ಕೊವಿಡ್-19 ವ್ಯಾಧಿಗೆ ರಾಜ್ಯದಲ್ಲಿ ಇಂದು 74 ಜನ ಬಲಿ, 5,778 ಹೊಸ ಪ್ರಕರಣಗಳು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 74 ಜನ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಹೊಸದಾಗಿ 5,778 ಸೋಂಕಿಗೀಡಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಬಲಿಯಾದವರ ಸಂಖ್ಯೆ 10,770 ತಲುಪಿದೆ ಮತ್ತು ಸೋಂಕಿತರ ಸಂಖ್ಯೆ 7,88,551 ಆಗಿದೆ. ವ್ಯಾಧಿಗೆ ಈಡಾದವರಲ್ಲಿ 6,84,835 ಜನ ಗುಣಮುಖರಾಗಿದ್ದಾರೆ ಮತ್ತು ಉಳಿದವರಿಗೆ ಕೊವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ, ಬೆಂಗಳೂರಿನಲ್ಲಿ ಇಂದು 36 ಜನ ಸೋಂಕಿನಿಂದ ಮರಣಿಸಿದ್ದಾರೆ ಮತ್ತು ಹೊಸದಾಗಿ […]

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 74 ಜನ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಹೊಸದಾಗಿ 5,778 ಸೋಂಕಿಗೀಡಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಬಲಿಯಾದವರ ಸಂಖ್ಯೆ 10,770 ತಲುಪಿದೆ ಮತ್ತು ಸೋಂಕಿತರ ಸಂಖ್ಯೆ 7,88,551 ಆಗಿದೆ.
ವ್ಯಾಧಿಗೆ ಈಡಾದವರಲ್ಲಿ 6,84,835 ಜನ ಗುಣಮುಖರಾಗಿದ್ದಾರೆ ಮತ್ತು ಉಳಿದವರಿಗೆ ಕೊವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ, ಬೆಂಗಳೂರಿನಲ್ಲಿ ಇಂದು 36 ಜನ ಸೋಂಕಿನಿಂದ ಮರಣಿಸಿದ್ದಾರೆ ಮತ್ತು ಹೊಸದಾಗಿ 2,807 ಜನರಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಕೊರೊನಾ ವೈರಸ್ ರಾಜಧಾನಿಯಲ್ಲಿ ಇದುವರೆಗೆ 3,667 ಜನರನ್ನು ಕೊಂದಿದೆ ಮತ್ತು ಒಟ್ಟು 3,18,366 ಜನ ಸೋಂಕು ತಗುಲಿಸಿಕೊಂಡಿದ್ದಾರೆ. ವ್ಯಾಧಿಯಿಂದ ಗುಣಮುಖರಾದವರ ಸಂಖ್ಯೆ 2,56,267ರಷ್ಟಿದ್ದು ಮಿಕ್ಕಿದ 58,431 ಸೋಂಕಿತರು ವಿವಿಧ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




