AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡು ಮತ್ತು ಕೊರೊನಾ… ಸದ್ಯ ರಾಜ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಕ್ಷಿಪ್ತ ವಿವರ

ಕರ್ನಾಟಕದಲ್ಲಿ ಕೋವಿಡ್ 19ಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಸರ್ಕಾರ ಪ್ರತಿದಿನ ಅಂಕಿ ಅಂಶಗಳ ಸಮೇತ ನೀಡುತ್ತಿದೆ. ನಿನ್ನೆಯ ತನಕ ಕರ್ನಾಟಕದಲ್ಲಿ ಎಷ್ಟು ಸಾವುಗಳಾಗಿವೆ, ಎಷ್ಟು ಹೊಸ ಪ್ರಕರಣಗಳು ದಾಖಲಾಗಿವೆ, ಯಾವ ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರಿದ್ದಾರೆ ಎಂಬಿತ್ಯಾದಿ ವಿವರಗಳ ಕ್ವಿಕ್ ಡಿಟೇಲ್ಸ್ ಇಲ್ಲಿದೆ.

ಕರುನಾಡು ಮತ್ತು ಕೊರೊನಾ... ಸದ್ಯ ರಾಜ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಕ್ಷಿಪ್ತ ವಿವರ
ಸಾಂದರ್ಭಿಕ ಚಿತ್ರ
Skanda
| Edited By: |

Updated on: Dec 01, 2020 | 7:31 PM

Share

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ 19ಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಸರ್ಕಾರ ಪ್ರತಿದಿನ ಅಂಕಿ ಅಂಶಗಳ ಸಮೇತ ನೀಡುತ್ತಿದೆ. ನಿನ್ನೆಯ ತನಕ ಕರ್ನಾಟಕದಲ್ಲಿ ಎಷ್ಟು ಸಾವುಗಳಾಗಿವೆ, ಎಷ್ಟು ಹೊಸ ಪ್ರಕರಣಗಳು ದಾಖಲಾಗಿವೆ, ಯಾವ ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರಿದ್ದಾರೆ ಎಂಬಿತ್ಯಾದಿ ವಿವರಗಳ ಕ್ವಿಕ್ ಡಿಟೇಲ್ಸ್ ಇಲ್ಲಿದೆ.

ಕರ್ನಾಟಕದಲ್ಲಿ ಆರಂಭದಿಂದ ನಿನ್ನೆ ಸಂಜೆಯ ತನಕ ದಾಖಲಾದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 8,84,897. ಇದರಲ್ಲಿ 8,49,821 ಜನ ಗುಣಮುಖರಾಗಿದ್ದಾರೆ. ಇದುವರೆಗೂ ಸುಮಾರು 11,778ಕ್ಕೂ ಹೆಚ್ಚು ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ನಗರಕ್ಕೆ ಮೊದಲ ಸ್ಥಾನ ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಟ್ಟು 998 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದೊಂದು ವಾರದ ಅವಧಿಯಲ್ಲಿ ಅತ್ಯಧಿಕ ಹೊಸ ಪ್ರಕರಣಗಳು ಪತ್ತೆಯಾಗಿರುವುದರಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಕನ್ನಡ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿದ್ದರೆ ಬೀದರ್ ಕೊನೆಯ ಸ್ಥಾನದಲ್ಲಿದೆ. ಮೃತರರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರೇ ಅತ್ಯಧಿಕವಾಗಿದ್ದು ನಂತರ ವಯಸ್ಸಿಗನುಗುಣವಾಗಿ ಮರಣ ಪ್ರಮಾಣ ಇಳಿಕೆಯಾಗಿರುವುದು ವರದಿಯಲ್ಲಿ ಕಂಡುಬಂದಿದೆ.

61 ಶತಾಯುಷಿಗಳಿಗೆ ಸೋಂಕು ಕಳೆದೊಂದು ವಾರದ ತನಕ ಕೊರೊನಾ ಸೋಂಕಿಗೆ ತುತ್ತಾಗುವವರಲ್ಲಿ 21-30 ವರ್ಷದ ಯುವಕರೇ ಹೆಚ್ಚಿದ್ದರು. ಆದರೆ ಈಗ ಆ ಸ್ಥಾನಕ್ಕೆ 30-39 ವರ್ಷದವರು ಬಂದಿದ್ದಾರೆ. ಇದುವರೆಗೆ ಈ ವಯೋಮಾನದ ಒಟ್ಟು 1,93,178 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 20-29 ವರ್ಷದವರಲ್ಲಿ 1,81,400, 40-49 ವರ್ಷದವರಲ್ಲಿ 1,57,309, 50-59 ವರ್ಷದವರಲ್ಲಿ 1,28,685, 60-69 ವರ್ಷದವರಲ್ಲಿ 88,582, 70-79 ವರ್ಷದವರಲ್ಲಿ 40,043, 80-89 ವರ್ಷದವರಲ್ಲಿ 11,079, 90-99 ವರ್ಷದವರಲ್ಲಿ 1,300 ಪ್ರಕರಣಗಳು ಪತ್ತೆಯಾಗಿದ್ದು 100 ವರ್ಷ ದಾಟಿದ 61 ಮಂದಿ ಶತಾಯುಷಿಗಳು ಸಹ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು 10-19 ವಯೋಮಾನದ ಮಕ್ಕಳಲ್ಲಿ 57,142 ಹಾಗೂ 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 26,118 ಪ್ರಕರಣಗಳು ದಾಖಲಾಗಿವೆ.

ಕೊರೊನಾ ಸೋಂಕು ದುಪ್ಪಟ್ಟು ಅಧ್ಯಯನದ ಪ್ರಕಾರ ನಿನ್ನೆಯ ವೇಳೆಗೆ ಕೊಡಗಿನಲ್ಲಿ ಅತಿ ವೇಗವಾಗಿ ಕೇವಲ 62 ದಿನಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದರೆ ಚಿತ್ರದುರ್ಗದಲ್ಲಿ 64, ಬೆಂಗಳೂರು ಗ್ರಾಮಾಂತರದಲ್ಲಿ 64, ತುಮಕೂರಿನಲ್ಲಿ 67 ದಿನಗಳ ಅವಧಿಯಲ್ಲಿ ದುಪ್ಪಟ್ಟು ಪ್ರಕರಣಗಳು ದಾಖಲಾಗಿವೆ. ಈ ಪಟ್ಟಿಯಲ್ಲಿ ಬೀದರ್ ಕೊನೆಯ ಸ್ಥಾನದಲ್ಲಿದ್ದು ಅಲ್ಲಿ ಕೊರೊನಾ ಕೇಸ್ ಎರಡು ಪಟ್ಟಾಗಲು ತೆಗೆದುಕೊಂಡ ಅವಧಿ 106 ದಿನ. ಒಟ್ಟಾರೆ ಕರ್ನಾಟಕದಲ್ಲಿ 79 ದಿನಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.

ಪ್ರಸ್ತುತ ಬೆಂಗಳೂರು ನಗರದಲ್ಲಿ ಬರೋಬ್ಬರಿ 18,395 ಜನ ಕ್ವಾರಂಟೈನ್​ನಲ್ಲಿದ್ದು ನಂತರದ ಸ್ಥಾನದಲ್ಲಿರುವ ದಕ್ಷಿಣ ಕನ್ನಡದಲ್ಲಿ 2,842, ಮೈಸೂರಿನಲ್ಲಿ 1,670, ಉಡುಪಿಯಲ್ಲಿ 1,338, ಹಾಸನದಲ್ಲಿ 1,300 ಜನ ಕ್ವಾರಂಟೈನ್ ವಾಸ ಮಾಡುತ್ತಿದ್ದಾರೆ.

Follow Us
Skanda
Skanda
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್