ಬೈ ಎಲೆಕ್ಷನ್: ಬಾಗಲ’ಕೋಟೆ’ ಯಾರಿಗೆ? ಹೇಗಿದೆ ಕಾಂಗ್ರೆಸ್-ಬಿಜೆಪಿ ನಾಯಕರ ಗೆಲುವಿನ ಲೆಕ್ಕಾಚಾರ?

ಬಾಗಲಕೋಟೆ ಉಪಚುನಾವಣೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಮ್‌ನಲ್ಲಿ ಭದ್ರವಾಗಿದೆ. ಇನ್ನೊಂದೆಡೆ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳು ಜೋರಾಗಿವೆ. ಹಾಗಾದ್ರೆ, ಯಾವ ಭಾಗದಲ್ಲಿ ‌ಎಷ್ಟು ಮತದಾನ‌ವಾಗಿದೆ? ಮಹಿಳೆಯರು ಎಷ್ಟು ಮತದಾನ ಮಾಡಿದ್ದಾರೆ? ಪುರುಷರ ಮತದಾನ ಪ್ರಮಾಣ ಎಷ್ಟು? ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು‌ ಲೆಕ್ಕಾಚಾರ ಹೇಗಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಬೈ ಎಲೆಕ್ಷನ್: ಬಾಗಲಕೋಟೆ ಯಾರಿಗೆ? ಹೇಗಿದೆ ಕಾಂಗ್ರೆಸ್-ಬಿಜೆಪಿ ನಾಯಕರ ಗೆಲುವಿನ ಲೆಕ್ಕಾಚಾರ?
Bagalkot
Edited By:

Updated on: Apr 12, 2026 | 10:36 PM

ಬಾಗಲಕೋಟೆ, (ಏಪ್ರಿಲ್ 12): ಕಾಂಗ್ರೆಸ್ ಶಾಸಕರಾಗಿದ್ದ ಹೆಚ್ ವೈ ಮೇಟಿ ಅಕಾಲಿಕ ನಿಧನದಿಂದ ನಡೆದ ಬಾಗಲಕೋಟೆ ಉಪಚುನಾವಣೆ (Bagalkot By Election) ಅಂತ್ಯವಾಗಿದ್ದು. ಇದೀಗ ಎಲ್ಲರ ಚಿತ್ತ ಮೇ 4ರ ಫಲಿತಾಂಶದತ್ತ ನೆಟ್ಟಿದೆ. ಉಪಚುನಾವಣೆಯಲ್ಲಿ ಶೇ.68.74ರಷ್ಟು ಮತದಾನವಾಗಿದೆ.  ಆದ್ರೆ, ಕಳೆದ ಬಾರಿ ಅಂದರೆ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಶೇ. 69.40ರಷ್ಟು ವೋಟಿಂಗ್ ಆಗಿದ್ದು,  ಈ ಬಾರಿ ಕಳೆದ ಬಾರಿಗಿಂತ‌ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ  ಮತದಾನದ ಪ್ರತಿಶತ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಮತದಾನದ ಆಧಾರದಲ್ಲಿ ಲೆಕ್ಕಾಚಾರ

ನಗರ ಪ್ರದೇಶದಲ್ಲಿ ಶೇ 61.24ರಷ್ಟು ಮತದಾನ ಆಗಿದ್ದರೆ, ಗ್ರಾಮೀಣ ಭಾಗದಲ್ಲಿ 74ರಷ್ಟು ಮತದಾನವಾಗಿದೆ. ನಗರದಲ್ಲಿ 70% ದಾಟಿದರೆ ಬಿಜೆಪಿಗೆ ಪ್ಲಸ್ ಎಂಬ ಲೆಕ್ಕಾಚಾರವಿದೆ. ಆದರೆ ನಗರದ ಪ್ರದೇಶದಲ್ಲಿ ಶೇ.61.24ರಷ್ಟು ಮತದಾನವಾಗಿದೆ. ಹೀಗಾಗಿ ಬಿಜೆಪಿಗರಿಗೆ ಫಲಿತಾಂಶ ಏನಾಗಲಿದೆ ಎನ್ನುವ ಟೆನ್ಷನ್ ಶುರುವಾಗಿದೆ. ಇನ್ನೊಂದೆಡೆ ಮಹಿಳೆಯರ ಮತದಾನವೂ ಸಹ ಕಡಿಮೆಯಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಮತ ಸೆಳೆಯಬಹುದು ಎನ್ನುವ ಕಾಂಗ್ರೆಸ್ ನ ಲೆಕ್ಕಾಚಾರ ಹುಸಿಯಾಗಿದೆ. ಹೀಗಾಗಿ ಬಾಗಲಕೋಟೆ ಉಪಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ: ಎಷ್ಟು ಮತದಾನ? ಬಿಜೆಪಿ-ಕಾಂಗ್ರೆಸ್​​ ನಾಯಕರ ಗೆಲುವಿನ ಲೆಕ್ಕಾಚಾರ ಏನು?

ಇನ್ನು ಕಾಂಗ್ರೆಸ್​​​ಗೆ ಮೊದಲಿನಿಂದಲೂ ಗ್ರಾಮೀಣ ಮತಗಳು ಆಸರೆಯಾಗಿವೆ. ಹೀಗಾಗಿ ಕಾಂಗ್ರೆಸ್ ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಮತಗಳನ್ನೇ ನಂಬಿಕೊಂಡು ಬಂದಿದೆ. ಅದರಂತೆ ಈ ಬಾರಿ ಉಪಚುನಾವಣೆಯಲ್ಲೂ ಸಹಗ್ರಾಮೀಣ ಭಾಗದಲ್ಲಿ ಈ ಬಾರಿ ಶೇ.74.61ರಷ್ಟು ಮತದಾನವಾಗಿದ್ದು, ಕಾಂಗ್ರೆಸ್​​ ನಾಯಕರಲ್ಲಿ ಗೆಲುವಿನ ವಿಶ್ವಾಸ ಹೆಚ್ಚಾಗಿದೆ. ಆದ್ರೆ, ಮಹಿಳೆಯರ ಮತಗಳನ್ನ ಸೆಳೆಯಲು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪ್ರಮುಖ ಅಸ್ತ್ರವಾಗಿ ಬಳಿಸಿಕೊಂಡಿತ್ತು. ಆದ್ರೆ, ಬೈ ಎಲೆಕ್ಷನ್​​ನಲ್ಲಿ ಮಹಿಳೆ ಮತದಾನದಿಂದ ದೂರು ಉಳಿದುಕೊಂಡಿದ್ದಾರೆ.

ಹೌದು.. ಮಹಿಳೆಯರು ಮತಗಳು ಅಷ್ಟಾಗಿ ಚಲಾವಣೆಯಾಗಿಲ್ಲ.ಕ್ಷೇತ್ರದಲ್ಲಿರೋ ಒಟ್ಟು 2,59,797 ಮತದಾರರ ಪೈಕಿ ಮಹಿಳೆಯರು ಮತದಾನದಲ್ಲಿ ಶೇ.67.80 ರಷ್ಟು ಮತದಾನ ಮಾಡಿದ್ದರೆ, ಪುರುಷರು ಶೇ.69.48ರಷ್ಟು ಮತದಾನ ಮಾಡಿದ್ದಾರೆ. ಪ್ರತಿಶತ ಮತದಾನದಲ್ಲಿ ಪುರುಷರ ಮತದಾನವೇ ಹೆಚ್ಚಾಗಿದೆ. ಗ್ಯಾರಂಟಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಮತ ಹಾಕಬಹುದೆಂಬ ಕಾಂಗ್ರೆಸ್​​ನ ಲೆಕ್ಕಾಚಾರ ಹುಸಿಯಾಗಿದೆ. ಹೀಗಾಗಿ ಸಹಜವಾಗಿ ಫಲಿತಾಂಶ ಕಾಂಗ್ರೆಸ್​​​ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಸಚಿವರಾದಿಯಾಗಿ ಎಲ್ಲರೂ ಅಕ್ಕ, ಅವ್ಚ, ತಂಗಿ ಅಂತ ಎಲ್ಲರಿಗೂ ಪ್ರತಿ ತಿಂಗಳು 2 ಸಾವಿರ ಗೃಹಲಕ್ಷ್ಮೀ ಹಣ, ಬಸ್ ಫ್ರೀ, ಕರೆಂಟ್ ಫ್ರೀ ಅಂತ ಪ್ರಚಾರ ಮಾಡಿದ್ರು.ಆದ್ರೆ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬಹುದಿತ್ತು. ಆದ್ರೆ ಹಾಗೆ ಆಗಿಲ್ಲ. ಗ್ಯಾರಂಟಿ ಯೋಜನೆಗಳು, ಅನುಕಂಪ, ಸರ್ಕಾರದ ಅಭಿವೃದ್ಧಿ ಕಾರ್ಯಗಳೊಂದಿಗೆ ಬೈ ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್ ನಾಯಕರಿಗೆ ಮಹಿಳೆಯರ ಮತ ಕಡಿಮೆ ಆಗಿದ್ದು ತಲೆ‌ನೋವಾಗಿದೆ.

ಒಟ್ಟಿನಲ್ಲಿ ಮತದಾನದ‌ ನಂತರ ಬಿಜೆಪಿ ಕಾಂಗ್ರೆಸ್ ತಮ್ಮದೇ ಆದ ಲೆಕ್ಕಾಚಾರ ಹೇಳುತ್ತಾ ತಮ್ಮ ತಮ್ಮ ಗೆಲುವು ನಿಶ್ಚಿತ ಅಂತಿದ್ದಾರೆ. ಆದರೆ ಮೇ 4ರ ಫಲಿತಾಂಶ ಇದೆಲ್ಲದಕ್ಕೂ ಉತ್ತರ ನೀಡಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us