New Mahindra Scorpio: ಹೊಸ ಲುಕ್​ನಲ್ಲಿ ಮಹೀಂದ್ರಾ ಸ್ಕಾರ್ಪಿಯೋ: ಈ ಬಾರಿ ಹಲವು ವಿಶೇಷತೆಗಳಿವೆ

New Mahindra Scorpio: ಈ ಬಾರಿ ಸ್ಕಾರ್ಪಿಯೊ ಮುಂಭಾಗಕ್ಕೆ ಹೊಸ ಟಚ್ ನೀಡಲಾಗಿದ್ದು, ಅದರಂತೆ ಮುಂಭಾಗದ ಭಾಗವು ದೊಡ್ಡ ಗ್ರಿಲ್ ಹೊಂದಿರಲಿದೆ. ಇದಕ್ಕೆ ಜೋಡಿಸಲಾದ ಎಲ್ಇಡಿ ಹೆಡ್​ಲ್ಯಾಂಪ್​ಗಳು ಸಹ ಈ ಗ್ರಿಲ್​ ಭಾಗವಾಗಿ ಕಂಡುಬರುತ್ತವೆ.

New Mahindra Scorpio: ಹೊಸ ಲುಕ್​ನಲ್ಲಿ ಮಹೀಂದ್ರಾ ಸ್ಕಾರ್ಪಿಯೋ: ಈ ಬಾರಿ ಹಲವು ವಿಶೇಷತೆಗಳಿವೆ
New Mahindra Scorpio
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 02, 2022 | 8:44 PM

ದೇಶದ ಪ್ರಮುಖ ಎಸ್‌ಯುವಿ ತಯಾರಕ ಮಹೀಂದ್ರಾ ಕಂಪೆನಿ ಶೀಘ್ರದಲ್ಲೇ ತನ್ನ ಮಹೀಂದ್ರ ಸ್ಕಾರ್ಪಿಯೋದ ನೆಕ್ಸ್ಟ್​​ ಜನರೇಷನ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಹೊಸ ಎಸ್ ಯುವಿಯ ವಿಶೇಷತೆಗಳ ಒಂದೊಂದು ಮಾಹಿತಿ ಹೊರಬೀಳುತ್ತಿದ್ದು, ಇತ್ತೀಚಿನ ಮಾಹಿತಿಯ ಪ್ರಕಾರ ಹೊಸ ಸ್ಕಾರ್ಪಿಯೋ ಜೊತೆಗೆ ಪನೋರಮಿಕ್ ಸನ್‌ರೂಫ್ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಮಹೀಂದ್ರ ಸ್ಕಾರ್ಪಿಯೋ 2022 ಮಾದರಿಯಲ್ಲಿ ಸನ್‌ರೂಫ್ ಜೊತೆಗೆ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಹೊಸ ಇನ್ಸ್ಟ್ರುಮೆಂಟ್ ಕನ್ಸೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ. ಎಸ್‌ಯುವಿಯ ಉನ್ನತ ಮಾಡೆಲ್​ಗಳಲ್ಲಿ ಮಾತ್ರ ಈ ವೈಶಿಷ್ಟ್ಯಗಳನ್ನು ನೀಡಲಿದೆ ಎಂದು ವರದಿಯಾಗಿದೆ. ಇನ್ನು ಒಳಾಂಗಣವನ್ನು ಹೆಚ್ಚು ಆಕರ್ಷಕವಾಗಿಸಲು, ಕಂಪನಿಯು ಸಿಲ್ವರ್ ಆಕ್ಸೆಂಟ್‌ಗಳೊಂದಿಗೆ ವರ್ಟಿಕಲ್ ಎಸಿ ವೆಂಟ್‌ಗಳನ್ನು ಡ್ಯಾಶ್‌ಬೋರ್ಡ್‌ನ ಬಲಭಾಗದಲ್ಲಿ ಸ್ಥಾಪಿಸಲಾಗಿದೆ.

ಹೊಸ ಸ್ಕಾರ್ಪಿಯೋದ ಕ್ಯಾಬಿನ್ ಹೆಚ್ಚು ಜಾಗವನ್ನು ಪಡೆಯಲಿದೆ. ಹಾಗೆಯೇ ಎಲ್ಇಡಿ ಹೆಡ್ಲೈಟ್ಗಳು, ಮಿಶ್ರಲೋಹದ ಚಕ್ರಗಳು, ಎಲ್ಇಡಿ ಟೈಲ್ ಲೈಟ್​ಗಳು ಮತ್ತು ರೂಫ್ ರೈಲ್​ಗಳು ಇದರಲ್ಲಿರಲಿವೆ. ಕಂಪನಿಯು ಕೆಲವು ದಿನಗಳ ಹಿಂದೆ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಸ್ಟಿಂಗ್ ಹೆಸರಿನಲ್ಲಿ ಟ್ರೇಡ್‌ಮಾರ್ಕ್ ಅನ್ನು ನೋಂದಾಯಿಸಿತ್ತು. ಹೀಗಾಗಿ ಇದೇ ಹೆಸರಿನಲ್ಲಿ ಹೊಸ ಸ್ಕಾರ್ಪಿಯೋ ರಸ್ತೆಗಿಳಿಯಲಿದೆ.

ಈ ಬಾರಿ ಸ್ಕಾರ್ಪಿಯೊ ಮುಂಭಾಗಕ್ಕೆ ಹೊಸ ಟಚ್ ನೀಡಲಾಗಿದ್ದು, ಅದರಂತೆ ಮುಂಭಾಗದ ಭಾಗವು ದೊಡ್ಡ ಗ್ರಿಲ್ ಹೊಂದಿರಲಿದೆ. ಇದಕ್ಕೆ ಜೋಡಿಸಲಾದ ಎಲ್ಇಡಿ ಹೆಡ್​ಲ್ಯಾಂಪ್​ಗಳು ಸಹ ಈ ಗ್ರಿಲ್​ ಭಾಗವಾಗಿ ಕಂಡುಬರುತ್ತವೆ. ಹೊಸ ಸ್ಕಾರ್ಪಿಯೊ ಲುಕ್​​ನಲ್ಲಿ ಬದಲಾವಣೆ ಕಂಡು ಬರಲಿದ್ದು, ಅದರಂತೆ ಶಾರ್ಕ್ ಫಿನ್ ಆಂಟೆನಾ, ಹಿಂಬದಿ ಬಾಗಿಲಿನಲ್ಲಿ ಸ್ಪಾಯ್ಲರ್, ಮಲ್ಟಿ ಸ್ಪೋಕ್ ಅಲಾಯ್ ವೀಲ್‌ಗಳನ್ನು ಇದರಲ್ಲಿ ನೀಡಲಾಗುತ್ತದೆ. ಇನ್ನು ಹೊಸ ಮಹೀಂದ್ರ ಸ್ಕಾರ್ಪಿಯೊದ ಮುಂಭಾಗ ಮತ್ತು ಹಿಂಭಾಗದಲ್ಲಿ ಬಲವಾದ ಬಂಪರ್‌ಗಳ ಜೊತೆಗೆ, ಕಂಪನಿಯು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ನೀಡಿದೆ.

ಹೊಸ ಸ್ಕಾರ್ಪಿಯೋದಲ್ಲಿ ಕಂಪನಿಯು 2.2 ಲೀಟರ್ ಸಾಮರ್ಥ್ಯದ mHawk ಡೀಸೆಲ್ ಎಂಜಿನ್ ಬಳಸಲಿದ್ದು, ಇದರ ಪವರ್​ ಅನ್ನು ಹೆಚ್ಚಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ನೂತನ ಸ್ಕಾರ್ಪಿಯೋ ಇದು ಮೊದಲಿಗಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ. ಹಾಗೆಯೇ, ಮಹೀಂದ್ರ ಥಾರ್‌ನಲ್ಲಿ ಬಳಸಲಾದ 2.0 ಲೀಟರ್ ಸಾಮರ್ಥ್ಯದ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಈ ಹೊಸ ಎಸ್‌ಯುವಿಯಲ್ಲಿಯೂ ಬಳಸುವ ಮೂಲಕ ಕಂಪನಿಯು ತನ್ನ ಪೆಟ್ರೋಲ್ ಮಾಡೆಲ್​ ಅನ್ನು ಸಹ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಹಳೆಯ ಸ್ಕಾರ್ಪಿಯೋಗೆ ಹೊಸ ಲುಕ್​ ನೀಡಿ ಮತ್ತೊಮ್ಮೆ ಎಸ್​ಯುವಿ ಪ್ರಿಯರನ್ನು ಸೆಳೆಯುವ ಪ್ರಯತ್ನದಲ್ಲಿ ಮಹೀಂದ್ರ ಕಂಪೆನಿ.

ಇದನ್ನೂ ಓದಿ:  South Africa vs India: ಭಾರತ- ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಮಾಹಿತಿ

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(New Mahindra Scorpio to get a panoramic sunroof)