Aries Man : ಮೇಷರಾಶಿಯ ಪುರುಷರು ಮಗುವಿನಂತೆ ಕುತೂಹಲವುಳ್ಳವರು
Aries Men Personality : ತನ್ನ ಆಪ್ತರನ್ನು ಮುಂದೆ ಸಾಗಲು ಬಿಟ್ಟು ವಾಸ್ತವದಲ್ಲಿ ತಾನು ನಿಸ್ವಾರ್ಥಿಯಾಗಿ ಉಳಿಯುವ ನಾಯಕತ್ವ ಗುಣವುಳ್ಳವರು. ಲೈಂಗಿಕತೆಯಲ್ಲಿ ತಮ್ಮದೇ ಮೇಲುಗೈ ಸಾಧಿಸಿ, ಸಂಗಾತಿಗೆ ಮರೆಯಲಾಗದಂಥ ಅನುಭವವನ್ನು ಕೊಡುವವರು.
Aries Man : ಪ್ರತಿಯೊಂದು ರಾಶಿಗೂ ಅದರದೇ ಆದ ಗುಣ, ಸ್ವಭಾವ ಮತ್ತು ವ್ಯಕ್ತಿತ್ವ ಇರುತ್ತದೆ. ಇಂಗ್ಲಿಷ್ ಕ್ಯಾಲೆಂಡರಿನ ಪ್ರಕಾರ ಮಾರ್ಚ್ 20ರಿಂದ ಏಪ್ರಿಲ್ 20ರ ನಡುವೆ ಜನಿಸಿದವರದು ಮೇಷರಾಶಿಯವರು. ಮೇಷ ರಾಶಿಯ ಪುರುಷರ ವ್ಯಕ್ತಿತ್ವ ಹೇಗಿರುತ್ತದೆ? ಅವರ ಬಗೆಗಿನ ಸತ್ಯಗಳೇನು? ಎನ್ನುವುದನ್ನು ತಿಳಿದುಕೊಳ್ಳಿ. ಮೇಷರಾಶಿಯವರು ನಾಯಕತ್ವಗುಣ ಉಳ್ಳವರು. ಮಹತ್ವಾಕಾಂಕ್ಷಿಗಳು. ಸತತವಾಗಿ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುವವರು. ಪ್ರತಿಯೊಂದರಲ್ಲೂ ಮಗುವಿನಂತೆ ಕುತೂಹಲವುಳ್ಳವರು. ಶಕ್ತಿಶಾಲಿ, ಧೈರ್ಯಶಾಲಿ ಮತ್ತು ಸಾಹಸದ ಹಾದಿಯಲ್ಲಿ ಸಾಗಲು ಉತ್ಸುಕರಾಗಿರುವವನು. ಹಾಗೆಯೇ ಆಶಾವಾದಿ ಕೂಡ. ತನ್ನ ಆಪ್ತರ ಬಗ್ಗೆ ಬಹುವಾಗಿ ಕಾಳಜಿ ವಹಿಸುವವರು. ಅವರನ್ನು ಮುಂದೆ ಸಾಗಲು ಬಿಟ್ಟು ವಾಸ್ತವದಲ್ಲಿ ತಾನು ನಿಸ್ವಾರ್ಥಿಯಾಗಿ ಉಳಿಯಲು ಬಯಸುವವರು.
ತನ್ನ ಸಂಗಾತಿಯನ್ನು ಪೂರ್ಣಪ್ರಮಾಣದಲ್ಲಿ ಶೃಂಗಾರಭಾವದಲ್ಲಿ ತೋಯಿಸಲು ಸಾಧ್ಯವಾಗದಿದ್ದರೂ ಸತತವಾಗಿ ಉತ್ಸಾಹದಿಂದ ಸಂಬಂಧವನ್ನು ಪೋಷಿಸುತ್ತಾರೆ. ಈ ರಾಶಿಯ ಪುರುಷನೊಂದಿಗೆ ಪ್ರೇಮಸಾಂಗತ್ಯ ಬಯಸುವವರು ತಿಳಿದುಕೊಳ್ಳಬಹುದಾದ ಬಹುಮುಖ್ಯ ಅಂಶವೆಂದರೆ, ಇವರ ದೃಢಚಿತ್ತದ ಬಗ್ಗೆ. ತಮ್ಮ ನಿಜವಾದ ಭಾವನೆಗಳನ್ನು ಮರೆಮಾಚಲಾರರು. ತಮ್ಮ ಪ್ರಣಯಾಸಕ್ತಿಯನ್ನು ನಿರ್ಭಿಡೆಯಿಂದ ವ್ಯಕ್ತಪಡಿಸುವಂಥವರು. ಹಾಗೆಯೇ ಸಂಬಂಧದಲ್ಲಿ ಪ್ರಯತ್ನಪೂರ್ವಕವಾಗಿ ನಿರಂತರತೆ ಕಾಪಾಡಿಕೊಳ್ಳುವವರು ಇವರು.
ಆದರೆ, ಪ್ರೀತಿಯಲ್ಲಿ ಬಿದ್ದಾಗ ಈ ವ್ಯಕ್ತಿ ಸ್ವಾರ್ಥಿಯೇ. ತನ್ನ ಸಂಗಾತಿಯಿಂದ ಸಂಪೂರ್ಣ ಭಕ್ತಿಯನ್ನು ನಿರೀಕ್ಷಿಸುತ್ತಾರೆ. ತಮ್ಮ ದಾರಿಯಲ್ಲಿ ಸಾಗದಿದ್ದರೆ ಖಂಡಿತ ಕೆರಳುತ್ತಾರೆ. ಆದರೆ ಯಾರೇನೆಂದರೂ ತಮ್ಮ ತಲೆ ಮಾತ್ರ ಕೆಡಿಸಿಕೊಳ್ಳುವುದಿಲ್ಲ. ಪ್ರೀತಿ-ಸಂಬಂಧದ ಹೊಂದಾಣಿಕೆ ವಿಷಯವಾಗಿ ಸಿಂಹ ಮತ್ತು ಧನು ರಾಶಿಯವರು ಇವರಿಗೆ ಚೆನ್ನಾಗಿ ಜೊತೆಯಾಗುತ್ತಾರೆ. ಪರಸ್ಪರ ಉತ್ಸಾಹ, ಸಾಹಸ ಮೇಳೈಸಿರುತ್ತದೆ. ಆದರೆ ಮಿಥುನ ಮತ್ತು ತುಲಾ ರಾಶಿಯವರೊಂದಿಗೆ ಕೂಡ ಇವರ ಹೊಂದಾಣಿಕೆ ಚೆನ್ನಾಗಿರುತ್ತದೆ. ಈ ಎರಡೂ ರಾಶಿಗಳು ಇವರಲ್ಲಿ ಭಾವೋದ್ರೇಕವನ್ನು ಉಂಟುಮಾಡುತ್ತವೆ ಮತ್ತು ಕುತೂಹಲವನ್ನು ಹೊತ್ತು ತರುತ್ತಿರುತ್ತವೆ. ಪ್ರಣಯ ಮತ್ತು ಲೈಂಗಿಕತೆಯಲ್ಲಿ ಸಂಗಾತಿಯೊಂದಿಗೆ ಆತ್ಮವಿಶ್ವಾಸದಿಂದ ಒಳಗೊಳ್ಳುತ್ತಾರೆ. ಭಾವನಾತ್ಮಕ ಪ್ರಚೋದನೆಗಿಂತ ದೈಹಿಕ ಪ್ರಚೋದನೆಗಳಿಗೆ ಹೆಚ್ಚು ಒತ್ತು ನೀಡುತ್ತಾರೆ.
ಇವರಲ್ಲಿ ಅಪರಿಮಿತ ಕಾಮಾಸಕ್ತಿ. ತಮಗೆ ಏನು ಬೇಕೆಂದು ತಮ್ಮ ಸಂಗಾತಿಗೆ ಕೇಳಿ ಪಡೆಯುತ್ತಾರೆ. ಲೈಂಗಿಕತೆಯಲ್ಲಿ ತಮ್ಮದೇ ಮೇಲುಗೈ ಆಗಬೇಕೆಂದು ಬಯಸುತ್ತಾರೆ. ಆದರೆ ತಮ್ಮ ಸಂಗಾತಿಗೆ ಮರೆಯಲಾಗದಂಥ ಅನುಭವವನ್ನೂ ಕೊಡುತ್ತಾರೆ.
ಮೇಷ ರಾಶಿಯ ಪುರುಷ ಸಂಕೀರ್ಣ, ಸಹಜ, ಬಹಿರ್ಮುಖಿ, ಭಾವೋದ್ರಿಕ್ತತೆಯಿಂದ ಕೂಡಿದ ಸುಂದರ ಸ್ವಭಾವವನ್ನು ಹೊಂದಿರುತ್ತಾರೆ. ತಮ್ಮ ಗುರಿಯ ದಾರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಏನು ಬೇಕೋ ಆ ಎಲ್ಲವನ್ನೂ ಧೈರ್ಯದಿಂದ ನಿಭಾಯಿಸುತ್ತಾರೆ. ತಾಳ್ಮೆ, ಪ್ರಾಮಾಣಿಕತೆಯೇ ಇವರನ್ನು ನಾಯಕತ್ವದ ಪಟ್ಟಕ್ಕೆ ಏರಿಸುತ್ತದೆ. ನಿಜವಾದ ನಾಯಕ ಎನ್ನುವುದುನ್ನು ಸಮಯವೇ ತೋರಿಸುತ್ತದೆ. ಅಪರಿಚಿತರೊಂದಿಗೆ ವ್ಯವಹರಿಸಲು ಹೆದರುವುದಿಲ್ಲ. ಆದರೆ, ಆಕ್ರಮಣಕಾರಿ ಮತ್ತು ಅನಿಶ್ಚಿತ ಸ್ವಭಾವವೂ ಇವರಲ್ಲಿರುತ್ತದೆ.
ಮಹತ್ವಾಕಾಂಕ್ಷೆ ಮತ್ತು ಕಠಿಣ ಪರಿಶ್ರಮದ ಮನೋಭಾವವೇ ಇವರನ್ನು ಮುನ್ನಡೆಸುತ್ತದೆ. ಹಾಗಾಗಿ ಗುರಿಸಾಧನೆಗಾಗಿ ಇವರ ಮನಸ್ಸು ಸುಲಭವಾಗಿ ಅನುವು ಮಾಡಿಕೊಡುತ್ತದೆ. ಈ ನಡೆ ಇತರರಿಗೆ ಸ್ಪೂರ್ತಿದಾಯಕವಾಗಿರುತ್ತದೆ. ವೃತ್ತಿವಿಷಯವಾಗಿ ಉತ್ತುಂಗದಲ್ಲಿ ಏರಲು ಇದು ಕಾರಣವೂ ಕೂಡ. ಇನ್ನು ಮೋಜು, ಮಸ್ತಿಯ ಬಗ್ಗೆ ಆಸಕ್ತರಾದಾಗ ಹೊಸ ಸ್ಥಳಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಸಮರಕಲೆ, ಹೈಕಿಂಗ್ನಂತಹ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ಸಾಹ ತೋರುತ್ತಾರೆ. ಜೊತೆಗೆ ಅಪಾಯ ಎದುರಿಸಲು ಸಿದ್ಧನಾಗಿರುತ್ತಾರೆ.
ಇದನ್ನೂ ಓದಿ : ಮೇಷರಾಶಿಯ ಮಹಿಳೆಯರು ಈ ರಾಶಿಗಳ ಪುರುಷರೊಂದಿಗೆ ಪ್ರೀತಿಸಂಬಂಧ ಹೊಂದಬಹುದು
ಶೀಘ್ರಕೋಪಿಯೂ ಮೊಂಡುಸ್ವಭಾವವೂ ಇವರದಾಗಿರುತ್ತದೆ. ಎಷ್ಟೋ ಸಲ ಈ ಕಾರಣಕ್ಕಾಗಿ ಇತರರು ಇವರನ್ನು ಸ್ವಾರ್ಥಿ ಎಂದುಕೊಳ್ಳುವುದುಂಟು. ಇವರ ಕನಸುಗಳು ದೊಡ್ಡ ಮಟ್ಟದಲ್ಲಿರುತ್ತವೆ. ಕಠಿಣ ಪರಿಶ್ರಮ ಹಾಕಿದಾಗ ನಿರೀಕ್ಷೆಯಂತೆ ಫಲ ಬಾರದೇ ಇದ್ದಾಗ ನಿರಾಶೆಯಾಗುತ್ತಾರೆ. ತನ್ನ ಶಕ್ತಿಯ ಬಗ್ಗೆ ಅನುಮಾನಿಸುತ್ತಾರೆ. ಆದರೆ ಒಬ್ಬ ನಾಯಕರಾಗಿ ಜವಾಬ್ದಾರಿಯನ್ನು ತಾವೇ ಇಡಿಯಾಗಿ ಹೊರದೆ ಇತರರಿಗೂ ಅದನ್ನು ಹಂಚಬೇಕು ಎನ್ನುವುದನ್ನು ಇವರು ನೆನಪಿನಲ್ಲಿಡಬೇಕು.
ಇನ್ನು ಕೌಟುಂಬಿಕ ವಿಷಯಕ್ಕೆ ಬಂದರೆ, ತನ್ನ ಮಕ್ಕಳಿಂದಲೂ ತನ್ನ ಗುಣವನ್ನೇ ನಿರೀಕ್ಷಿಸುತ್ತಾರೆ. ತನ್ನಂತೆಯೇ ತನ್ನ ಕುಟುಂಬದ ವ್ಯಕ್ತಿಗಳು ಸ್ವತಂತ್ರರೂ, ಸಮರ್ಥರೂ ಆಗಬೇಕೆಂದು ಬಯಸುತ್ತಾರೆ. ಇದು ಉಳಿದವರಿಗೆ ನಿಯಂತ್ರಣ ಸಾಧಿಸುತ್ತಿದ್ದಾರೇನೋ ಅನ್ನಿಸುವ ಸಾಧ್ಯತೆ ಇರುತ್ತದೆ. ಇದನ್ನು ಸಮತೋಲನಗೊಳಿಸಲು ಇವರ ಸಂಗಾತಿ ಸಹಕರಿಸಬೇಕಾಗುತ್ತದೆ.
ಇನ್ನು ಸ್ನೇಹದ ವಿಷಯದಲ್ಲಿ ಈ ರಾಶಿಯ ಪುರುಷ ನಿಷ್ಠಾವಂತ. ತನ್ನ ಸಾಹಸ ಕಾರ್ಯಗಳಲ್ಲಿ ಸ್ನೇಹಿತರನ್ನು ಒಳಗೊಳ್ಳುವಂತೆ ಮಾಡುತ್ತಾರೆ. ಆಕರ್ಷಕ ವ್ಯಕ್ತಿತ್ವ ಹೊಂದಿರುವುದರಿಂದ ಸುಲಭವಾಗಿ ಯಾರೊಂದಿಗೂ ಸ್ನೇಹ ಬೆಳೆಸಬಹುದಾಗಿದೆ. ಆದರೆ ಸೂಕ್ಷ್ಮ ಸ್ವಭಾವದವರಾದ ಇವನು ಬಲುಬೇಗನೆ ಬೇಸರಗೊಳ್ಳುತ್ತಾನೆ. ಹಾಗಾಗಿ ಸಾಕಷ್ಟು ಸ್ನೇಹಿತರಿದ್ದರೂ ಕೆಲವೇ ಕೆಲವರೊಂದಿಗೆ ದೀರ್ಘಕಾಲದ ಸ್ನೇಹವನ್ನು ಹೊಂದಿರುತ್ತಾರೆ. ಅಷ್ಟೇ ಉದಾರವಾದಿಯೂ ಆಗಿರುತ್ತಾರೆ, ಸಂವೇದನಾಶೀಲರೂ. ಆದರೆ ಭಾವನಾತ್ಮಕ ವಿಷಯವಾಗಿ ಕೆಲವೊಮ್ಮೆ ನಿಮ್ಮ ಮನಸ್ಸನ್ನು ನೋಯಿಸುತ್ತಾರೆ.
(ಇಂಗ್ಲಿಷ್ ಕ್ಯಾಲೆಂಡರ್ ರಾಶಿಭವಿಷ್ಯ ಆಧರಿಸಿದ ಈ ವಿಷಯವನ್ನು ಅಂತರ್ಜಾಲದಿಂದ ಪಡೆಯಲಾಗಿದೆ. ಮಾಹಿತಿಯ ಸತ್ಯಾಸತ್ಯತೆಗೆ ಟಿವಿ9 ಕನ್ನಡ ಡಿಜಿಟಲ್ ಜವಾಬ್ದಾರಿಯಲ್ಲ.)
ಮತ್ತಷ್ಟು ಇಂಥ ವಿಷಯಗಳ ಓದಿಗೆ ಕ್ಲಿಕ್ ಮಾಡಿ
Published On - 5:48 pm, Fri, 23 September 22