AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂಭ ರಾಶಿಯಲ್ಲಿ ಶುಕ್ರ–ರಾಹು ಸಂಯೋಗ.. ಯಾರಿಗೆಲ್ಲ ಏನೆಲ್ಲ ಲಾಭ?

ಕುಂಭ ರಾಶಿಯಲ್ಲಿ ಶುಕ್ರ-ರಾಹು ಸಂಯೋಗವು ಫೆಬ್ರವರಿ 6ರಿಂದ ಮಾರ್ಚ್ 2ರವರೆಗೆ ವಿಶೇಷ ಯೋಗವನ್ನು ಸೃಷ್ಟಿಸುತ್ತದೆ. ಇದು ಪ್ರೀತಿ, ಹಣಕಾಸು ಮತ್ತು ಸಂಬಂಧಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆಸೆಗಳನ್ನು ಹೆಚ್ಚಿಸಿ, ಸಾಂಪ್ರದಾಯಿಕ ಮೌಲ್ಯಗಳನ್ನು ಮೀರಿ ಹೊಸ ದಿಕ್ಕನ್ನು ನೀಡುತ್ತದೆ. ಪ್ರತಿಯೊಂದು ರಾಶಿಯ ಮೇಲೂ ಇದರ ಪರಿಣಾಮ ಭಿನ್ನವಾಗಿದ್ದು, ವಿವೇಕ ಮತ್ತು ಶಿಸ್ತು ಅತಿರೇಕವನ್ನು ತಪ್ಪಿಸಲು ಸಹಕಾರಿ. ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಕುಂಭ ರಾಶಿಯಲ್ಲಿ ಶುಕ್ರ–ರಾಹು ಸಂಯೋಗ.. ಯಾರಿಗೆಲ್ಲ ಏನೆಲ್ಲ ಲಾಭ?
ಸಾಂದರ್ಭಿಕ ಚಿತ್ರ Image Credit source: Tv9 kannada
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 04, 2026 | 6:40 PM

Share

ಕುಂಭ ರಾಶಿಯಲ್ಲಿ ಶುಕ್ರ ಮತ್ತು ರಾಹುಗಳ ಸಂಯೋಗವು ಜ್ಯೋತಿಷ್ಯದಲ್ಲಿ ಬಹಳ ವಿಶಿಷ್ಟವಾದ ಯೋಗ. ಈ ಯೋಗ ಫೆಬ್ರವರಿ 6ರಿಂದ ಮಾರ್ಚ್ 02 ವರೆಗೆ ಇರಲಿದೆ. ಕುಂಭವು ಶನಿಯ ರಾಶಿಯಾಗಿ ವಾಯು ತತ್ತ್ವದ ಸೂಚಿಸುತ್ತಿದ್ದು ಸಮಾಜ, ಸಮೂಹ ಚಿಂತನೆ, ವಿಜ್ಞಾನ, ಹೊಸ ಆಲೋಚನೆಗಳು ಹಾಗೂ ಭವಿಷ್ಯದ ದಿಕ್ಕನ್ನು ತೋರಿಸುತ್ತದೆ.

ಶುಕ್ರನು ಭೋಗ, ಪ್ರೀತಿ, ಸೌಂದರ್ಯ, ಹಣಕಾಸು ಮತ್ತು ಸಂಬಂಧಗಳ ಕಾರಕ. ರಾಹು ಆಸೆ, ಮೋಹ, ಮಿತಿಲಂಘನೆ, ವಿದೇಶಿ ಸಂಸ್ಕೃತಿ ಮತ್ತು ಅಸಾಧಾರಣತೆಯನ್ನು ಪ್ರತಿನಿಧಿಸುತ್ತಾನೆ. ಈ ಇಬ್ಬರೂ ಕುಂಭದಲ್ಲಿ ಸೇರಿದಾಗ ಮಾನವನ ಆಸೆ ಮತ್ತು ಬುದ್ಧಿ ಹೊಸ ದಿಕ್ಕಿನಲ್ಲಿ ಸಾಗುವ ಪ್ರವೃತ್ತಿ ಹೆಚ್ಚುತ್ತದೆ.

ಈ ಯೋಗದ ಪ್ರಮುಖ ಲಕ್ಷಣವೆಂದರೆ ಸಾಂಪ್ರದಾಯಿಕ ಮೌಲ್ಯಗಳನ್ನು ಮೀರಿ ಆಧುನಿಕ, ವಿಭಿನ್ನ ಹಾಗೂ ಪ್ರಯೋಗಾತ್ಮಕ ಬದುಕಿನತ್ತ ಒಲವು. ಪ್ರೀತಿ ಮತ್ತು ಹಣ ಎರಡೂ ಕ್ಷೇತ್ರಗಳಲ್ಲಿ ಅತಿಯಾದ ಆಕರ್ಷಣೆ, ನಿರೀಕ್ಷೆ ಹಾಗೂ ಅಸಮಾಧಾನ ಒಟ್ಟಿಗೆ ಕಾಣಿಸಿಕೊಳ್ಳಬಹುದು.

ಕುಂಭ ರಾಶಿ:

ಈ ಸಂಯೋಗವು ಸ್ವರಾಶಿಯಲ್ಲಿ ನಡೆಯುವುದರಿಂದ ಪರಿಣಾಮ ಅತ್ಯಂತ ತೀವ್ರ. ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳುವ ಅವಕಾಶ, ಹೊಸ ಸ್ನೇಹ ವಲಯ, ವಿಭಿನ್ನ ಪ್ರೇಮ ಅನುಭವಗಳು ಸಾಧ್ಯ. ಆದರೆ ರಾಹುವಿನ ಪ್ರಭಾವದಿಂದ ಸಂಬಂಧಗಳಲ್ಲಿ ನೈತಿಕ ಮಿತಿ ತಪ್ಪಿದರೆ ಅಪವಾದ, ಗೊಂದಲ ಹಾಗೂ ಮನಸ್ಸಿನ ಅಶಾಂತಿ ಎದುರಾಗಬಹುದು. ಹಣದ ಹರಿವು ಹೆಚ್ಚಿದರೂ ಅತಿಯಾದ ಭೋಗಾಸಕ್ತಿ ತೊಂದರೆ ಕೊಡಬಹುದು.

ಮಿಥುನ ಮತ್ತು ತುಲಾ ರಾಶಿ

ಶುಕ್ರನಿಗೆ ಸ್ವಾಭಾವಿಕವಾಗಿ ಅನುಕೂಲವಾದ ರಾಶಿಗಳಾದ್ದರಿಂದ ಈ ಯೋಗವು ಕ್ರಿಯೇಟಿವಿಟಿ, ಕಲೆ, ಮೀಡಿಯಾ, ಬರವಣಿಗೆ, ವ್ಯಾಪಾರ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿ ಲಾಭ ನೀಡುತ್ತದೆ. ಪ್ರೇಮ ಜೀವನದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಆದರೆ ಸಂಬಂಧಗಳು ದೀರ್ಘಕಾಲ ಉಳಿದುಕೊಳ್ಳಲು ಪರಸ್ಪರ ನಂಬಿಕೆ ಅಗತ್ಯ. ವಿದೇಶಿ ಸಂಪರ್ಕಗಳು, ಹೊಸ ಯೋಜನೆಗಳು ಫಲಕೊಡಬಹುದು.

ಮೇಷ ಮತ್ತು ಸಿಂಹ ರಾಶಿ

ಸ್ನೇಹ ವಲಯ ವಿಸ್ತಾರವಾಗುತ್ತದೆ. ಹೊಸ ಜನರ ಪರಿಚಯದಿಂದ ಅವಕಾಶಗಳು ಬರುತ್ತವೆ. ಆದರೆ ದಾಂಪತ್ಯ ಅಥವಾ ಪ್ರೇಮದಲ್ಲಿ ಅನುಮಾನ, ಅಹಂಕಾರ ಹಾಗೂ ಅತಿಯಾದ ನಿರೀಕ್ಷೆ ಸಮಸ್ಯೆ ತರಬಹುದು. ಮಾತು ಮತ್ತು ವರ್ತನೆಯಲ್ಲಿ ಸಂಯಮ ಇರಬೇಕು.

ವೃಷಭ ಮತ್ತು ಮಕರ ರಾಶಿ

ಹಣಕಾಸು ಮತ್ತು ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಏರುಪೇರು. ಹೊಸ ಆದಾಯದ ಮೂಲಗಳು ಕಾಣಿಸಿಕೊಳ್ಳುವುದು. ಆದರೆ ಅತಿಯಾದ ಖರ್ಚು, ಲಕ್ಸುರಿ ಜೀವನದತ್ತ ಒಲವು ಸಾಲ ಅಥವಾ ಒತ್ತಡಕ್ಕೆ ಕಾರಣವಾಗಬಹುದು. ಹಿರಿಯರೊಂದಿಗೆ ಅಥವಾ ಅಧಿಕಾರಿಗಳೊಂದಿಗೆ ವಿವಾದ ಸಂಭವಿಸುವ ಸಾಧ್ಯತೆ ಇದೆ.

ಕರ್ಕಾಟಕ, ಕನ್ಯಾ, ವೃಶ್ಚಿಕ ಮತ್ತು ಮೀನ ರಾಶಿ

ಈ ರಾಶಿಗಳಿಗೆ ಈ ಯೋಗ ಸ್ವಲ್ಪ ಎಚ್ಚರಿಕೆ ಸೂಚಿಸುವುದು. ಮನಸ್ಸಿನ ಅಸ್ಥಿರತೆ, ಗುಪ್ತ ಚಿಂತೆ, ಸಂಬಂಧಗಳಲ್ಲಿ ಗೊಂದಲ, ತಪ್ಪು ನಿರ್ಧಾರಗಳು ಸಂಭವಿಸಬಹುದು. ಕೆಲವರಿಗೆ ಮೋಸ, ತಪ್ಪು ಆಕರ್ಷಣೆ ಅಥವಾ ಗುಪ್ತ ಶತ್ರುಗಳಿಂದ ತೊಂದರೆ ಎದುರಾಗಬಹುದು. ಆರೋಗ್ಯದ ಕಡೆಗೂ ಗಮನ ಅಗತ್ಯ.

ಧನು ರಾಶಿ

ಹೊಸ ಕಲಿಕೆ, ತಂತ್ರಜ್ಞಾನ, ದೂರ ಪ್ರಯಾಣ, ವಿದೇಶಿ ಅವಕಾಶಗಳಿಂದ ಲಾಭ ಸಾಧ್ಯ. ಆದರೆ ಗುರುತತ್ವ ದುರ್ಬಲವಾದರೆ ದಾರಿತಪ್ಪುವ ನಿರ್ಧಾರಗಳ ಸಾಧ್ಯತೆಯೂ ಇದೆ. ಮಾರ್ಗದರ್ಶನ ಮತ್ತು ಶಿಸ್ತು ಇದ್ದರೆ ಈ ಯೋಗ ಶುಭಕಾರಕವಾಗುತ್ತದೆ.

ಕುಂಭದಲ್ಲಿನ ಶುಕ್ರ–ರಾಹು ಸಂಯೋಗವು ಸಂಪೂರ್ಣವಾಗಿ ಶುಭ ಅಥವಾ ಸಂಪೂರ್ಣ ಅಶುಭ ಎಂದು ನಿರ್ಧರಿಸಲಾಗದು. ಇದು ಆಸೆಗಳನ್ನು ಹೆಚ್ಚಿಸುವ ಯೋಗ. ವಿವೇಕ, ನೈತಿಕತೆ ಮತ್ತು ಶಿಸ್ತಿನೊಂದಿಗೆ ಬಳಸಿಕೊಂಡರೆ ಈ ಯೋಗ ಸಮಾಜದಲ್ಲಿ ಹೆಸರು, ಹಣ ಮತ್ತು ಆಕರ್ಷಣೆ ನೀಡುತ್ತದೆ. ಅತಿರೇಕಕ್ಕೆ ಹೋಗಿದರೆ ಅದೇ ಯೋಗ ಗೊಂದಲ, ಅಪವಾದ ಮತ್ತು ಮನಶ್ಶಾಂತಿಯ ಕೊರತೆಗೆ ಕಾರಣವಾಗುತ್ತದೆ.

– ಲೋಹಿತ ಹೆಬ್ಬಾರ್

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ