AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮಿ ಯೋಜನೆಯಲ್ಲಿ ‘ಗೋಲ್‌ಮಾಲ್’; ಗ್ಯಾರಂಟಿ ಸಮಿತಿ ಅಧ್ಯಕ್ಷರ ವಿಡಿಯೋ ವೈರಲ್!

ಕೊಪ್ಪಳ ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿ ದುರಪಯೋಗವಾಗಿರುವ ವಿಚಾರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಅಸಲಿ ಗೋಲ್‌ಮಾಲ್ ಒಪ್ಪಿಕೊಂಡಿದ್ದಾರೆ. ಸತ್ತವರ ಖಾತೆಯಿಂದ ಅಕ್ರಮವಾಗಿ ಹಣ ಡ್ರಾ ಮಾಡಿದವರ ವಿರುದ್ಧ ಕೇಸ್ ದಾಖಲಿಸಿ ಜೈಲಿಗಟ್ಟಲಾಗುವುದು ಮತ್ತು ಅಂತಹ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಸೀಜ್ ಮಾಡಲು ಸೂಚಿಸಲಾಗಿದೆ ಎಂದು ಅವರು ವಿಡಿಯೋ ಮೂಲಕ ಎಚ್ಚರಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ 'ಗೋಲ್‌ಮಾಲ್'; ಗ್ಯಾರಂಟಿ ಸಮಿತಿ ಅಧ್ಯಕ್ಷರ ವಿಡಿಯೋ ವೈರಲ್!
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ
ಶಿವಕುಮಾರ್ ಪತ್ತಾರ್
| Edited By: |

Updated on:Aug 09, 2026 | 10:33 AM

Share

ಮುಖ್ಯಾಂಶಗಳು

  • ಕೊಪ್ಪಳದಲ್ಲಿ ಮೃತಪಟ್ಟವರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ.
  • ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿರುವುದನ್ನು ಗ್ಯಾರಂಟಿ ಸಮಿತಿ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ.
  • ಅಕ್ರಮವಾಗಿ ಹಣ ಡ್ರಾ ಮಾಡಿದವರ ವಿರುದ್ಧ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳ, ಆಗಸ್ಟ್ 09: ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿರುವ ಮತ್ತು ಅದನ್ನು ರಿಕವರಿ ಮಾಡುತ್ತಿರುವ ವಿಚಾರ ದೊಡ್ಡ ವಿವಾದ ಸೃಷ್ಟಿಸುತ್ತಿದ್ದಂತೆಯೇ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋ ಭಾರಿ ಸಂಚಲನ ಮೂಡಿಸಿದೆ.

ಶ್ರೀನಿವಾಸ್ ರೆಡ್ಡಿ ವೀಡಿಯೋ ಇಲ್ಲಿದೆ

ಮೊದಲಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ನಡೆದಿಲ್ಲ ಎಂದು ವಾದಿಸಿದ್ದ ರೆಡ್ಡಿ ಶ್ರೀನಿವಾಸ್, ಇದೀಗ ಮೃತಪಟ್ಟವರ ಖಾತೆಯಿಂದ ಹಣ ಡ್ರಾ ಆಗುತ್ತಿರುವುದು ಗೋಲ್‌ಮಾಲ್ ಹೌದು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವ ಅವರು, “ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕುವುದರಿಂದ ಇಲಾಖೆಯ ಮಟ್ಟದಲ್ಲಿ ಯಾವುದೇ ಗೋಲ್‌ಮಾಲ್ ಸಾಧ್ಯವಿಲ್ಲ. ಆದರೆ, ಫಲಾನುಭವಿಗಳು ಮೃತಪಟ್ಟ ನಂತರವೂ ಅವರ ಖಾತೆಯಲ್ಲಿರುವ ಹಣವನ್ನು ಯಾರೋ ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಹಣ ಡ್ರಾ ಮಾಡಿದರೆ ಜೈಲು ಫಿಕ್ಸ್; ಅಕೌಂಟ್ ಸೀಜ್ ಮಾಡಲು ಸೂಚನೆ

“ಸತ್ತವರ ಬ್ಯಾಂಕ್ ಖಾತೆಗಳನ್ನು ಯಾರು ಬಳಸುತ್ತಿದ್ದಾರೆ ಮತ್ತು ಅದರಿಂದ ಯಾರು ಹಣ ಡ್ರಾ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ನಾವು ಅಕೌಂಟ್‌ಗಳ ಪರಿಶೀಲನೆ ನಡೆಸುತ್ತಿದ್ದೇವೆ. ಅಕ್ರಮವಾಗಿ ಹಣ ಡ್ರಾ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಕೇಸ್ ದಾಖಲಿಸಿ ಜೈಲಿಗೆ ಅಟ್ಟಲಾಗುವುದು. ಅಂತಹ ದುರಪಯೋಗವಾಗಿರುವ ಖಾತೆಗಳನ್ನು ತಕ್ಷಣವೇ ಸೀಜ್ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ರೆಡ್ಡಿ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಪಾರದರ್ಶಕತೆ ಇದ್ದರೂ, ತಳಮಟ್ಟದಲ್ಲಿ ಸತ್ತವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವ ಜಾಲದ ವಿರುದ್ಧ ತನಿಖೆ ಚುರುಕುಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Sun, 9 August 26

Follow Us
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!