AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವೇಗೌಡ ಕುಟುಂಬಕ್ಕೆ ಮುಡಾದಿಂದ 48 ಸೈಟ್‌ ಹಂಚಿಕೆ ಆರೋಪ: ದಾಖಲೆ ನೀಡಲು ವಿಜಯೇಂದ್ರ ಮನೆಗೆ ಕಾಂಗ್ರೆಸ್​ ನಾಯಕರು

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ಮಾಡಿದ್ದ ವಿಧಾನಪರಿಷತ್​ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ರಮೇಶ್​ ಬಾಬು, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಕುಟುಂಬಕ್ಕೆ ಮುಡಾದಿಂದ 48 ಸೈಟ್‌ ಹಂಚಿಕೆ ಆರೋಪ ಮಾಡಿದ್ದರು. ಈ ಬಗ್ಗೆ ದಾಖಲೆ ಕೊಡಲು ಬಿವೈ ವಿಜಯೇಂದ್ರ ನಿವಾಸಕ್ಕೆ ಆಗಮಿಸಿದ್ದಾಗ ಪೊಲೀಸರು ತಡೆದಿದ್ದಾರೆ.

ದೇವೇಗೌಡ ಕುಟುಂಬಕ್ಕೆ ಮುಡಾದಿಂದ 48 ಸೈಟ್‌ ಹಂಚಿಕೆ ಆರೋಪ: ದಾಖಲೆ ನೀಡಲು ವಿಜಯೇಂದ್ರ ಮನೆಗೆ ಕಾಂಗ್ರೆಸ್​ ನಾಯಕರು
ದೇವೇಗೌಡ ಕುಟುಂಬಕ್ಕೆ ಮುಡಾದಿಂದ 48 ಸೈಟ್‌ ಹಂಚಿಕೆ ಆರೋಪ: ದಾಖಲೆ ನೀಡಲು ವಿಜಯೇಂದ್ರ ಮನೆಗೆ ಕಾಂಗ್ರೆಸ್​ ನಾಯಕರು
Sunil MH
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 14, 2024 | 5:24 PM

Share

ಬೆಂಗಳೂರು, ಜುಲೈ 14: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ (HD Deve Gowda) ಕುಟುಂಬಕ್ಕೆ ಮುಡಾದಿಂದ 48 ಸೈಟ್‌ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದು, ಆದರೆ ರಸ್ತೆಯಲ್ಲೇ ತಡೆದ ಪೊಲೀಸರು ವಾಪಸ್ ಕಳಿಸಿದ್ದಾರೆ. 48 ಸೈಟ್‌ ಹಂಚಿಕೆ ಆರೋಪ್​ ಕೇಸ್​​ ಬಗ್ಗೆ ತನಿಖೆಗೆ ಕೋರಿ 2011ರಲ್ಲಿ ಸಭಾಪತಿಗೆ ಬಿಎಸ್​ ಯಡಿಯೂರಪ್ಪ ದಾಖಲೆ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಮುಖಂಡರು ಇದರ ಚರ್ಚೆಯನ್ನು ಮುಂದಿವರೆಸಲು ವಿಜಯೇಂದ್ರಗೆ ಆಗ್ರಹಿಸಿದ್ದರು. ಈ‌ ಹಿನ್ನೆಲೆಯಲ್ಲಿ ಈ ಆರೋಪಕ್ಕೆ ಸಂಬಂಧಿಸಿದ ದಾಖಲೆ ಕೊಡಲು ವಿಜಯೇಂದ್ರ ನಿವಾಸಕ್ಕೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಮತ್ತು ಯುವ ಕಾಂಗ್ರೆಸ್ ಮುಖಂಡ ಮನೋಹರ್​​ ಆಗಮಿಸಿದ್ದರು. ಆದರೆ ನಿವಾಸದ ಬಳಿ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದಿದ್ದಾರೆ.

ಬಿಜೆಪಿಗೆ ರಮೇಶ್​ ಬಾಬು ಪ್ರಶ್ನೆ 

ಶನಿವಾರ ಸುದ್ದಿಗೋಷ್ಠಿ ಮಾಡಿದ್ದ ವಿಧಾನಪರಿಷತ್​ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ರಮೇಶ್​ ಬಾಬು ಮುಡಾ ಸೈಟ್​ ಹಂಚಿಕೆಯಲ್ಲಿ, ಮಾಜಿ ಪ್ರಧಾನಿ ಹೆಚ್​ಡೆ ದೇವೆಗೌಡರು ತಮ್ಮ ಕುಟುಂಬ ಸದಸ್ಯರಿಗೆ 48 ನಿವೇಶನಗಳನ್ನು ಹಂಚಿಕೆ ಆರೋಪ ಮಾಡಿದ್ದು, ಬಿಜೆಪಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇಡಿ ಬಂಧನದ ಭೀತಿಯಿಂದ ಖಾಸಗಿ ಕಾರಿನಲ್ಲಿ ದದ್ದಲ್ ಪರಾರಿ, ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ

ಬಿಎಸ್​ ಯಡಿಯೂರಪ್ಪ 2011ರಲ್ಲಿ ಸಭಾಪತಿಗೆ ಸಲ್ಲಿಸದ ದಾಖಲೆಗಳ ಪ್ರಕಾರ ಹೆಚ್​ಡಿ ಕುಮಾರಸ್ವಾಮಿ ಅವರಿಗೆ 300\200 ಹಂಚಿಕೆ ಬಗ್ಗೆ ತಿಳಿಸಿದ್ದಾರೆ. ಇದನ್ನು ಪರಿಷತ್ತಿನ ಕಲಾಪದಲ್ಲಿ ಕೂಡ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಬಿಜೆಪಿ ಅವರ ನಿಲುವೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಮುಡಾ ಸೈಟ್ ಹಂಚಿಕೆಯಲ್ಲಿ ಯಾವುದೇ ಹಗರಣ ಆಗಿಲ್ಲ’: ಸಿಎಂ ಸಿದ್ದರಾಮಯ್ಯ

ಮುಡಾ ಹಗರಣದಲ್ಲಿ ಯಾರೆಲ್ಲಾ ಬಿಜೆಪಿ ನಾಯಕರು ಎಷ್ಟು ನಿವೇಶಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಲಿ. ಏಕೆಂದರೆ ಬಿಜೆಪಿ ಅಧಿಕಾರಿದಲ್ಲಿ ಇದ್ದಾಗಲೇ ಮೈಸೂರಿನ ಮುಡಾದಲ್ಲಿ ಹೆಚ್ಚು ಹೆಚ್ಚು ಹಗರಣಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಸನ್ಮಾನಿಸಿದ ಪ್ರಧಾನಿ ಮೋದಿ
ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಸನ್ಮಾನಿಸಿದ ಪ್ರಧಾನಿ ಮೋದಿ
ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಟೋದಲ್ಲಿ 120 ಮೀಟರ್ ಎಳೆದೊಯ್ದ ಚಾಲಕ
ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಟೋದಲ್ಲಿ 120 ಮೀಟರ್ ಎಳೆದೊಯ್ದ ಚಾಲಕ
Carlos Alcaraz: ಹೊಸ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
Carlos Alcaraz: ಹೊಸ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಇನ್ಮುಂದೆ ಕಾಲುಂಗರ ಹಾಕಿಕೊಳ್ಳಲಿದ್ದಾರೆ ರಜತ್; ಕಾರಣ ಏನು?
ಇನ್ಮುಂದೆ ಕಾಲುಂಗರ ಹಾಕಿಕೊಳ್ಳಲಿದ್ದಾರೆ ರಜತ್; ಕಾರಣ ಏನು?
ಶಾಲಾ ನಾಟಕ, ಬುರ್ಖಾ ಧರಿಸಿದವರನ್ನು ಉಗ್ರರೆಂದು ಬಿಂಬಿಸಿದ ಮಕ್ಕಳು
ಶಾಲಾ ನಾಟಕ, ಬುರ್ಖಾ ಧರಿಸಿದವರನ್ನು ಉಗ್ರರೆಂದು ಬಿಂಬಿಸಿದ ಮಕ್ಕಳು
ರಾಯಚೂರಿನಲ್ಲಿ ಮಳೆ ಅಬ್ಬರ: ಜಿಲ್ಲಾಧಿಕಾರಿ ಕಚೇರಿ ರಸ್ತೆ ಸಂಪೂರ್ಣ ಜಲಾವೃತ
ರಾಯಚೂರಿನಲ್ಲಿ ಮಳೆ ಅಬ್ಬರ: ಜಿಲ್ಲಾಧಿಕಾರಿ ಕಚೇರಿ ರಸ್ತೆ ಸಂಪೂರ್ಣ ಜಲಾವೃತ
ಶೂ ಧರಿಸಿ ಹವನದಲ್ಲಿ ಪಾಲ್ಗೊಂಡು ಜನರ ಕೆಂಗಣ್ಣಿಗೆ ಗುರಿಯಾದ ಲಾಲು ಪ್ರಸಾದ್
ಶೂ ಧರಿಸಿ ಹವನದಲ್ಲಿ ಪಾಲ್ಗೊಂಡು ಜನರ ಕೆಂಗಣ್ಣಿಗೆ ಗುರಿಯಾದ ಲಾಲು ಪ್ರಸಾದ್
ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ​ ನೀರು ಬಿಡುಗಡೆ
ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ​ ನೀರು ಬಿಡುಗಡೆ
ಝೆಲೆನ್ಸ್ಕಿ ಬಟ್ಟೆ ನೋಡಿ ಹೀಯಾಳಿಸಿದ್ದ ಪತ್ರಕರ್ತನಿಂದ ಇಂದು ಹೊಗಳಿಕೆಯ ಮಾತು
ಝೆಲೆನ್ಸ್ಕಿ ಬಟ್ಟೆ ನೋಡಿ ಹೀಯಾಳಿಸಿದ್ದ ಪತ್ರಕರ್ತನಿಂದ ಇಂದು ಹೊಗಳಿಕೆಯ ಮಾತು
Daily devotional: ನಿಂತು ಊಟ ಮಾಡಬಾರದು ಯಾಕೆ ಅಂತ ತಿಳಿದುಕೊಳ್ಳಿ!
Daily devotional: ನಿಂತು ಊಟ ಮಾಡಬಾರದು ಯಾಕೆ ಅಂತ ತಿಳಿದುಕೊಳ್ಳಿ!