AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಡಿಸೆಂಬರ್ ಮೂರನೇ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ

ವಾರದ ಉದ್ಯೋಗ ಭವಿಷ್ಯ: ಡಿಸೆಂಬರ್ 14ರಿಂದ 20 ರ ಈ ವಾರದ ಉದ್ಯೋಗ ಭವಿಷ್ಯ ಇಲ್ಲಿದೆ. ರವಿ ಧನು ರಾಶಿ ಪ್ರವೇಶದಿಂದ ಸರ್ಕಾರಿ ಅನುಮತಿಗಳು ಸುಲಭ. ದುಡುಕದೆ ನಿರ್ಧಾರ ಕೈಗೊಳ್ಳಿ. ಲಕ್ಷ್ಮಿಯ ಕೃಪಾಕಟಾಕ್ಷ ನಿಮ್ಮ ಉದ್ಯೋಗಕ್ಕೆ ಸಿಗಲಿದೆ. ಪ್ರತಿಯೊಂದು ರಾಶಿಗೂ ವೃತ್ತಿ ಪ್ರಗತಿ, ಹಣಕಾಸು ನಿರ್ಧಾರಗಳು ಮತ್ತು ಹೊಸ ಅವಕಾಶಗಳ ಬಗ್ಗೆ ವಿವರವಾದ ಮಾಹಿತಿ ಲಭ್ಯವಿದೆ. ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಈ ಭವಿಷ್ಯ ಸಹಕಾರಿ.

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಡಿಸೆಂಬರ್ ಮೂರನೇ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ
ಉದ್ಯೋಗ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷತಾ ವರ್ಕಾಡಿ|

Updated on: Dec 12, 2025 | 12:44 PM

Share

14-12-2025ರಿಂದ 20-12-2025ರವರಗೆ ಈ ವಾರವು ಡಿಸೆಂಬರ್ ಮೂರನೇ ವಾರವಾಗಿದ್ದು ರವಿಯು ಧನು ರಾಶಿಯನ್ನು ಪ್ರವೇಶಿಸಲಿದ್ದು ಸರ್ಕಾರದಿಂದ ಪಡೆಯುವ ಅನುಮತಿ, ಪರಿಶೀಲನೆ ಎಲ್ಲವೂ ಸುಲಿಲತವಾಗಿ ಆಗಲಿದೆ. ದುಡುಕಿ ಏನನ್ನೋ ಮಾಡುವ ಬದಲು ಎಡವಿದರೂ ಒಮ್ಮೆ ಕೂಲಂಕಷವಾಗಿ ನೋಡಿಕೊಂಡು ಮುಂದುವರಿಯುವುದು ಉತ್ತಮ. ಲಕ್ಷ್ಮಿಯ ಕೃಪಾಕಟಾಕ್ಷ ನಿಮ್ಮ ಉದ್ಯೋಗಕ್ಕೆ ಸಿಗಲಿ.

ಮೇಷ ರಾಶಿ:

ಈ ವಾರ ಗುರು‌ ಹಾಗೂ ಕುಜ ಅನುಕೂಲದಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಹೊಸ ಜವಾಬ್ದಾರಿಗಳಿಗೆ ತೆರೆದ ಮನಸ್ಸಿರಲಿದೆ. ಹಳೆಯ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಮೇಲಾಧಿಕಾರಿಗಳ ಮೆಚ್ಚುಗೆ ಸಾಧ್ಯ. ಆಲೋಚಿಸಿದ ಯೋಜನೆಗಳು ಮುಂದುವರಿಯುತ್ತವೆ. ಆದರೆ ದಾಖಲೆಗಳ ಕಾರ್ಯಗಳಲ್ಲಿ ವಿಳಂಬ. ಸಹೋದ್ಯೋಗಿಗಳೊಂದಿಗೆ ಸಂವಹನ ಸ್ಪಷ್ಟವಾಗಿರಲಿ.

ವೃಷಭ ರಾಶಿ:

ಇದು ಶುಕ್ರನ ಸ್ಥಾನವಾಗಿದ್ದು ಉದ್ಯಮದಲ್ಲಿ ನಿಮಗೆ ಆತ್ಮವಿಶ್ವಾಸ ಕಾಣಿಸದು. ಸೃಜನಾತ್ಮಕ ಕೆಲಸಗಳಲ್ಲಿ ಸಂಪೂರ್ಣ ತೊಡಗಿದರೂ ಫಲದಿಂದ ತೃಪ್ತಿ ಸಿಗದು. ಆದರೆ ಹಣಕಾಸು ಸಂಬಂಧಿಸಿದ ನಿರ್ಧಾರಗಳಲ್ಲಿ ಜಾಗ್ರತೆ ಅಗತ್ಯ. ಹೊಸ ಅವಕಾಶಗಳು ಬಾಗಿಲು ತಟ್ಟುವ ವಾರ. ಹಳೆಯ ತಪ್ಪುಗಳನ್ನು ಸರಿಪಡಿಸಲು ಅವಕಾಶ ಸಿಗುತ್ತದೆ. ಉದ್ಯೋಗ ಬದಲಾವಣೆಯ ಯೋಚನೆಗಳಿಗೆ ಮಧ್ಯಮ ಕಾಲ.

ಮಿಥುನ ರಾಶಿ:

ಈ ರಾಶಿಯವರಿಗೆ ಗುರು ಇಲ್ಲಿಗೆ ಬಂದು ಸಾಮಾನ್ಯ ಬಲವನ್ನು ಹೊಂದುವುದರಿಂದ ವೃತ್ತಿಯಲ್ಲಿ ಪುನರುತ್ಥಾನಕ್ಕೆ ಶಕ್ತಿ ಸಾಲದು. ಹೊಸ ಯೋಜನೆಗಳ ಆರಂಭಕ್ಕೆ ಭಯ. ಸಂವಹನ ಮತ್ತು ಬೌದ್ಧಿಕ ಕೆಲಸಗಳಿಗೆ ಸಹೋದ್ಯೋಗಿಗಳ ಬೆಂಬಲ. ಆದರೆ ಕುಜದ ದೃಷ್ಟಿಯಿಂದ ಅತಿಯಾದ ಆತುರವನ್ನು ತೊರೆದು ನಿಧಾನವಾಗಿ ಕ್ರಮಿಸಿ. ಉದ್ಯಮದ ಕಾರಣಕ್ಕೆ ಪ್ರಯಾಣ ಸಂಭವಿಸಬಹುದು.

ಕರ್ಕಾಟಕ ರಾಶಿ:

ರಾಶಿ ಚಕ್ರದ ನಾಲ್ಕನೇ ರಾಶಿಗೆ ಗಂಭೀರ ಜವಾಬ್ದಾರಿಗಳು ಕೈ ತಪ್ಪಬಹುದಾದ ವಾರ. ಕೆಲಸದಲ್ಲಿ ವಿಶ್ರಾಂತಿ ಅಧಿಕವಾಗಿದ್ದು ಕ್ರಮಬದ್ಧತೆಯಿಂದ ಕಾರ್ಯವನ್ನು ಮುಗಿಸುವುದು ಅಗತ್ಯ. ಧನು ರಾಶಿಯ ಸೂರ್ಯ‌ ಮತ್ತು ಬುಧದ ಅನುಕೂಲದಿಂದ ಮಾತಿನ ಶಕ್ತಿ ಫಲ ನೀಡುತ್ತದೆ. ವರದಿಗಳು ಮತ್ತು ಆಡಳಿತ ಕಾರ್ಯಗಳಲ್ಲಿ ಸ್ಪಷ್ಟತೆ ತರಲಿ. ಸಹೋದ್ಯೋಗಿ ಬೆಂಬಲದಿಂದ ಕಾರ್ಯ ಯಶಸ್ವಿಗೊಳಿಸಿಕೊಳ್ಳುವಿರಿ.

ಸಿಂಹ ರಾಶಿ:

ಡಿಸೆಂಬರ್ ಈ ವಾರ ಸೂರ್ಯನು ಮಿತ್ರನ ಸ್ಥಾನದಲ್ಲಿ ಇರುವ ಕಾರಣ ನಾಯಕತ್ವ ಗುಣ ಪ್ರಕಾಶಮಾನಕ್ಕೆ ಬರಲಿದೆ. ಹೊಸ ಯೋಜನೆಗಳು ನಿಮ್ಮ ಕೈಯಿಂದ ಉದ್ಘಾಟನೆಗೊಂಡು ಯಶಸ್ವಿಯಾಗುತ್ತವೆ. ಮೇಲಾಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ಒಪ್ಪಿಕೊಳ್ಳಲಾರರು. ಅಹಂಕಾರ ಹೆಚ್ಚಿದರೆ ಎಲ್ಲಿಂದಲೂ ವಿರೋಧ ಬರಬಹುದು. ಹಣಕಾಸು ನಿರ್ಧಾರಗಳಲ್ಲಿ ಜಾಗ್ರತೆ. ಪ್ರಯತ್ನ ಮುಂದುವರಿಸಿದರೆ ಉತ್ತೇಜನದ ಸೂಚನೆ.

ಕನ್ಯಾ ರಾಶಿ:

ಈ ವಾರ ಸಾಅಜಿಕ ಚಿಂತನೆ, ಯೋಜನೆಗಳು ಪರಿಣಾಮಕಾರಿ. ಕೆಲಸದಲ್ಲಿ ನಿಮ್ಮ ನಿಖರತೆ ಹೆಚ್ಚಾಗುತ್ತದೆ. ಕಾರ್ಯ ವ್ಯತ್ಯಸ್ತವಾಗಿದ್ದರೂ ಫಲ ಅನೂಕೂಲ. ದೀರ್ಘಕಾಲದ ಯೋಜನೆಗಳಲ್ಲಿ ಪ್ರಗತಿ. ಆದರೆ ಸ್ಥಾನದಿಂದ ಕೆಲವೊಂದು ದ್ವಂದ್ವದ ಸ್ಥಿತಿ ಬರಲಿದೆ. ಸಲಹೆಗಳನ್ನು ತಾಳ್ಮೆಯಿಂದ ಸ್ವೀಕರಿಸಿ. ಸಂದರ್ಶನ ನಿಶ್ಚಿತತೆ ಬರಲಿದೆ.

ತುಲಾ ರಾಶಿ:

ಏಳನೇ ರಾಶಿಯವರಿಗೆ ಈ ವಾರ ಕೆಲಸದಲ್ಲಿ ಗಹನವಾದ ವಿಶ್ಲೇಷಣೆಯಲ್ಲಿ ಮುಳುಗುವಿರಿ. ಹಣಕಾಸು ಪ್ರಗತಿ ಮಧ್ಯಮ. ಬುಧ ಪ್ರಭಾವದಿಂದ ನಿಮ್ಮ ಮಾತುಗಳಿಗೆ ತೂಕ ಬರಲಿದೆ. ಹೊಸ ಕಾರ್ಯಪದ್ಧತಿಯನ್ನು ಪ್ರಯೋಗಿಸಿದರೆ ಲಾಭ. ಹಿರಿಯರೊಂದಿಗೆ ತಾಳ್ಮೆ ಇರಲಿ. ತಂಡದಲ್ಲಿ ಸಣ್ಣ ಒತ್ತಡ ಕಾಣಿಸಿಕೊಳ್ಳುವುದು.

ವೃಶ್ಚಿಕ ರಾಶಿ:

ಈ ವಾರ ಬುಧನು ನಿಮ್ಮ ರಾಶಿಯಲ್ಲಿ ಇರುವುದರಿಂದ ಉದ್ಯೋಗದಲ್ಲಿ ಹಣಕಾಸಿನ ಲೆಕ್ಕಾಚಾರ ಬಹಳ ಸೂಕ್ಷ್ಮವಾಗಲಿದೆ. ಆಕರ್ಷಕ ಅವಕಾಶಗಳು ನೌಕರರಿಗೆ ನೀಡುವಿರಿ. ಗೌಪ್ಯವಾಗಿ ಬರುವ ಅಡ್ಡಿಗಳು ಕಡಿಮೆಯಾಗುತ್ತವೆ. ಆದರೆ ಕುಜದಿಂದ ಸಹೋದರ ಜೊತೆ ಕ್ಷಣಿಕ ಉದ್ವಿಗ್ನತೆ ಕಾಣಿಸುವುದು. ಕೇಳಿದ ಕೆಲಸಗಳನ್ನು ಸಮಯಕ್ಕೆ ಮುಗಿಸಿದರೆ ಫಲ ಉತ್ತಮ. ನಿಮಗೆ ನೀವೇ ಜವಾಬ್ದಾರಿ ತಂದುಕೊಳ್ಳುವಿರಿ.

ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ

ಧನು ರಾಶಿ:

ಒಂಭತ್ತನೇ ರಾಶಿಯವರಿಗೆ ಸೂರ್ಯ ಹಾಗೂ ಕುಜನ ಶಕ್ತಿಯಿಂದ ವೃತ್ತಿಯಲ್ಲಿಯೇ ಮನಸ್ಸು ಕೇಂದ್ರೀಕೃತವಾಗಲಿದೆ. ನಿಮ್ಮ ಕಲ್ಪನೆಗಳು ಎಲ್ಲರಿಂದ ಸ್ವೀಕೃತವಾಗುವ ವಾರ. ಮಾತಿನ ಮೂಲಕ ಕಾರ್ಯದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ. ಹೊಸ ಒಪ್ಪಂದಗಳು ಸಾಧ್ಯ. ಆದರೆ ಶನಿ ಸಾಲು ವಿಳಂಬ ತರಬಹುದು. ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ ಫಲ. ದೂರ ಪ್ರಯಾಣದಿಂದ ಯೋಗ‌ಬರಲಿ.

ಮಕರ ರಾಶಿ:

ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಶನಿಯ ಪ್ರಭಾವದಿಂದ ಕೆಲಸದಲ್ಲಿ ಆತ್ಮಾವಲೋಕನವಾಗಲಿದೆ‌. ಶಿಸ್ತು ಅತಿಯಾದ ಪ್ರಾಮುಖ್ಯತೆಯನ್ನು ವಹಿಸುವುದು. ಹಳೆಯ ಯೋಜನೆಗಳನ್ನು ಮುಗಿಸಲು ಉತ್ತಮ ಸಮಯ. ಹೊಸ ಉದ್ಯೋಗಕ್ಕೆ ಅಪ್ಲೈ ಮಾಡಿದರೆ ಮಧ್ಯ ಫಲ. ದ್ವಂದ್ವದಲ್ಲಿ ವಾರವನ್ನು ಕಳೆಯಬೇಕಾಗುವುದು. ಹಣಕಾಸು ನಿರ್ಣಯಗಳಲ್ಲಿ ಜಾಗ್ರತೆ. ತಂದೆದ ಬೆಂಬಲ ಲಭ್ಯ. ಆತ್ಮಶಕ್ತಿ ಹೆಚ್ಚಾದರಷ್ಟೂ ಕಷ್ಟ.

ಕುಂಭ ರಾಶಿ:

ಈ ವಾರ ನಿಮಗೆ ಜನ ಸಂಪರ್ಕ, ವ್ಯಾಪಾರಗಳಲ್ಲಿ ಚುರುಕುತನ ಹೆಚ್ಚಿರುವುದು. ಸಾಮೂಹಿಕ ಕಾರ್ಯದಲ್ಲಿ ನಾಯಕರಾಗಿ ಯಶಸ್ಸು. ಹಳೆಯ ಅಡಚಣೆಗಳು ದೂರವಾಗುತ್ತವೆ. ಗುರುವಿನ ದೃಷ್ಟಿ ಈ ರಾಶಿಯ ಮೇಲೆ ಇರುವ ಕಾರಣ ಮಾತನಾಡಿದರೆ ಅನರ್ಥಗಳೂ ಅರ್ಥವತ್ತಾಗಲಿದೆ. ಶಾಂತವಾದ ಸಂವಹನವನ್ನು ಅಳವಡಿಸಿಕೊಳ್ಳಿ.

ಮೀನ ರಾಶಿ:

ಈ ವಾರ ಶನಿ ನಿಮ್ಮ ರಾಶಿಯಲ್ಲಿ ಇರುವುದರಿಂದ ಹಾಗೂ ಕುಜನ ದೃಷ್ಟಿಯೂ ಬರುವ ಕಾರಣ ಗಂಭೀರ ಕೆಲಸದಲ್ಲಿ ಒತ್ತಡವೂ ಅಧಿಕ. ಜವಾಬ್ದಾರಿ ಹೆಚ್ಚಾಗುತ್ತದೆ. ಉದ್ಯೋಗವು ವಿಸ್ತಾರವಾಗುವ ಎಲ್ಲ ಸನ್ನಿವೇಶಗಳೂ ನಿರ್ಮಾಣವಾಗಲಿದೆ. ಉದ್ಯೋಗ ಸುಧಾರಣೆ ನಿಧಾನವಾಗಿರಲಿ. ಹಿರಿಯರು ನಿಮ್ಮ ಶ್ರಮ ಗುರುತಿಸುವ ಕಾಲ. ಇತರರ ಬಗೆಗೆ ಇರುವ ತಾತ್ಸಾರದ ಮಾತುಗಳನ್ನು ತಪ್ಪಿಸಿ.

– ಲೋಹಿತ ಹೆಬ್ಬಾರ್ – 8762924271 (what’s app only)