್ದ ಗ್ಯಾಜೆಟ್ ವೊಂದು ಕಾರ್ಯ ನಿರ್ವಹಿಸುವುದನ್ನೇ ನಿಲ್ಲಿಸಿ, ಆತಂಕಕ್ಕೆ ಗುರಿ ಆಗುವ ಸಾಧ್ಯತೆ ಇದೆ. ನಿಮಗೆ ಈ ಬಗ್ಗೆ ಅದನ್ನು ಖರೀದಿಸುವಾಗಲೇ ಗುಮಾನಿ ಮೂಡಿರುವ ಸಾಧ್ಯತೆ ಇದೆ. ನಿರ್ಲಕ್ಷ್ಯ ಮಾಡಿದ್ದರಿಂದ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಯಿತು ಎಂದು ಹಳಿದುಕೊಳ್ಳುವಂತೆ ಆಗುತ್ತದೆ. ಸಣ್ಣ- ಸಣ್ಣ ವಿಚಾರಗಳಿಗೆ ತುಂಬ ದೊಡ್ಡ ಮನುಷ್ಯರು ಎನಿಸಿಕೊಂಡವರು ತಮ್ಮ ಸಣ್ಣತನ ತೋರಿಸಲಿದ್ದಾರೆ. ಬಹಳ ನಂಬಿಕೆಯಿಟ್ಟು ಅಂತರಂಗದ ವಿಚಾರವನ್ನು ಸಹ ಯಾರ ಜೊತೆಗೆ ಹೇಳಿಕೊಂಡಿರುತ್ತೀರೋ ಅವರು ಅದನ್ನು ಎಲ್ಲರ ಬಳಿಯೂ ಹೇಳಿಕೊಂಡು ಬರುತ್ತಿದ್ದಾರೆ ಎಂಬುದು ನಿಮಗೆ ತಿಳಿದುಬರಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಯಾರು ನಿಮ್ಮ ಕೆಲಸ, ಸೌಂದರ್ಯ, ನಿರ್ಧಾರಗಳನ್ನು ಹೊಗಳುತ್ತಿದ್ದರೋ ಅವರೇ ಈ ದಿನ ನಿಮ್ಮನ್ನು ಕಂಡೂ ಕಾಣದಂತೆ ಮುಂದಕ್ಕೆ ಸಾಗಿಬಿಡಬಹುದು. ನೀವು ಸಾಮಾನ್ಯ ದಿನಗಳಲ್ಲಿ ಯಾರ ಮಾತಿಗೆ ಬಹಳ ಖುಷಿಯಿಂದ ಇರುತ್ತಿದ್ದರೋ ಅದು ಈ ದಿನ ಸಾಧ್ಯವಾಗುವುದಿಲ್ಲ. ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆ ವಹಿಸುವುದು ಮುಖ್ಯ. ಬಿದ್ದು ಸಣ್ಣ- ಪುಟ್ಟ ಗಾಯವಾದರೂ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಯಾರೋ ನಿಮ್ಮನ್ನು ಮೂದಲಿಸಿದರು ಅಥವಾ ಹಂಗಿಸಿದರು ಎಂಬ ಕಾರಣಕ್ಕೆ ಅವರಿಗೆ ಏನೋ ಸಾಬೀತು ಮಾಡಬೇಕು ಎಂದು ಹೊರಟುಬಿಡಬೇಡಿ. ಇನ್ನು ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸುವುದು ಕೂಡ ಸರಿಯಲ್ಲ. ನಿಮ್ಮಲ್ಲಿ ಕೆಲವರಿಗೆ ವೇರಿಕೋಸ್ ನಂಥ ಸಮಸ್ಯೆಗಳು ಉಲ್ಬಣಿಸಬಹುದು ಅಥವಾ ಕಾಣಿಸಬಹುದು. ಕೂಡಲೇ ವೈದ್ಯರ ಬಳಿ ಸೂಕ್ತ ಔಷಧೋಪಚಾರ ತೆಗೆದುಕೊಳ್ಳುವ ಕಡೆಗೆ ಗಮನ ನೀಡುವುದು ಕ್ಷೇಮ, ನೆನಪಿನಲ್ಲಿ ಇರಲಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಅದರಲ್ಲೂ ಯಾರು ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತೀರೋ ಅಂಥವರಿಗೆ ದೀರ್ಘಾವಧಿಯ ಕೆಲಸ- ಕಾರ್ಯಗಳು ದೊರೆಯಬಹುದು. ವಿದೇಶದಲ್ಲಿ ವ್ಯಾಸಂಗ ಮಾಡುವ ಸಲುವಾಗಿಯೋ ಅಥವಾ ಉದ್ಯೋಗಕ್ಕಾಗಿಯೋ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂತಾದಲ್ಲಿ ಇಷ್ಟು ಸಮಯ ನಿಮಗೆ ಕಾಡುತ್ತಿದ್ದ ಅಡೆತಡೆಗಳು ನಿವಾರಣೆ ಆಗಲಿವೆ. ಸೋದರತ್ತೆ ಅಥವಾ ಸೋದರಮಾವ ನಿಮ್ಮ ಸಹಾಯಕ್ಕೆ ಬರುವ ಅವಕಾಶಗಳು ಹೆಚ್ಚಿವೆ. ನಿಮಗೇನಾದರೂ ವ್ಯಾಪಾರ- ವ್ಯವಹಾರ ಆರಂಭಿಸುವ ಯೋಜನೆಗಳು ಇದ್ದಲ್ಲಿ ಹಣಕಾಸಿನ ಹೊಂದಾಣಿಕೆ ಪ್ರಯತ್ನಗಳು ಸಫಲವಾಗುವ ಸಾಧ್ಯತೆ ಹೆಚ್ಚಿದೆ. ಎನ್ ಜಿಒಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸದ ನಿಮಿತ್ತ ದೂರಪ್ರಯಾಣ ಮಾಡಬೇಕಾಗಬಹುದು. ಇನ್ನು ಯಾವ ಉದ್ದೇಶಕ್ಕೆ ತೆರಳಿರುತ್ತೀರೋ ಅದು ಸಂಪೂರ್ಣವಾಗಿ ಯಶಸ್ವಿ ಆಗಲಿದೆ ಎಂಬುದು ಶುಭ ವಿಚಾರ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಅವರ ಕೆಲಸಕ್ಕಾಗಿ ನೀವು ಜೊತೆಗೆ ಹೋಗುವ ಸನ್ನಿವೇಶ ಎದುರಾಗಲಿದೆ. ಹಲವು ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ ಸಮಾಧಾನವೊಂದು ನಿಮಗೆ ದೊರೆಯಲಿದೆ. ಹಣದ ಹೂಡಿಕೆ, ಉಳಿತಾಯ ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿದ್ದೀರಿ. ಮನೆಯ ಮಟ್ಟಿಗೆ ನಿಮ್ಮ ಆಲೋಚನೆಗಳು ಫಲಿಸುತ್ತವೆ ಎಂಬ ಭಾವನೆ ನಿಮ್ಮದಾಗಿದಲ್ಲಿ ಅದನ್ನು ಮೀರಿದ ವ್ಯಾಪ್ತಿ ನಿಮಗಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ. ವಿವಾಹಿತರಿಗೆ ಸಂಗಾತಿ ಜೊತೆಗೆ ಸ್ವಲ್ಪ ಮಟ್ಟಿಗೆ ಅಭಿಪ್ರಾಯ ಭೇದಗಳು ತಲೆದೋರಬಹುದು. ಅದರಲ್ಲೂ ನಿಮ್ಮ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿಯಿಂದ ಈ ಹಿಂದೆ ಯಾವಾಗಲೋ ಆಗಿದ್ದ ಸಮಸ್ಯೆಗಳನ್ನು ಈಗ ಎತ್ತಾಡಬಹುದು. ಆದ್ದರಿಂದ ಸಣ್ಣ- ಪುಟ್ಟ ವಿಚಾರಗಳಿಗೆ ಹೆಚ್ಚಿಗೆ ಗಮನ ನೀಡುವುದಕ್ಕೆ ಹೋಗಬೇಡಿ. ಆಹಾರ- ನೀರು ಸೇವನೆ ಮಾಡುವಾಗ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ಕೊಡಿ, ಇಲ್ಲದಿದ್ದರೆ ದಿನದ ಕೊನೆಗೆ ಹೊಟ್ಟೆ ಸಮಸ್ಯೆ ಕಾಡಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮಗೆ ಬಂದಿದ್ದ ಅವಕಾಶವೊಂದು ಅಥವಾ ಈಗಾಗಲೇ ಕೆಲಸ ಅರಂಭಿಸಿಯಾಗಿದೆ ಎಂಬುದೊಂದನ್ನು ಮಧ್ಯದಲ್ಲಿ ನಿಲ್ಲಿಸಬೇಕಾದ ಸನ್ನಿವೇಶ ಎದುರಾಗಲಿದೆ. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ಕಮಿಟ್ ಆಗಿದ್ದಲ್ಲಿ, ಅಂದರೆ ಮಾತು ನೀಡಿದ್ದಲ್ಲಿ ಗಾಂಭೀರ್ಯ ಕಾಪಾಡಿಕೊಳ್ಳಿ. ಹೇಗೋ ಸಂಭಾಳಿಸುತ್ತೀನಿ ಎಂಬ ಧೋರಣೆ ಬೇಡ. ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ಕ್ರೀಡೆಯೋ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳೋ ಅಥವಾ ಇವುಗಳ ಸ್ಪರ್ಧೆಯೋ ಇಂಥವುಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಅಂತಾದಲ್ಲಿ ಆಸಕ್ತಿ ವಹಿಸಿ ಪಾಲ್ಗೊಳ್ಳಿ. ಇದರಿಂದ ಭವಿಷ್ಯದಲ್ಲಿ ನಿಮಗೆ ದೊಡ್ಡ ಅನುಕೂಲ ಆಗುವಂಥ ಯೋಗ ಇದೆ. ಖಾದಿ ವಸ್ತ್ರಗಳ ಮಾರಾಟ ಮಾಡುವುದನ್ನೇ ವ್ಯವಹಾರವಾಗಿ ಮಾಡುತ್ತಿರುವವರಿಗೆ ಆ ವ್ಯಾಪಾರದ ಪ್ರಮಾಣ ಕಡಿಮೆ ಮಾಡಬೇಕಾಗಬಹುದು ಅಥವಾ ಸಂಪೂರ್ಣ ನಿಲ್ಲಿಸಿಬಿಡೋಣ ಎಂದೆನಿಸಲಿದೆ. ತೀರ್ಮಾನ ನಿಮ್ಮದಿರಲಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಪ್ರಾಪಂಚಿಕ ವಿಚಾರಗಳ ಬಗ್ಗೆ ಒಂದು ರೀತಿಯ ನಿರಾಸಕ್ತಿ ನಿಮ್ಮನ್ನು ಕಾಡಬಹುದು. ಯಾರಿಗೋ ಮುಖ್ಯ ಎಂದೆನಿಸಿದ್ದು ನನಗೂ ಮುಖ್ಯ ವಿಷಯ ಏಕಾಗಿರಬೇಕು ಎಂಬಂಥ ಧೋರಣೆ ಈ ದಿನ ಇರುತ್ತದೆ. ವೃತ್ತಿಯೋ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಂಗತಿಗಳ ಚರ್ಚೆಯೋ ಇದ್ದಲ್ಲಿ ಅನಿಸಿದ್ದನ್ನೆಲ್ಲ ಹೇಳಿಬಿಡುತ್ತೇನೆ ಎಂಬ ಮನಸ್ಥಿತಿಯಿಂದ ಆಚೆ ಬನ್ನಿ. ಈಗ ನಿಮಗೆ ಅನಿಸುತ್ತಿರುವುದು ತಾತ್ಕಾಲಿಕ ಮಾತ್ರ. ಹಾಗೂ ಅದು ಸಾರ್ವಕಾಲಿಕ ನಿಜವೋ ಅಲ್ಲವೋ ಎಂಬುದು ಸಹ ಖಾತ್ರಿ ಇಲ್ಲ ಅನ್ನೋದು ಗಮನದಲ್ಲಿ ಇರಿಸಿಕೊಳ್ಳಿ. ಇನ್ನು ನಿಮ್ಮಲ್ಲಿ ಕೆಲವರು ಡಿಷ್ ವಾಷರ್, ಮನೆಯನ್ನು ಕಸ ಗುಡಿಸುವಂಥ ರೋಬೋಟ್ ಅಥವಾ ಹೀಗೆ ಮನೆಯ ಸ್ವಚ್ಛತೆಗಾಗಿಯೇ ಯಂತ್ರಗಳನ್ನು ಖರೀದಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನೂ ಕೆಲವರು ಇಎಂಐ ಮಾಡಿಸಿ, ಖರೀದಿಸಿಯೇ ಬಿಡುವ ಸಾಧ್ಯತೆ ಸಹ ಇದೆ. ಸ್ನೇಹಿತರು ಯಾವುದಾದರೂ ಆಫರ್ ಗಳನ್ನು ತಂದರೆ ಏಕಾಏಕಿ ಒಪ್ಪಿಕೊಂಡು ಬಿಡಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಷೇರು, ಮ್ಯೂಚುವಲ್ ಫಂಡ್, ಡಿಬೆಂಚರ್, ಪರ್ಪೆಚುವಲ್ ಬಾಂಡ್, ಗೋಲ್ಡ್ ಹೀಗೆ ಯಾವುದಾದರೊಂದರಲ್ಲಿ ಹೂಡಿಕೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೀರಿ. ಅಥವಾ ನಿಮಗೆ ಆಪ್ತರಾದವರು ಹಿಂತಿರುಗಿಸಬೇಕಾದ ಹಣದ ಬದಲಿಗೆ ಇಂಥದ್ದು ಯಾವುದಾದರೂ ಒಂದರ ಮೇಲೆ ನಿಮ್ಮ ಹೆಸರಲ್ಲಿ ಹಣ ಹೂಡಿಕೆ ಮಾಡಬಹುದು. ಇನ್ನು ನಿಮ್ಮಲ್ಲಿ ಕೆಲವರು ವಿಲಾಸಿ ಕಾರು ಖರೀದಿಗೆ ಮನಸ್ಸು ಮಾಡುವ ಯೋಗ ಇದೆ. ಬೇರೆ ಯಾವುದೋ ವಿಚಾರ ಮಾತನಾಡಲು ಅಂತ ಹೋದವರೋ ಅಥವಾ ವ್ಯವಹಾರದ ಸಲುವಾಗಿ ತೆರಳಿದವರೋ ದಿಢೀರನೆ ಕಾರು ಖರೀದಿ ಮಾಡಬೇಕು ಎಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಸಾಮಾಜಿಕ ಸ್ಥಾನಮಾನದಲ್ಲಿ ಬದಲಾವಣೆ ಮಾಡಬಹುದಾದ ಒಂದಾದರೂ ಬದಲಾವಣೆಯನ್ನು ಈ ದಿನ ನೀವು ನಿರೀಕ್ಷೆ ಮಾಡಬಹುದು. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಶುಭ ಸುದ್ದಿ ಕೇಳುವ ಯೋಗ ಇದೆ. ಭೂವರಾಹ ದೇವರನ್ನು ಸ್ಮರಣೆ ಮಾಡಿದಲ್ಲಿ ಉತ್ತಮ ಫಲ ಹೆಚ್ಚಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಆಲೋಚನೆಗೆ ಹೊಂದುವಂಥ ಕೆಲಸಗಾರರು ಅಥವಾ ಪಾರ್ಟನರ್ ಗಳನ್ನು ನೀವೇನಾದರೂ ಹುಡುಕುತ್ತಿದ್ದೀರಿ ಎಂದಾದಲ್ಲಿ ಈ ದಿನ ನಿಮಗೆ ಸರಿಯಾಗಿ ಹೊಂದಿಕೊಳ್ಳುವವರು ಸಿಗಲಿದ್ದಾರೆ. ನನಗೆ ಇನ್ನು ಬೇಡ ಅಂತ ಅಂದುಕೊಂಡರೂ ಮುಖ್ಯವಾದ ಪ್ರಾಜೆಕ್ಟ್ ವೊಂದನ್ನು ಮುನ್ನಡೆಸುವಂತೆ ನಿಮಗೆ ಸೂಚಿಸುವ ಅಥವಾ ಕೇಳಿಕೊಳ್ಳುವ ಸಾಧ್ಯತೆಗಳಿವೆ. ಸ್ನೇಹಿತರು ಅಥವಾ ಸಂಬಂಧಿಕರು ಹೇಳಿದರು ಎಂಬ ಕಾರಣಕ್ಕೆ ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಗಳ ಹುಡುಕಾಟದಲ್ಲಿ ಇರುವವರಿಗೆ ಕೊನೆಗೆ ತಾವೇ ಒಂದನ್ನು ಮೆಚ್ಚಿ, ಅದನ್ನು ಖರೀದಿಸುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರಿಗೆ ವಿಟಮಿನ್- ಡಿ ಕೊರತೆ ಕಾಡುತ್ತಿದೆ ಎಂಬ ಸಂಗತಿ ತಿಳಿದುಬರಲಿದೆ. ಇದಕ್ಕೆ ಸಂಬಂಧಿಸಿದ ವೈದ್ಯರನ್ನು ಭೇಟಿ ಆಗುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಯಾರು ಸೂಕ್ತ ಜೀವನಶೈಲಿಯನ್ನು ಅನುಸರಿಸುತ್ತಿಲ್ಲವೋ ಅಂಥವರು ಸಕಾರಾತ್ಮಕವಾಗಿ ಬದಲಾಗಲು ತೀರ್ಮಾನ ಮಾಡುವಿರಿ.

ಲೇಖನ- ಎನ್‌.ಕೆ.ಸ್ವಾತಿ

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ