ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ

ಗೊಂದಳಿ ಕಲಾವಿದ ವೆಂಕಪ್ಪ ಸುಗತೇಕರ್ ಅವರಿಗೆ 2025ರ​ ಪದ್ಮಶ್ರೀ ಪ್ರಶಸ್ತಿ ಒಲಿದೆ ಬಂದಿದೆ. 71 ವರ್ಷಗಳಿಂದ ಗೊಂದಳಿ ಪದಗಳನ್ನು ಹಾಡುತ್ತಿರುವ ಅವರು, 2022ರಲ್ಲಿ ಜನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಅವರನ್ನು ಕೊಂಡಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ
ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 25, 2025 | 11:09 PM

ಬಾಗಲಕೋಟೆ, ಜನವರಿ 25: 76ನೇ ಗಣರಾಜ್ಯೋತ್ಸವ ಹಿನ್ನಲೆ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು (Padma Awards) ಘೋಷಿಸಿದೆ. ಕರ್ನಾಟಕದ 9 ಸಾಧಕರಿಗೆ ಕೂಡ ಪ್ರಶಸ್ತಿ ಬಂದಿದ್ದು, ಆ ಪೈಕಿ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗಟೇಕರ್‌ ಒಬ್ಬರು. 71 ವರ್ಷಗಳ ಕಾಲ ಗೊಂದಳಿ ಹಾಡಿನ ಮೂಲಕ ಕಲಾಸೇವೆ ಮಾಡಿಕೊಂಡಿದ್ದಾರೆ.

ವೆಂಕಪ್ಪ ಅಂಬಾಜಿ ಸುಗಟೇಕರ್‌ ಬಾಗಲಕೋಟೆಯ ನವನಗರ ನಿವಾಸಿ. 150ಕ್ಕೂ ಹೆಚ್ಚು ಕಥೆಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಹಾಡುಗಳನ್ನು ವೆಂಕಪ್ಪ ಹಾಡಿದ್ದಾರೆ. ಗೊಂದಳಿ ಕಲಾಸೇವೆ ಮೂಲಕ ಈಗಾಗಲೇ ಗೌರವ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ 96 ವರ್ಷದ ಭೀಮವ್ವ ಶಿಳ್ಳೇಕ್ಯಾತಗೆ ಒಲಿದ ಪದ್ಮಶ್ರೀ

ಪ್ರಧಾನಿ ನರೇಂದ್ರ ಮೋದಿ ಅವರು 2014ರ ಮನ್ ಕಿ ಬಾತ್​​ ರೇಡಿಯೊ ಸರಣಿಯ 110ನೇ ಕಾರ್ಯಕ್ರಮದಲ್ಲಿ ವೆಂಕಪ್ಪ ಗುಣಗಾನ ಮಾಡಲಾಗಿತ್ತು. ವಂಶ ಪರಂಪರೆಯ ಗೊಂದಳಿ ಪದಗಾರನನ್ನು ಪ್ರಧಾನಿ ಮೋದಿ ಹೊಗಳಿದ್ದರು. ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಸಾವಿರಾರು ಜನರಿಗೆ ಇವರು ಒಂದು ರೂಪಾಯಿಯನ್ನೂ ಪಡೆಯದೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ ಎಂದು ಮೋದಿ ಬಣ್ಣಿಸಿದ್ದರು.

ಕಂಚಿನ ಕಂಠದ ಮೂಲಕ ಗೋಂದಳಿ ಪದ ಹಾಡುವ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಟೇಕರ್​ಗೆ ಮಕ್ಕಳು, ಮೊಮ್ಮಕ್ಕಳು ಧ್ವನಿಯಾಗಿದ್ದಾರೆ. ಕಂಚಿನ ಕಂಠದಿಂದ ಕಳೆದ 71 ವರ್ಷದಿಂದ ಗೊಂದಳಿ‌ ಪದ ಹಾಡಿದ್ದಾರೆ.

ರಾಜ್ಯ ಸರಕಾರದಿಂದ ಈ ಹಿಂದೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಲಭಿಸಿವೆ. ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ ಪರ ರಾಜ್ಯದಲ್ಲೂ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ಶಾಲೆ‌ ಕಲಿಯದ ವೆಂಕಪ್ಪ, ವಂಶಪಾರಂಪರ್ಯವಾಗಿ ಬಂದ ಗೊಂದಲಿ ಪದ ಮೂಲಕ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: Padma Awards 2025: ಪದ್ಮ ಪ್ರಶಸ್ತಿ ಪಡೆದ ಕರ್ನಾಟಕ ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ

81ನೇ ವಯಸ್ಸಿನಲ್ಲೂ ಇಂದಿಗೂ ವೆಂಕಪ್ಪನವರು ಹಾಡೋಕೆ ನಿಂತರೆ ನೋಡುಗರನ್ನ ಮಂತ್ರ ಮುಗ್ಧರನ್ನಾಗಿಸುತ್ತಾರೆ. ದಾಸರ ಪದ, ಸಂತ ಶಿಶುನಾಳರ ಪದ, ವಚನ ಸಾಹಿತ್ಯ, ದೇವಿಯ ಪದಗಳು ಹೀಗೆ ಹಲವು ಪ್ರಕಾರದ ಹಾಡುಗಳನ್ನು ಗೊಂದಳಿ ಪದದ ಶೈಲಿ ಮೂಲಕ ಹಾಡುತ್ತಾರೆ. ಆ‌ ಮೂಲಕ ಸಮಾಜದಲ್ಲಿನ ಗೊಂದಲಗಳನ್ನು ಹಾಡಿನ ಮೂಲಕ ವಿವರಿಸುತ್ತಾರೆ.

ಇನ್ನು ವೆಂಕಪ್ಪನವರು ಶಾಲೆಗೆ ಹೋಗಿಲ್ಲ. ಓದಲು, ಬರೆಯಲು ಬಾರದ ಅವರಿಗೆ ಜ್ಞಾಪಕ ಶಕ್ತಿಯೇ ಆಧಾರ. ಸಾವಿರಕ್ಕೂ ಅಧಿಕ ಹಾಡುಗಳನ್ನ ಚಾಚು ತಪ್ಪದೇ ಬಾಯಿಪಾಠದ ಮೂಲಕವೇ ಹಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾರೆ. ಬಡ ಕುಟುಂಬದಲ್ಲಿ ಬೆಳೆದ ವೆಂಕಪ್ಪನವರಿಗೆ ಗೋಂಧಳಿ ಪದ ತಂದೆ ಮತ್ತು ತಾತನಿಂದ ಬಂದ ಬಳುವಳಿಯಾಗಿದೆ. ಇದನ್ನು ವೆಂಕಪ್ಪನವರು, ಅವರ ಮಕ್ಕಳು, ಮೊಮ್ಮಕ್ಕಳಿಗೂ ವಿಸ್ತರಿಸಿದ್ದು ವಿಶೇಷ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:02 pm, Sat, 25 January 25