Weekly Horoscope: ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಈವಾರದ ಭವಿಷ್ಯ ಇಲ್ಲಿದೆ

ವಾರ ಭವಿಷ್ಯ: ಮೇಷರಾಶಿಯವರಿಗೆ ಶತ್ರು ವಿಜಯ, ಸೋದರರಿಂದ ಸಹಾಯ, ಸ್ವಂತದ ಉದ್ಯಮೆಗಳಲ್ಲಿ ಪ್ರಗತಿ, ಮಕರ ಅನಾರೋಗ್ಯ, ಅತಿಯಾದ ಬಯಕೆಗಳಿಂದ ಧನಹಾನಿ, ಆಲಸ್ಯ, ಶತ್ರುಕ್ಷಯ. ಉಳಿದ ರಾಶಿಗಳ ಭವಿಷ್ಯ ಹೀಗಿದೆ

Weekly Horoscope: ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಈವಾರದ ಭವಿಷ್ಯ ಇಲ್ಲಿದೆ
ರಾಶಿ ಭವಿಷ್ಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 06, 2022 | 4:08 PM

ವರ್ಷದ ಎರಡನೇ ಚಂದ್ರ ಗ್ರಹಣ (Lunar Eclipse 2022) ಮಂಗಳವಾರ ಸಂಭವಿಸಲಿದೆ. ಇದು ಭಾರತದಲ್ಲಿಯೂ (India) ಗೋಚರಿಸಲಿದೆ. ಚಂದ್ರ ಗ್ರಹಣವು ಮೇಷಾದಿ ದ್ವಾದಶ ರಾಶಿಗಳ ಮೇಲೆ ತುಸು ಪ್ರಭಾವ ಸಾಧ್ಯತೆ ಇದೆ. ಕರ್ಕಾಟಕ, ವೃಶ್ಚಿಕ, ಮಕರ ರಾಶಿಗಳ ಜನರಿಗೆ ಗ್ರಹಣ ಪ್ರಭಾವದಿಂದಾಗಿ ಮಾನಸಿಕ ಕಿರಿಕಿರಿ, ಚಿಂತೆ, ಕಾರ್ಯವಿಘ್ನ ಇತ್ಯಾದಿ ಅಶುಭ ಫಲಗಳು ಗೋಚರವಾಗುವ ಸಾಧ್ಯತೆ ಇದೆ. ಉಳಿದಂತೆ ಹನ್ನೆರಡು ರಾಶಿಗಳ ಈ ವಾರದ ಭವಿಷ್ಯ ಮಿಶ್ರಫಲದಿಂದ ಕೂಡಿದ್ದು, ವಾರದ ಮುನ್ನೋಟ ಇಲ್ಲಿದೆ.

ಮೇಷ:  ಶತ್ರು ವಿಜಯ, ಸೋದರರಿಂದ ಸಹಾಯ, ಸ್ವಂತದ ಉದ್ಯಮಗಳಲ್ಲಿ ಪ್ರಗತಿ, ದಾಂಪತ್ಯದಲ್ಲಿ ವಿರಸ, ದುಶ್ಚಟಗಳು ವೃದ್ಧಿ, ಕುಟುಂಬದ ಹಿರಿಯರ ವಿಯೋಗಾದಿ ದುಃಖ, ಉದ್ಯೋಗ ಕ್ಷೇತ್ರದಲ್ಲಿ ವೃದ್ಧಿ. ಶುಭಕ್ಕೆ ಸುಬ್ರಹ್ಮಣ್ಯನನ್ನು ಆರಾಧಿಸಿರಿ

ವೃಷಭ:  ಮಾತಿನಿಂದ ಧನನಾಶ, ಸ್ತ್ರೀಜನರಿಂದ ವಿರೋಧ, ಮನೆಯಲ್ಲಿ ಹಾನಿಸಂಭವ, ಕೋರ್ಟ್ ವ್ಯವಹಾರದಲ್ಲಿ ಅನುಕೂಲ, ತಂದೆಯೊಂದಿಗೆ ವಿರೋಧ, ಉದರ ರೋಗ ಸಂಭವ. ದೋಷ ಪರಿಹಾರಕ್ಕೆ ಅಮ್ಮನವರನ್ನು ಆರಾಧಿಸಿರಿ.

ಮಿಥುನ:  ಗುರುಹಿರಿಯರಲ್ಲಿ ಭಕ್ತಿ, ದೇವತಾ ಆರಾಧನೆಗೆ ತೊಡಗುವುದು, ಮಕ್ಕಳಿಂದ ಸಂತಸ, ಕಲೆಗಳಲ್ಲಿ ತೊಡಗಿದವರಿಗೆ ಶುಭವು, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಜವಾಬ್ದಾರಿ‌ ವ್ಯಾಪ್ತಿ, ನರರೋಗಗಳ ಸಂಭವ. ಲಕ್ಷ್ಮೀನಾರಾಯಣರ ಆರಾಧನೆಯಿಂದ ಶುಭವಾಗುವುದು.

ಕರ್ಕ:  ರಾಶ್ಯಧಿಪತಿಗರ ಗ್ರಹಣದೋಷವಿರುವುದರಿಂದ ಮಾನಸಿಕ ಕಿರಿಕಿರಿ, ಚಿಂತೆ, ದುಗುಡ. ಮನೆ‌ ನಿರ್ಮಾಣಕ್ಕೆ ಹಣ ಖರ್ಚಾಗುವುದು, ನೇತ್ರರೋಗ ಸಂಭವ, ದಂಪತಿಗಳಲ್ಲಿ ವಿರಸ. ಸರಸ್ವತಿಯ ಆರಾಧನೆಯಿಂದ ಅಶುಭ‌ ನಿವಾರಣೆ.

ಸಿಂಹ:  ತಪ್ಪಾದ ಕೆಲಸಗಳನ್ನು ಮಾಡುವ ಅವಕಾಶ, ಮದ್ಯದ ದಾಸನಾಗಬಹುದು, ಆಕಸ್ಮಿಕವಾಗಿ ರೋಗ ಸಂಭವ, ಸುಬ್ರಹ್ಮಣ್ಯನ ಆರಾಧನೆಯ ಯೋಗ, ವಿದೇಶದವರಿಂದ ಧನಲಾಭವಾಗುವ ಅವಕಾಶ‌. ಮಹಾಕಾಳಿಯ ಆರಾಧನೆಯಿಂದ ಶುಭವಾಗುವುದು‌.

ಕನ್ಯಾ:  ಧನಲಾಭದ ಯೋಗ, ಅಧ್ಯಾಪಕ ವೃತ್ತಿಯವರಿಗೆ ಶುಭ, ಸ್ತ್ರೀಮೂಲಕ ಧನಪ್ರಾಪ್ತಿ, ಹಿರಿಯರಿಂದ ಆಸ್ತಿ ನಷ್ಟವಾಗುವ ಯೋಗ, ವಿವಾಹಯೋಗ ಪ್ರಾಪ್ತಿ. ಮಹಾವಿಷ್ಣುವನ್ನು ಆರಾಧಿಸಿರಿ.

ತುಲಾ:  ವ್ಯಾಪಾರ ವ್ಯವಹಾರದವರಿಗೆ ಶುಭಪ್ರಾಪ್ತಿ, ದೇಶಸಂಚಾರ ಯೋಗ, ಬಹುಜನರ ವಿರೋಧ ಸಂಭವ, ಸ್ಥಾನಚ್ಯುತಿಯ ಯೋಗ, ವಿರೋಧಿಗಳು ಪ್ರಬಲರಾಗುವ ಅವಕಾಶ. ಅನ್ನಪೂರ್ಣೇಶ್ವರಿಯನ್ನು ಆರಾಧಿಸಿರಿ.

ವೃಶ್ಚಿಕ: ಕಾರ್ಯವಿಘ್ನ, ಫಲ ಬರುವ ಕಾಲಕ್ಕೆ ಕಾರ್ಯನಾಶ, ಕೋಪ ಹೆಚ್ಚಾಗುವ ಅವಕಾಶ, ರಕ್ತದ ಖಾಯಿಲೆಗಳು ಸಂಭವಿಸಬಹುದು, ಚಿತ್ತ ಶಾಂತತೆ ಮರೆಯಾಗುವುದು. ಗಣಪತಿಯನ್ನು ಆರಾಧಿಸಿರಿ.

ಧನು: ದಾಂಪತ್ಯದಲ್ಲಿ ಅಶುಭ, ಧನ‌ಹಾನಿ, ಅನೇಕ ವಿಧದ ವ್ಯವಹಾರಹಗಳು ಕೈಗೂಡುವ ಯೋಗ, ಗೃಹ‌ನಿರ್ಮಾಣ‌ಯೋಗ, ಸ್ನೇಹಿತರಿಂದ ಅನುಕೂಲ. ಮಹಾವಿಷ್ಣುವನ್ನು ಆರಾಧಿಸಿರಿ.

ಮಕರ: ಅನಾರೋಗ್ಯ, ಅತಿಯಾದ ಬಯಕೆಗಳಿಂದ ಧನಹಾನಿ, ಆಲಸ್ಯ, ಶತ್ರುಕ್ಷಯ, ಹಣ ಸಂಗ್ರಹ‌ಬುದ್ಧಿ ಹೆಚ್ಚಾಗುವ ಅವಕಾಶ, ಮಾತಿನಲ್ಲಿ ದೋಷ. ಶಿವಾರಾಧನೆಯಿಂದ ಸುಖವನ್ನು‌ ಕಾಣಿರಿ‌.

ಕುಂಭ: ವಿದ್ಯಾರ್ಥಿಗಳಿಗೆ ಶುಭ, ಹೃದಯ ರೋಗಗಳ ಸಂಭವ, ಎಡಪಾದದಲ್ಲಿ ತೊಂದರೆ ಬರಬಹುದು, ದಾಂಪತ್ಯದಲ್ಲಿ ಬಿರುಕು, ಕಲಹ ಉಂಟಾದೀತು. ಗಣೇಶನ ಆರಾಧನೆ ಮಾಡಿರಿ.

ಮೀನ: ಕಿಡ್ನಿ ಸಂಬಂಧಿತ ತೊಂದರೆ, ಗುಹ್ಯ ರೋಗಗಳಿಗೆ ಅವಕಾಶ, ಸದ್ಗುಣಗಳ ವೃದ್ದಿ, ಉದ್ಯೋಗದಲ್ಲಿ ವೃದ್ಧಿ, ದಂಪತಿಗಳಲ್ಲಿ ಪ್ರತಿಕೂಲ. ದುರ್ಗಾರಾಧನೆಯಿಂದ ಸುಖವು.

(ಇದು ಗೋಚರಫಲವಾಗಿದ್ದು ಸಾಮಾನ್ಯವಾದ (general) ಫಲವಾಗಿರುವ ಕಾರಣ ಎಲ್ಲರಿಗೂ ಯಥಾವತ್ ಸಂಭವಿಸಬೇಕಿಲ್ಲ. ಇದನ್ನು ಜಾತಕದೊಂದಿಗೆ ಸಮೀಕರಿಸಿ ಹೇಳಿದಾಗ ಸರಿಯಾದ ಅನುಭವವನ್ನು ಪಡೆಯಬಹುದಾಗಿದೆ)

ಡಾ.‌ ರಮಾನಂದ ಭಟ್ಟ. ಎನ್ ಜ್ಯೋತಿಷಿಗಳು, ನೂಜಾಡಿ, ಕುಂದಾಪುರ. mob: +919686548489, +918073556745

Published On - 5:32 am, Sun, 6 November 22

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ