ಬೆಂಗಳೂರಿನ ಅಪಾರ್ಟ್‌ಮೆಂಟ್​ವೊಂದರ 16ನೇ ಫ್ಲೋರ್​​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರಿನ ಯಲಹಂಕದಲ್ಲಿ ಓರ್ವ ವ್ಯಕ್ತಿ 16ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಯಲಹಂಕ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೋಲಾರದಲ್ಲಿ ಮೀಟರ್ ಬಡ್ಡಿ ಕಾಟಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಂಗಳೂರಿನ ಅಪಾರ್ಟ್‌ಮೆಂಟ್​ವೊಂದರ 16ನೇ ಫ್ಲೋರ್​​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ
ಬೆಂಗಳೂರಿನ ಅಪಾರ್ಟ್‌ಮೆಂಟ್​ವೊಂದರ 16ನೇ ಫ್ಲೋರ್​​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2024 | 4:55 PM

ಬೆಂಗಳೂರು, ಡಿಸೆಂಬರ್​ 14: ಅಪಾರ್ಟ್‌ಮೆಂಟ್​ನ 16ನೇ ಫ್ಲೋರ್‌ನಿಂದ ಹಾರಿ ಓರ್ವ ವ್ಯಕ್ತಿ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ನಗರದ ಯಲಹಂಕದ ಆರ್​​ಎಂಝಡ್​ ಗ್ಯಾಲರಿಯಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ರವಿಕುಮಾರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಆದರೆ ರವಿಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಸ್ಥಳಕ್ಕೆ ಯಲಹಂಕ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸಾಲಗಾರರ ಕಾಟ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಯತ್ನ: ಪ್ರಾಣಾಪಾಯದಿಂದ ಪಾರು

ಮತ್ತೊಂದು ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದೆ. ಬಡವರನ್ನ ಟಾರ್ಗೆಟ್ ಮಾಡಿ ಸಾಲ ಕೊಡುವುದು ಬಳಿಕ ಬಡ್ಡಿ ಚಕ್ರ ಬಡ್ಡಿ ಮೀಟರ್ ಬಡ್ಡಿ ಅಂತ ಅಮಾಯಕರು, ಬಡವರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅದರಂತೆ ಸಾಲಗಾರರ ಕಾಟ ತಾಳಲಾರದೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಜಸ್ಟ್​​ ವಾಟ್ಸ್ ಆ್ಯಪ್ ಕಾಲ್ ಮಾಡಿ ಕೋಟ್ಯಂತರ ರೂ ವಂಚನೆ: ಯಾರಿಗೂ ಹೇಳದಂತೆ ವೃದ್ಧನಿಗೆ ಬೆದರಿಕೆ

ರಾಯಲ್ಪಾಡು ಗ್ರಾಮದ ಕೋಮಲದೇವಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಮಗಳ ವಿದ್ಯಾಭಾಸ್ಯ ಮತ್ತು ಕುಟುಂಬ ನಿರ್ವಹಣೆಗೆ ಸಾಲ ಮಾಡಿದ್ದ ಕೋಮಲದೇವಿಗೆ ಇತ್ತೀಚೆಗೆ ಬಡ್ಡಿಕೋರರ ಕಾಟ ಹೆಚ್ಚಾಗಿತ್ತು. ಹಾಗಾಗಿ ಸಾಲ ಕೊಟ್ಟಿರುವವರು ಮನೆಯ ಬಳಿ ಬಂದು ಗಲಾಟೆ ಮಾಡುತ್ತಿರುವುದರಿಂದ ಮನನೊಂದು ಡೆತ್ ನೋಟ್​ ಬರೆದಿಟ್ಟು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಡೆತ್ ನೋಟ್​ನಲ್ಲಿ ಕೋಮಲದೇವಿ ಯಾರಿಗೆಲ್ಲಾ ಎಷ್ಟೆಷ್ಟು ಹಣ ಕೊಡಬೇಕು ಎಂದು ಬರೆದಿದ್ದಾರೆ. ಲಕ್ಷಾಂತರ ರೂ. ಸಾಲ ಮಾಡಿಕೊಂಡಿರುವ ಮಹಿಳೆ ಇವರಿಂದ ಕಿರುಕುಳ ಇದೆ ಎಂದು ಅಳವತ್ತುಕೊಂಡಿದ್ದಾರೆ. ಸದ್ಯ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಜೀವಕ್ಕೆ ಯಾವುದೆ ತೊಂದರೆ ಇಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಟೆಕ್ಕಿ ಅತುಲ್ ಆಯ್ತು ಈಗ ಪೊಲೀಸ್ ಸರದಿ, ಹೆಂಡತಿ ಕಾಟಕ್ಕೆ ಕಾನ್​ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ!

ಇನ್ನೂ ರಾಯಲಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಭಾಗದಲ್ಲಿ ಕೈ ಸಾಲ ಕೊಟ್ಟು ಮೀಟರ್ ಬಡ್ಡಿ ವ್ಯವಹಾರ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಅಂತಹವರಿಗೆ ಕಡಿವಾಣ ಹಾಕಬೇಕು ಎಂದು ನೊಂದ ಕುಟುಂಬದವರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್