ಮಾರಾಟ ಮಳಿಗೆಗಳಿಗೆ ಕೃಷಿ ವಿಚಕ್ಷಣ ದಳ ಭೇಟಿ : 186.16 ಕ್ವಿಂಟಲ್ ಅನಧಿಕೃತ ಬಿತ್ತನೆ ಬೀಜ ವಶ

ಶ್ರೀರಾಮ ಹೈಬ್ರಿಡ್ ಸೀಡ್ಸ್ ಮಾರಾಟ ಮಳಿಗೆಗೆ ಭೇಟಿ ನೀಡಿ ಅನಧಿಕೃತವಾಗಿ ದಾಸ್ತಾನು ಮಾಡಿದ ಸುಮಾರು 41.60 ಕ್ರೀಂಟಲ್ ನಷ್ಟು ಉಗಿ ಸೀಡ್ಸ್ ಸಂಸ್ಥೆಯ ಹೈಬ್ರಿಡ್ ಮೆಕ್ಕೆಜೋಳ ತಳಿಯ ಬೀಜಗಳ ದಾಸ್ತಾನನ್ನು ವಶಪಡಿಸಿಕೊಳ್ಳಲಾಯಿತು.

ಮಾರಾಟ ಮಳಿಗೆಗಳಿಗೆ ಕೃಷಿ ವಿಚಕ್ಷಣ ದಳ ಭೇಟಿ : 186.16 ಕ್ವಿಂಟಲ್ ಅನಧಿಕೃತ ಬಿತ್ತನೆ ಬೀಜ ವಶ
ಮಾರಾಟ ಮಳಿಗೆಗಳಿಗೆ ಕೃಷಿ ವಿಚಕ್ಷಣ ದಳ ಭೇಟಿ

Updated on: May 31, 2021 | 7:47 AM

ಹಾವೇರಿ : ಕೃಷಿ ಇಲಾಖೆ ವಿಚಕ್ಷಣ ದಳ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ವಿವಿಧ ಬಿತ್ತನೆ ಬೀಜ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಂದಾಜು‌ 186.16 ಕ್ವಿಂಟಲ್ ಮೆಕ್ಕೆಜೋಳದ ಬಿತ್ತನೆ ಬೀಜವನ್ನು ವಶಪಡಿಸಿಕೊಂಡಿದೆ. ಬೆಂಗಳೂರು ಕೃಷಿ ಇಲಾಖೆಯ ವಿಚಕ್ಷಣ ದಳದ ಅಪರ ಕೃಷಿ ನಿರ್ದೇಶಕ ಡಾ.ಅನು ಅವರ ಮುಂದಾಳತ್ವದಲ್ಲಿ ಹಾವೇರಿ ಜಿಲ್ಲಾ ಕೃಷಿ ಅಧಿಕಾರಿಗಳು, ರಾಣೇಬೆನ್ನೂರಿನ ವಿವಿಧ ಬೀಜ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ದಾಖಲಾತಿ ಮತ್ತು ಬೀಜ ದಾಸ್ತಾನನ್ನು ಪರಿಶೀಲಿಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ವಿಚಕ್ಷಣ ದಳದ ಬೆಂಗಳೂರು ಮತ್ತು ಕೃಷಿ ಇಲಾಖೆಯ ತಂಡವು ತಾಲೂಕಿನ ವಿವಿಧ ಬೀಜ ಮಾರಾಟ ಮಳಿಗೆಗಳಿಗೆ ಬೇಟಿ ನೀಡಿ ಮಾರಾಟದ ವಹಿವಾಟಿನ ಕುರಿತಾದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿತು. ಅಲ್ಲದೇ ಅನಧಿಕೃತ ಮಾರಾಟ ಹಾಗೂ ದಾಸ್ತಾನು ಕಂಡು ಬಂದ ಮಾರಾಟ ಮಳಿಗೆಗಳಿಗೆ ಮಾರಾಟ ತಡೆ ನೋಟಿಸ್ ಅನ್ನು ಜಾರಿ ಮಾಡಲಾಯಿತು. ಶ್ರೀರಾಮ ಹೈಬ್ರಿಡ್ ಸೀಡ್ಸ್ ಮಾರಾಟ ಮಳಿಗೆಗೆ ಭೇಟಿ ನೀಡಿ ಅನಧಿಕೃತವಾಗಿ ದಾಸ್ತಾನು ಮಾಡಿದ ಸುಮಾರು 41.60 ಕ್ರೀಂಟಲ್ ನಷ್ಟು ಉಗಿ ಸೀಡ್ಸ್ ಸಂಸ್ಥೆಯ ಹೈಬ್ರಿಡ್ ಮೆಕ್ಕೆಜೋಳ ತಳಿಯ ಬೀಜಗಳ ದಾಸ್ತಾನನ್ನು ವಶಪಡಿಸಿಕೊಳ್ಳಲಾಯಿತು.

ರಾಣೇಬೆನ್ನೂರಿನ ನಿಸರ್ಗ ಸೀಡ್ಸ್‌ಗೆ ಸೇರಿದ ಮತ್ತೊಂದು ಅನಧಿಕೃತ ಗೋದಾಮಿನಲ್ಲಿ 113 ಕ್ವಿಂಟಲ್​ನಷ್ಟು ಶಿವಂ ಸೀಡ್ಸ್ ಸಂಸ್ಥೆಯ ಮೆಕ್ಕೆಜೋಳ ತಳಿಯ ಬೀಜ ದಾಸ್ತಾನಿನ ಮಹಜರು ವಶಪಡಿಸಿಕೊಳ್ಳಲಾಯಿತು. ತಾಲೂಕಿನ ವ್ಯಾಪ್ತಿಯ ಬೀಜ ಸಂಸ್ಕರಣಾ ಘಟಕಗಳು ಹಾಗೂ ದಾಸ್ತಾನು ಮಳಿಗೆಗಳಿಗೆ ಭೇಟಿ ನೀಡಿ ದಾಸ್ತಾನು ಹಾಗೂ ದಾಖಲಾತಿಗಳನ್ನು ಪರಿಶೀಲಿಸಲಾಯಿತು. ಕ್ವಾಲೀಟಿ ಬೀಜ ಸಂಸ್ಕರಣಾ ಘಟಕದಲ್ಲಿ ಅನಧೀಕೃತವಾಗಿ ದಾಸ್ತಾನು ಮಾಡಿದ 32 ಕ್ವಿಂಟಾಲ್ ಸಿ.ಪಿ. ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ಮಾರಾಟಕ್ಕೆ ತಡೆಯಾಜ್ಞೆ ನೀಡಲಾಯಿತು ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.

ಇದನ್ನೂ ಓದಿ:

ನೂರಾರು ತಳಿಯ ಬಿತ್ತನೆ ಬೀಜಗಳ ಸಂಗ್ರಹಣೆ; ಕೋಲಾರದ ಮಹಿಳೆ ಮನೆಯಲ್ಲಿ ಇದೆ ಪುರಾತನ ಕಾಲದ ಬಿತ್ತನೆ ಬೀಜಗಳು

ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್

Loading...
Unable to load recommendations.
Follow Us