AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಣ್ಣೆ ಪ್ರಿಯರಿಗೆ ಬಿಗ್​ ಶಾಕ್​: ನ 20ರಂದು ಕರ್ನಾಟಕದಾದ್ಯಂತ ಮದ್ಯದಂಗಡಿಗಳು ಬಂದ್​

ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ವರ್ಗಾವಣೆ ಮತ್ತು ಪ್ರಮೋಷನ್‌ಗೆ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ನಕಲಿ ಮದ್ಯದ ಪ್ರಮಾಣ ಹೆಚ್ಚಾಗಿದೆ. ಮದ್ಯದಂಗಡಿ ಮಾಲೀಕರು ನವೆಂಬರ್ 20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಿದ್ದಾರೆ.

ಎಣ್ಣೆ ಪ್ರಿಯರಿಗೆ ಬಿಗ್​ ಶಾಕ್​: ನ 20ರಂದು ಕರ್ನಾಟಕದಾದ್ಯಂತ ಮದ್ಯದಂಗಡಿಗಳು ಬಂದ್​
ಎಣ್ಣೆ ಪ್ರಿಯರಿಗೆ ಬಿಗ್​ ಶಾಕ್​: ನ 20ರಂದು ಕರ್ನಾಟಕದಾದ್ಯಂತ ಮದ್ಯದಂಗಡಿಗಳು ಬಂದ್​
Vinayak Hanamant Gurav
| Edited By: |

Updated on:Nov 14, 2024 | 3:41 PM

Share

ಬೆಂಗಳೂರು, ನವೆಂಬರ್​ 14: ಅಬಕಾರಿ ಇಲಾಖೆಯಲ್ಲಿ (Excise Department) ಮಿತಿಮೀರಿದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ವರ್ಗಾವಣೆ, ಪ್ರಮೋಷನ್​ಗೆ ಸನ್ನದುದಾರರಿಂದ ಮನಸೋ ಇಚ್ಛೆ ಕೋಟಿ ಕೋಟಿ ರೂ. ಲಂಚ ಕೇಳಲಾಗುತ್ತಿದೆ. ಅಧಿಕಾರಿಗಳ ಲಂಚಾವತಾರದಿಂದ‌ ನಕಲಿ ಅಂತಾರಾಜ್ಯ ಮದ್ಯ ಹೆಚ್ಚಳವಾಗಿದೆ. ಹೀಗಾಗಿ ಅಬಕಾರಿ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರಕ್ಕೆ ಮುಂದಾಗಿದ್ದು, ನವೆಂಬರ್ 20ರಂದು ಕರ್ನಾಟಕದಾದ್ಯಂತ ಮದ್ಯ ಮಾರಾಟ ಬಂದ್​ಗೆ ಕರೆ ನೀಡಲಾಗಿದೆ.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ: ಗೋವಿಂದರಾಜ್​ ಹೆಗ್ಡೆ

ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ವೈನ್ ಮರ್ಚೆಂಟ್​ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್​ ಹೆಗ್ಡೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 20ರಂದು ಕರ್ನಾಟಕದಾದ್ಯಂತ ಎಂಎಸ್​​ಐಎಲ್​ ಹೊರತುಪಡಿಸಿ ಎಲ್ಲಾ ಬಾರ್​ಗಳು ಬಂದ್​ಗೆ ಕರೆ ನೀಡಿರುವುದಾಗಿ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ನಮ್ಮ ಜೊತೆ ಸಿಎಂ, ಅಬಕಾರಿ ಸಚಿವರು ಮೀಟಿಂಗ್ ಮಾಡಬೇಕು. ನಾವು 500-900 ಕೋಟಿ ರೂ. ಲಂಚದ ಬಗ್ಗೆ ಎಂದೂ ಮಾತನಾಡಿಲ್ಲ. ತಪ್ಪು ಮಾಹಿತಿಯನ್ನು ಪ್ರಧಾನಿಗೆ ಯಾರು ಕೊಟ್ಟರೋ ಗೊತ್ತಿಲ್ಲ. ಪ್ರಧಾನಿ ವಿಚಾರದ ಬಗ್ಗೆ ಏನೂ ಹೇಳಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್, ಬ್ಯಾಡ್ ನ್ಯೂಸ್: ಇಳಿಕೆಯಾಗಲಿದೆ ಪ್ರೀಮಿಯಂ ಸ್ಕಾಚ್ ದರ, ದುಬಾರಿಯಾಗಲಿದೆ ಬಡವರ ಮದ್ಯ

ಸಿಎಲ್​ 7 ಬಾರ್​ಗಳಿಗೆ ಬೇಕಾ ಬಿಟ್ಟಿ ಲೈಸನ್ಸ್ ಕೊಡಲಾಗುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವುದೇ ಇಲ್ಲ. ಆರ್​ಟಿಐ ಕಾರ್ಯಕರ್ತರ ಹೇಳಿಕೆ ಬಗ್ಗೆ ಮಾತನಾಡಿರೋದು ಸರಿಯಲ್ಲ. ನಮ್ಮ ಬೇಡಿಕೆಗಳ ಬಗ್ಗೆ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಬೇಡಿಕೆ ಬಗ್ಗೆ ಸರ್ಕಾರ ತಿರ್ಮಾನ ತೆಗೆದುಕೊಂಡರೆ ಒಳ್ಳೇದು ಎಂದು ಹೇಳಿದ್ದಾರೆ.

ಮದ್ಯ ಮಾರಾಟಗಾರರ ಸಂಘದ ಬೇಡಿಕೆ ತಿಳಿಸಿದ್ದೇವೆ: ಗುರುಸ್ವಾಮಿ 

ವಿಧಾನಸೌಧದಲ್ಲಿ ಸಭೆ ಬಳಿಕ ಮದ್ಯ ಮಾರಾಟಗಾರರ ಸಂಘದ ಒಕ್ಕೂಟದ ಅಧ್ಯಕ್ಷ ಗುರುಸ್ವಾಮಿ ಪ್ರತಿಕ್ರಿಯಿಸಿದ್ದು, ಮದ್ಯ ಮಾರಾಟಗಾರರ ಸಂಘದ ಬೇಡಿಕೆ ತಿಳಿಸಿದ್ದೇವೆ. ಭ್ರಷ್ಟಾಚಾರದ ವಿಚಾರಗಳನ್ನೂ ಗಮನಕ್ಕೆ ತಂದಿದ್ದೇವೆ. ಹಣಕಾಸು ಇಲಾಖೆ ಸಿಎಸ್ ಜೊತೆಗೆ ಎಸಿಎಸ್ ಮಾತಾಡುವುದಾಗಿ ಹೇಳಿದ್ದಾರೆ. ಬಳಿಕ ಸಿಎಂ ಜೊತೆ ಸಭೆ ಮಾಡಿ ಸರ್ಕಾರ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:22 pm, Thu, 14 November 24