AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ಲಾಕ್​ಡೌನ್ ನಡುವೆ ಪಂಚಾಯಿತಿ ಸದಸ್ಯನಿಂದಲೇ ಅದ್ಧೂರಿ ವಿವಾಹ!

ನೆಲಮಂಗಲ: ಇಡೀ ದೇಶದಲ್ಲಿ ಕೊರೊನಾ ಅಟ್ಟಹಾಸಕ್ಕೆ ಲಾಕ್​ಡೌನ್ ಸೂತ್ರ ಬಳಸಲಾಗುತ್ತಿದೆ. ಆದರೂ ಕೂಡ ಸೋಂಕು ನಿಯಂತ್ರಣಕ್ಕೆ ಬರ್ತಿಲ್ಲ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಅದ್ಧೂರಿಯಾಗಿ ಮದುವೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ರೆಡ್‌ ಜೋನ್‌ನಲ್ಲಿದೆ. ಹೀಗಾಗಿ ಹೆಚ್ಚಿನ ಜನ ಸೇರಿಸಿ ಶುಭ ಸಮಾರಂಭಗಳನ್ನು ಮಾಡುವಂತಿಲ್ಲ. ಆದರೆ ಜಿಲ್ಲಾಧಿಕಾರಿ ಅದೇಶ ಉಲ್ಲಂಘಿಸಿ ನೆಲಮಂಗಲ ತಾಲೂಕು ಪಂಚಾಯಿತಿ ಸದಸ್ಯ ಬೆಟ್ಟೇಗೌಡ ಎಂವಿಎಂ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ತಂಗಿ ಮಗಳ ಮದುವೆ […]

ನೆಲಮಂಗಲ: ಲಾಕ್​ಡೌನ್ ನಡುವೆ ಪಂಚಾಯಿತಿ ಸದಸ್ಯನಿಂದಲೇ ಅದ್ಧೂರಿ ವಿವಾಹ!
ಸಾಧು ಶ್ರೀನಾಥ್​
|

Updated on: May 04, 2020 | 3:10 PM

Share

ನೆಲಮಂಗಲ: ಇಡೀ ದೇಶದಲ್ಲಿ ಕೊರೊನಾ ಅಟ್ಟಹಾಸಕ್ಕೆ ಲಾಕ್​ಡೌನ್ ಸೂತ್ರ ಬಳಸಲಾಗುತ್ತಿದೆ. ಆದರೂ ಕೂಡ ಸೋಂಕು ನಿಯಂತ್ರಣಕ್ಕೆ ಬರ್ತಿಲ್ಲ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಅದ್ಧೂರಿಯಾಗಿ ಮದುವೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ರೆಡ್‌ ಜೋನ್‌ನಲ್ಲಿದೆ. ಹೀಗಾಗಿ ಹೆಚ್ಚಿನ ಜನ ಸೇರಿಸಿ ಶುಭ ಸಮಾರಂಭಗಳನ್ನು ಮಾಡುವಂತಿಲ್ಲ. ಆದರೆ ಜಿಲ್ಲಾಧಿಕಾರಿ ಅದೇಶ ಉಲ್ಲಂಘಿಸಿ ನೆಲಮಂಗಲ ತಾಲೂಕು ಪಂಚಾಯಿತಿ ಸದಸ್ಯ ಬೆಟ್ಟೇಗೌಡ ಎಂವಿಎಂ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ತಂಗಿ ಮಗಳ ಮದುವೆ ಮಾಡಿದ್ದಾರೆ.

ಉಪವಿಭಾಗ ಡಿವೈಎಸ್‌ಪಿ ಕಚೇರಿ ಪಕ್ಕದಲ್ಲೇ ಇರುವ ಕಲ್ಯಾಣ ಮಂಟಪದಲ್ಲಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಸಂಭ್ರಮ ಸಡಗರದಿಂದ ಮದುವೆ ಕಾರ್ಯ ಮುಗಿಸಿದ್ದಾರೆ. ತಹಶೀಲ್ದಾರ್ ಬಳಿ ಕೇವಲ ಐವರು ಭಾಗಿಯಾಗಲು ಅನುಮತಿ ಪಡೆದು 500ಕ್ಕೂ ಹೆಚ್ಚು ಜನರನ್ನು ಸೇರಿಸಿ ಅದ್ಧೂರಿಯಾಗಿ ವಿವಾಹ ನೆರವೇರಿಸಿದ್ದಾರೆ.