Weekly Horoscope ವಾರ ಭವಿಷ್ಯ: ಮೇಷದಿಂದ ಮೀನ ವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ
ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.
ವಾರ ಭವಿಷ್ಯ: ತಾ.25-10-2021 ರಿಂದ ತಾ.30-10-2021 ರವರೆವಿಗೆ.
ಮೇಷ: ಅನೇಕ ಬದಲಾವಣೆಗಳ ವಾರವಾಗಲಿದೆ. ಕುಟುಂಬಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಒತ್ತಡದ ಕೆಲಸಕ್ಕೆ ಸ್ವಲ್ಪ ಬಿಡುವು ಸಿಕ್ಕಂತಾಗುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಇನ್ನಷ್ಟು ಪ್ರಯತ್ನ ಮಾಡಬೇಕಿದೆ. ಮಹಿಳೆಯರಲ್ಲಿ ಸಣ್ಣಪುಟ್ಟ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಲಿದೆ. ಮಕ್ಕಳ ವಿದ್ಯಭ್ಯಾಸದಲ್ಲಿ ಉತ್ತಮ. ವಾರಾಂತ್ಯದಲ್ಲಿ ಸಿಹಿ ಸುದ್ದಿ. ಶುಭ ಸಂಖ್ಯೆ: 7 ಶುಭ ಬಣ್ಣ: ಕೇಸರಿ
ವೃಷಭ: ಜವಾಬ್ದಾರಿಗಳು ಜಾಸ್ತಿಯಾಗಲಿವೆ. ನಿದ್ರೆ ವಿಚಾರದಲ್ಲಿ ಮೋಸ ಮಾಡಿಕೊಳ್ಳಬೇಡಿ. ಇಲ್ಲವಾದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಣಕಾಸಿನ ವಿಚಾರದಲ್ಲಿ ಬಲಗೈನಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗದಂತೆ ನೋಡಿ ಕೊಳ್ಳಿ. ಎಲ್ಲರನ್ನೂ ಅತಿಯಾಗಿ ನಂಬುವುದು ತರವಲ್ಲ. ಸ್ನೇಹಿತರು ಕೆಲವೊಮ್ಮೆ ಶತ್ರುಗಳೂ ಆಗುತ್ತಾರೆ. ಶುಭ ಸಂಖ್ಯೆ: 2 ಶುಭ ಬಣ್ಣ: ಬಿಳಿಪು
ಮಿಥುನ: ಆಕಸ್ಮಿಕವಾಗಿ ಧನಲಾಭವಾಗಲಿದೆ. ಮನೆಯಲ್ಲಿ ಈ ವಾರ ಶಾಂತಿ ನೆಲೆಸಲಿದ್ದು, ಹೆಚ್ಚು ಸಂತೋಷದಿಂದ ಕೂಡಿರುತ್ತದೆ. ಕಾಲ್ಕೆರದು ಜಗಳಕ್ಕೆ ಬರುವ ಗುಣದವರಿಂದ ದೂರ ಇರುವುದು ಸೂಕ್ತ. ಮನಸ್ಸಲ್ಲಿ ಕಿರಿಕಿರಿ ಎದುರಾದರೂ ಧ್ಯಾನ ಅಥವಾ ದೇಗುಲಕ್ಕೆ ಭೇಟಿ ನೀಡಿ. ಯಾರ ವಿಚಾರಕ್ಕೂ ತಲೆ ಹಾಕದಿರುವುದು ಸೂಕ್ತ. ಶುಭ ಸಂಖ್ಯೆ: 5 ಶುಭ ಬಣ್ಣ: ಹಸಿರು
ಕಟಕ: ಬಂಧುಗಳಿಂದ ಲಾಭವಾಗಲಿದೆ. ಫೋನ್ ನಂಬರ್‌ನಲ್ಲಿ ಒಂದಂಕಿ ಮಿಸ್ ಆದರೂ ಅಪರಿಚಿತರಿಗೆ ಹೋಗುತ್ತದೆ. ಹಾಗೆಯೇ ಮಾತ ನಾಡುವಾಗ ಎಚ್ಚರ ಇರಲಿ. ನಿಮ್ಮ ಮಾತು ಬೇರೆ ರೀತಿ ಅರ್ಥೈಸಿದರೆ ಇನ್ನೊಬ್ಬರು ಮತ್ತೇನೋ ತಿಳಿಯ ಬಹುದು. ಹೊಸ ಕೆಲಸಗಳು ಈ ವಾರ ಯಶಸ್ವಿಯಾಗೇ ಪೂರ್ಣವಾಗಲಿದೆ. ಮಕ್ಕಳ ಆರೋಗ್ಯ ಬಗ್ಗೆ ಎಚ್ಚರ. ಶುಭ ಸಂಖ್ಯೆ: 6 ಶುಭ ಬಣ್ಣ: ಹಳದಿ
ಸಿಂಹ: ನಿಧಾನವಾಗಿ ಯೋಚಿಸಿ ಮುಂದುವರೆಯಿರಿ. ಮರಳಿನಲ್ಲಿ ಇಂಗಿದ ನೀರು ಹೇಗೆ ಮರಳಿ ಪಡೆಯಲು ಸಾಧ್ಯವಿಲ್ಲವೊ ಹಾಗೆ ಕಳೆದು ಹೋದ ವಸ್ತುವೂ ಸಹ. ಕಳೆದು ಹೋದವರ ಬಗ್ಗೆ, ದೂರಾದವರ ಬಗ್ಗೆ ಚಿಂತಿಸಿ ಇಂದಿನ ಸಂತೋಷದ ದಿನಗಳನ್ನು ಕಳೆದುಕೊಳ್ಳದಿರಿ. ವಾರಾಂತ್ಯದಲ್ಲಿ ಕುಟುಂಬ ಸಮೇತ ದೂರದ ಊರಿಗೆ ಪ್ರಯಾಣ ಸಾಧ್ಯತೆ. ಶುಭ ಸಂಖ್ಯೆ: 1 ಶುಭ ಬಣ್ಣ: ಕೆಂಪು
ಕನ್ಯಾ: ಶುಭ ವಾರವಾಗಲಿದೆ. ಶುಭ ಸುದ್ದಿ ಸಿಗಲಿದೆ. ನಮಗೆ ನಿಜವಾಗಿ ಸಹಾಯದ ಅವಶ್ಯಕತೆ ಇದನ್ನು ನೇರವಾಗಿ ಕೇಳಿ. ಮುಜುಗರ ಆಡಿಕೊಳ್ಳುವುದು ಬೇಡ. ಸಹಾಯ ಮಾಡುವ ಕೈಗಳು ಸಮಾಜದಲ್ಲಿ ಅಧಿಕವಾಗಿ ಇವೆ. ಅನಾವಶ್ಯಕ ಗೊಂದಲ, ಗಾಳಿ ಮಾತುಗಳಿಗೆ ಕಿವಿ ತೆರೆದಿಡುವುದು ಬೇಡ. ಶುಭ ಸಂಖ್ಯೆ: 3 ಶುಭ ಬಣ್ಣ: ಬಿಳಿ
ತುಲಾ: ಕೆಲಸದಲ್ಲಿ ಕಣ್ಣ ಮುಚ್ಚಲೆ ಬೇಡ. ಸಿಕ್ಕಿಹಾಕಿಕೊಂಡಲ್ಲಿ ನಿಮ್ಮ ಮರ್ಯಾದೆ ನೀವೇ ತೆಗೆದುಕೊಂಡಂತಾಗುತ್ತದೆ. ಯಾರ ಮಾತಿಗೂ ಕಿವಿಗೊಡದೆ ನೀವು ಆರಂಭಿಸಬೇಕೆಂದುಕೊಂಡ ಕೆಲಸವನ್ನು ಧೈರ್ಯ ದಿಂದ ಒಳ್ಳೆಯ ಮನಸ್ಸಿನಿಂದ ಆರಂಭಿಸಿದರೆ ಮುಂದೆ ಶುಭವಾಗಲಿದೆ. ದೂರ ಪ್ರಯಾಣ ಸಾಧ್ಯತೆ. ಹೊಸ ವರ್ಷದಲ್ಲಿ ಈ ಆರು ರಾಶಿಗಳ ಪ್ರೀತಿ ಪ್ರೇಮ ಪ್ರಣಯ! ಶುಭ ಸಂಖ್ಯೆ: 8 ಶುಭ ಬಣ್ಣ: ಗುಲಾಬಿ
ವೃಶ್ಚಿಕ: ಮನೆಯಲ್ಲಿ ಈ ವಾರ ಅರ್ಧ ಸಂತೋಷ ಅರ್ಧ ದುಃಖ ಇರಲಿದೆ. ಕಹಿ ಅನುಭವ ಈ ವಾರ ಆಗಲಿದ್ದು, ಅದನ್ನು ಉತ್ತಮ ರೀತಿಯಲ್ಲೇ ಎದುರಿಸಿ ಮುಂದೆ ಬರಲಿದ್ದೀರಿ. ನಿಮ್ಮ ಪ್ರೋತ್ಸಾಹ ಮಕ್ಕಳನ್ನು ಹುರಿದುಂಬಿಸುವುದರಿಂದ ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ಅನುಕೂಲವಾಗಲಿದೆ. ಶುಭ ಸಂಖ್ಯೆ: 9 ಶುಭ ಬಣ್ಣ: ಕಪ್ಪು
ಧನುಸ್ಸು: ಪಾಲುದಾರರ ವಿಷಯದಲ್ಲಿ ಜಾಗ್ರತೆ. ಕೆಲಸದಲ್ಲಿ ಮಾಡಿದ್ದೆಲ್ಲಾ ಸರಿ ಎನ್ನುವ ನಿಮ್ಮ ಮೊಂಡು ವಾದಕ್ಕೆ ಈ ವಾರ ಭಾರೀ ಹೊಡೆತ ಬೀಳಲಿದೆ. ಈಗಾದರೂ ಎಚ್ಚೆತ್ತು ಮುನ್ನಡೆ ಯುವುದು ಒಳಿತು. ಕಷ್ಟ ಎದುರಾದಾಗ ಮಕ್ಕಳೇ ನಿಮ್ಮ ತೋಳ್ಬಲದಂತೆ ನಿಲ್ಲುವರು. ಮನೆಯಲ್ಲಿ ಸಂತಸ. ಶುಭ ಸಂಖ್ಯೆ: 4 ಶುಭ ಬಣ್ಣ: ನೀಲಿ
ಮಕರ: ಹಿರಿಯರ ಮಾರ್ಗದರ್ಶನ ನಿಮ್ಮ ಗುರಿ ಸಾಧನೆಗೆ ಸರಿ ದಾರಿ ತೋರಲಿದೆ. ಯಾವುದೇ ಕೆಲಸ ಆರಂಭಿಸುವ ಮುನ್ನ ಹಿರಿಯರನ್ನು ಕೇಳಿ ತೀರ್ಮಾನಿಸಿ. ಮಹಿಳೆಯರಿಗೆ ಈ ವಾರ ಲಾಭದಾಯಕವಾಗಿದ್ದು, ಅದು ಸದುದ್ದೇಶಕ್ಕೆ ಬಳಕೆಯಾಗಲಿದೆ. ಶುಭ ಸಂಖ್ಯೆ: 3 ಶುಭ ಬಣ್ಣ: ಕಂದು
ಕುಂಭ: ಕಡ್ಡಿ ತುಂಡಾದರೆ ಹೇಗೆ ಜೋಡಿಸಲು ಅಸಾಧ್ಯವೋ ಹಾಗೇ ಕಟುವಾದ ಮಾತಿನಿಂದ ಒಡೆದ ಮನಸ್ಸು ಜೋಡಿಸುವುದು ಸಾಧ್ಯವಿಲ್ಲ. ಹಿಂದಿನ ವಾರ ಮಾಡಿದ ತಪ್ಪು ಈ ವಾರ ಮರುಕಳಿಸುವ ಸಾಧ್ಯತೆ. ಎಚ್ಚರಿಕೆಯ ಹೆಜ್ಜೆ ಇಡುವುದು ಒಳಿತು. ನಿಮ್ಮ ನಿರ್ಧಾರ ಕುಟುಂಬಕ್ಕೆ ಉತ್ತಮ ದಿನಗಳನ್ನು ತಂದುಕೊಡಲಿದೆ. ಶುಭ ಸಂಖ್ಯೆ: 5 ಶುಭ ಬಣ್ಣ: ಬೂದು
ಮೀನ: ಜನ ಸೇವೆಯಲ್ಲಿನ ನಿಮ್ಮ ಕಾರ್ಯಗಳು ಈ ವಾರ ನಿಮ್ಮ ಗೌರವ ಹೆಚ್ಚಿಸಲು ಕಾರಣವಾಗಲಿದೆ. ಶ್ರಮದ ಜೀವಿಯಾದ ನಿಮಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಪ್ರತಿ ಹೆಜ್ಜೆಗೂ ಬೆಂಬಲಿಸುವ ಸ್ನೇಹಿತರಿಗೆ ಇನ್ನಷ್ಟು ಆಪ್ತರಾಗುವಿರಿ. ಶುಭ ಸಂಖ್ಯೆ: 3 ಶುಭ ಬಣ್ಣ: ಹಳದಿ