AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI ಬಳಿಕ ಆರ್ಮಿ ಪರೀಕ್ಷೆಯಲ್ಲೂ ಕಳ್ಳಾಟ: ಎಲೆಕ್ಟ್ರಾನಿಕ್ ಡಿವೈಸ್​​ ಪತ್ತೆ

ಪಿಎಸ್‌ಐ ನೇಮಕಾತಿ ಹಗರಣದ ಬಳಿಕ ಇದೀಗ ಆರ್ಮಿ ಪರೀಕ್ಷೆಯಲ್ಲೂ ಕಳ್ಳಾಟ ನಡೆದಿರುವ ಆರೋಪ ಕೇಳಿಬಂದಿದೆ. ಪರೀಕ್ಷಾ ಆವರಣದಲ್ಲಿ ಎಲೆಕ್ಟ್ರಾನಿಕ್​​ ಡಿವೈಸ್​​ಗಳು ಪತ್ತೆ ಆಗಿವೆ. ಇನ್ನು ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದಡಿ 18 ಅಭ್ಯರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PSI ಬಳಿಕ ಆರ್ಮಿ ಪರೀಕ್ಷೆಯಲ್ಲೂ ಕಳ್ಳಾಟ: ಎಲೆಕ್ಟ್ರಾನಿಕ್ ಡಿವೈಸ್​​ ಪತ್ತೆ
ಪ್ರಾತಿನಿಧಿಕ ಚಿತ್ರImage Credit source: esaic.org
ರಾಚಪ್ಪಾಜಿ ನಾಯ್ಕ್
| Edited By: |

Updated on:Feb 09, 2026 | 7:56 PM

Share

ಬೆಂಗಳೂರು, ಫೆಬ್ರವರಿ 09: ಆರ್ಮಿ ಗ್ರೂಪ್ ಸಿ ಹುದ್ದೆ ಪರೀಕ್ಷೆ (Army Group C exam) ವೇಳೆ ಕಳ್ಳಾಟ ಆರೋಪ ಹಿನ್ನೆಲೆ 18 ಪರೀಕ್ಷಾರ್ಥಿಗಳನ್ನು (examinee) ಕರೆತಂದ ಬೆಂಗಳೂರಿನ ಹಲಸೂರು ಠಾಣಾ ಪೊಲೀಸರು ವಿಚಾರಣೆ ಮಾಡಿದ್ದಾರೆ. ಫೆಬ್ರವರಿ 08ರಂದು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ನಕಲು ಮಾಡಿರುವ ಆರೋಪ ಕೇಳಿಬಂದಿದೆ. ಮೂರು ಮೊಬೈಲ್ ಹಾಗೂ ಎಲೆಕ್ಟ್ರಿಕ್ ಡಿವೈಸ್​​ ಜಪ್ತಿ ಮಾಡಲಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷಾ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿವೈಸ್​ಗಳು ಪತ್ತೆ

ಸುರೇಂಧರ್​, ಸಂದೀಪ್ ಬಿನ್ ರಾಜೇಶ್, ಮೊಂಟಿ, ಅಜಯ್ ಕುಮಾರ್ , ಅನುಜ್, ರಾಹುಲ್ ರಾಜೇಂದ್ರ, ಸುಮೀತ್, ಅಮನ್, ಅಂಕಿತ್, ಯೋಗೇಶ್, ವಿಕಾಸ್, ಅಂಕಿತ್, ಅಮನ್ ರೇದು, ರಜತ್, ವಿನಯ್, ಅಂಕಿತ್, ಅಮನ್ ಕುಮಾರ್ ನಕಲು ಮಾಡಿದ ಪರೀಕ್ಷಾರ್ಥಿಗಳು ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 139 ಬೋಧಕ ಹುದ್ದೆಗಳು; ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಶೇ. 75ರಷ್ಟು ಮೀಸಲಾತಿ

ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿರುವುದು ಪತ್ತೆ ಆಗಿದೆ. ಪರೀಕ್ಷಾ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿವೈಸ್​ಗಳು ಪತ್ತೆ ಆಗಿವೆ. ಅಲ್ಲದೇ ಅಮನ್ ಮತ್ತು ರಜತ್ ಬ್ಯಾಗ್​​ಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆ ಆಗಿವೆ.

ಎಫ್ಐಆರ್​ ದಾಖಲು

ಸದ್ಯ ಕರ್ನಲ್ ಮತ್ತು ಸೆಕ್ಯೂರಿಟಿ ಆಫೀಸರ್​​ ಫಾರ್​​ ಕಮಾಂಡೆಂಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜ್ಯೋತಿರ್ಲಿಂಗಮ್​​ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್ಐಆರ್​ ದಾಖಲಾಗಿದೆ. ಹಲಸೂರಿನ 515 ಆರ್ಮಿ ಬೇಸ್ ವರ್ಕ್​​ಶಾಪ್​ನಲ್ಲಿ ಸಿವಿಲ್ ಡಿಫೆನ್ಸ್ ಎಂಪ್ಲಾಯಿ ರೆಕ್ರೂಟ್ಮೆಂಟ್​ನ ಗ್ರೂಪ್ ಸಿಯ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳ ನೇರ ನೇಮಕಾತಿಗಾಗಿ ಫೆಬ್ರವರಿ 08ರಂದು ಲಿಖಿತ ಪರೀಕ್ಷೆ ನಡೆದಿತ್ತು.

ಇದನ್ನೂ ಓದಿ: Home Guard Recruitment 2026: ಶಿವಮೊಗ್ಗದಲ್ಲಿ ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ;10th ಪಾಸಾಗಿದ್ರೆ ಸಾಕು!

ಬೆಳಗ್ಗೆ 10 ಗಂಟೆಯಿಂದ 12 ಗಂಟೆಗಳವರೆಗೆ ನಡೆದಿತ್ತು. ಪರೀಕ್ಷೆ ಸಮಯದಲ್ಲಿ ಒಟ್ಟು 18 ಜನ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿರುವುದು ಪತ್ತೆ ಆಗಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:54 pm, Mon, 9 February 26

ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?
ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ