ಶೀಘ್ರದಲ್ಲೇ ಬರಲಿದೆ 100 ಕಿಮೀ ವೇಗದ ಮತ್ತು 150 ಕಿ.ಮೀ ಮೈಲೇಜ್ ನೀಡುವ ಬೈಕ್
ಕಂಪನಿಯಲ್ಲಿ ಮತ್ತು ಲ್ಯಾಬ್‌ನಲ್ಲಿ ಇಂಜಿನಿಯರ್‌ಗಳು ಮತ್ತು ವಿನ್ಯಾಸಕರು ಉತ್ಪನ್ನವನ್ನು ಅಭಿವೃದ್ಧಿಪಡಿಸಿದ್ದರೂ ಸಹ, ವಿತರಕರು ಮತ್ತು ಬಳಕೆದಾರರ ಪ್ರತಿಕ್ರಿಯೆಯು ಅತ್ಯಗತ್ಯವಾಗಿರುತ್ತದೆ.

ಎಲೆಕ್ಟ್ರಿಕ್ ವಾಹನ ತಯಾರಕ ಕಂಪೆನಿ ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ (Hop Electric Mobility) ಶೀಘ್ರದಲ್ಲೇ ತನ್ನ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ (Hop Oxo electric) ಅನ್ನು ಬಿಡುಗಡೆ ಮಾಡಲಿದೆ. ಭಾರತದಲ್ಲಿ ಆಯ್ದ ಡೀಲರ್ ಪಾಲುದಾರರೊಂದಿಗೆ ಕ್ಲೋಸ್ಡ್-ಲೂಪ್ ಬೀಟಾ-ಟೆಸ್ಟಿಂಗ್ ಪ್ರೋಗ್ರಾಂ #OXOSNEAKPEEK ಅನ್ನು ಪ್ರಾರಂಭಿಸಿದೆ ಎಂದು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಹೇಳಿದೆ. ಈ ಮೂಲಕ ಎಲೆಕ್ಟ್ರಿಕ್ ಬೈಕ್ ಲಾಂಚ್ ಮಾಡಲಿರುವುದನ್ನು ಖಚಿತಪಡಿಸಿದೆ. ಕಂಪನಿಯು ತನ್ನ ನೂತನ ಬೈಕ್ನ ವಿಶೇಷತೆಗಳನ್ನು ಬಹಿರಂಗಪಡಿಸಿದ್ದು, ಹಾಪ್ ಒಕ್ಸೊ ಬೈಕ್ ಅನ್ನು ಗಂಟೆಗೆ 100 ಕಿಮೀ ವೇಗದಲ್ಲಿ ಚಲಾಯಿಸಬಹುದು.
ಕಂಪನಿಯು ತನ್ನ ಪರೀಕ್ಷಾ ಕಾರ್ಯಕ್ರಮದಲ್ಲಿ ವಿತರಕರನ್ನು ಮತ್ತು ಬಳಕೆದಾರರನ್ನು ಸೇರಿಸಿದ್ದು, ಈ ಮೂಲಕ ಗ್ರಾಹಕರ ಪ್ರತಿಕ್ರಿಯೆಯನ್ನು ನೇರವಾಗಿ ಪಡೆಯಲು ಮುಂದಾಗಿದೆ. ಇದರಿಂದ ಮುಂಬರುವ ಎಲ್ಲಾ-ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದೆ. ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಮತ್ತು ಅಂತಿಮ ಉತ್ಪನ್ನಗಳಿಗೆ ಹೆಚ್ಚು ವೈಯಕ್ತೀಕರಿಸಿದ ವಿಧಾನವನ್ನು ತೆಗೆದುಕೊಳ್ಳಲು ಇದು ಕಂಪನಿಗೆ ಸಹಾಯ ಮಾಡಲಿದೆ ಎಂದು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಹೇಳಿಕೊಂಡಿದೆ.
ಕಂಪನಿಯಲ್ಲಿ ಮತ್ತು ಲ್ಯಾಬ್‌ನಲ್ಲಿ ಇಂಜಿನಿಯರ್‌ಗಳು ಮತ್ತು ವಿನ್ಯಾಸಕರು ಉತ್ಪನ್ನವನ್ನು ಅಭಿವೃದ್ಧಿಪಡಿಸಿದ್ದರೂ ಸಹ, ವಿತರಕರು ಮತ್ತು ಬಳಕೆದಾರರ ಪ್ರತಿಕ್ರಿಯೆಯು ಅತ್ಯಗತ್ಯವಾಗಿರುತ್ತದೆ. ಮೊಬಿಲಿಟಿ ಬಳಕೆದಾರ ಪರೀಕ್ಷೆಯನ್ನು ಆರಂಭಿಸಿದ ಮೊದಲ ಭಾರತೀಯ ಕಂಪನಿ ಹಾಪ್ ಎಲೆಕ್ಟ್ರಿಕ್ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿಯ ಸಿಇಒ ಮತ್ತು ಸಹ-ಸಂಸ್ಥಾಪಕ ಕೇತನ್ ಮೆಹ್ತಾ ತಿಳಿಸಿದ್ದಾರೆ.
“#OXOSNEAKPEEK ಪ್ರೋಗ್ರಾಂನೊಂದಿಗೆ ನಾವು ಆಯ್ದ ಪಾಲುದಾರರಿಂದ ನೇರ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಪಡೆಯುತ್ತಿದ್ದೇವೆ. ಭಾರತದಾದ್ಯಂತ 30,000 ಕಿಲೋಮೀಟರ್‌ಗೂ ಹೆಚ್ಚು ಆನ್-ರೋಡ್ ಆಂತರಿಕ ಪರೀಕ್ಷೆಯನ್ನು ನಡೆಸುವ ಮೂಲಕ ನಾವು ಸಂಗ್ರಹಿಸಿದ ಇನ್‌ಪುಟ್‌ಗಳು ಕಸ್ಟಮೈಸ್ ಮಾಡಿದ ಉತ್ಪನ್ನಗಳನ್ನು ಪ್ರಾರಂಭಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ಕೇತನ್ ಮೆಹ್ತಾ ತಿಳಿಸಿದ್ದಾರೆ.
ಇನ್ನು ಹಾಪ್ ಒಕ್ಸೊ ಎಲೆಕ್ಟ್ರಿಕ್ ಬೈಕ್ (Hop Oxo electric) ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಲಿದೆ. ಹಾಗೆಯೇ ಇದರಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ನೀಡಲಾಗಿದ್ದು, ಇದನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 150 ಕಿಮೀ ದೂರವನ್ನು ಕ್ರಮಿಸಬಹುದು ಎಂದು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪೆನಿ ಹೇಳಿಕೊಂಡಿದೆ. ಹಾಗೆಯೇ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ 10 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: IPL 2022 format explained: 2 ಗುಂಪು, 70 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!
(hop electric bike launch hop oxo electric)
