ಬಾಗಲಕೋಟೆಯ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರ; ಆಡಿಟ್ ರಿಪೋರ್ಟ್ನಿಂದ ಹೊರಬಿತ್ತು ಕೋಟಿ ಕೋಟಿ ಗೋಲ್ಮಾಲ್
ಬಾಗಲಕೋಟೆ ಜಿಲ್ಲೆಯಲ್ಲಿ ಸಾಲು ಸಾಲಾಗಿ ಕೋಟ್ಯಾಂತರ ರೂಪಾಯಿ ಅಕ್ರಮಗಳು ಹೊರಬರುತ್ತಿವೆ. ಪ್ರವಾಸೋದ್ಯಮ ಇಲಾಖೆ, ಕಾರ್ಮಿಕ ಇಲಾಖೆ ಆಯ್ತು, ಈಗ ಜ್ಞಾನದ ಭಂಡಾರ ಗ್ರಂಥಾಲಯದಲ್ಲೂ ಕೋಟಿ ಕೋಟಿ ಅಕ್ರಮ ಬೆಳಕಿಗೆ ಬಂದಿದೆ. ಸಾಲು ಸಾಲು ಅಕ್ರಮಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಈಡಾಗಿವೆ.
ಬಾಗಲಕೋಟೆ, ಜು.19: ಬಾಗಲಕೋಟೆ(Bagalakote)ಯಲ್ಲಿ ಪ್ರವಾಸೋದ್ಯಮ ಇಲಾಖೆ, ಕಾರ್ಮಿಕ ಇಲಾಖೆಯಲ್ಲಿ ಕೋಟಿ ಕೋಟಿ ಅಕ್ರಮವಾಗಿದೆ. ಇದರ ಬೆನ್ನಲ್ಲೇ ಗ್ರಂಥಾಲಯ(Library)ದಲ್ಲೂ ಕೋಟ್ಯಾಂತರ ರೂ. ಅಕ್ರಮ ಹೊರಬಿದ್ದಿದೆ. 2020-21, 2021-22 ಎರಡು ವರ್ಷದ ಅಡಿಟ್‌ನಲ್ಲಿ, ಬುಕ್ ಖರೀದಿ, ಕರೆಂಟ್ ಬಿಲ್, ಫರ್ನಿಚರ್ ಕೆಲಸಕ್ಕೆ ಬಳಸಿದ 1 ಕೋಟಿ 61 ಲಕ್ಷ ರೂ.ಗೆ ಬಿಲ್ ಗಳನ್ನು ಕೊಟ್ಟಿಲ್ಲ. ಹಿಂದಿನ ಗ್ರಂಥಾಲಯ ಅಧಿಕಾರಿ ಈಗ ನಿವೃತ್ತಿ ಮೇಲಿರುವ ಎನ್.ಎಸ್. ರೆಬಿನಾಳ ಹಾನೂ ಇನ್ನೋರ್ವ ಅಧಿಕಾರಿ ಸುನೀಲ್ ಮುದುಗಲ್‌ಗೆ ಈ ಬಗ್ಗೆ ಈಗಿನ ಜಿಲ್ಲಾ ಗ್ರಂಥಾಲಯ ಅಧಿಕಾರಿ ಆಗಿರುವ ಹಾಜರಾ ನಸ್ರೀನ್ ನೋಟಿಸ್ ನೀಡಿದ್ದಾರೆ. ಪ್ರಸ್ತುತ ಅಧಿಕಾರಿ ನೋಟಿಸ್‌ಗೆ ಇಬ್ಬರು ಅಧಿಕಾರಿಗಳು ಉತ್ತರ ಕೊಡದೆ ಬೇಜವಾಬ್ದಾರಿ ತೋರಿದ್ದಾರೆ. ಈ ಬಗ್ಗೆ ಗ್ರಂಥಾಲಯ ಆಯುಕ್ತರಿಗೂ ವರದಿ ನೀಡಿದ್ದಾರೆ.
ಉತ್ತರ ಕೊಡದೆ ಬೇಜವಾಬ್ದಾರಿ ತೋರಿರುವ ಎನ್.ಎಸ್.ರೆಬಿನಾಳ, ಸುನಿಲ್ ಮುದಗಲ್ ವಿರುದ್ಧ ದೂರು ನೀಡುವ ಕುರಿತು ಹಾಜರಾ ಅವರು ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಆಯುಕ್ತರ ನಿರ್ದೇಶನದಂತೆ ಮುಂದಿನ ಕ್ರಮ ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಜಿಲ್ಲಾಧಿಕಾರಿ ಕೆ ಎಮ್ ಜಾನಕಿ ಅವರು, ‘ಈ ಅಕ್ರಮದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೊಟೀಸ್ ಕೊಡಲಾಗಿದೆ. ಆದರೂ ಕೂಡ ಅಧಿಕಾರಿಗಳು ಉತ್ತರ ನೀಡಿಲ್ಲ. ಅವರ ಮೇಲೆ ಕ್ರಮ ಕೂಡ ಆಗಿಲ್ಲ ಎನ್ನೋದು ಕಂಡುಬಂದಿದೆ. ಗ್ರಂಥಾಲಯ ಅಧಿಕಾರಿಗಳ ಕರೆದು ಮಾತಾಡಿದ್ದೇನೆ. ಅವರು ಹಿಂದಿನ ಅಧಿಕಾರಿಗಳಿಗೆ ನೊಟೀಸ್ ನೀಡಿದ್ದಾಗಿ ಹೇಳಿದ್ದಾರೆ. ಅದನ್ನು ಪರಿಶೀಲನೆ ಮಾಡಿ, ಯಾರು ಈ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ನಾನು ಕೂಡ ಮಾನ್ಯ ಆಯುಕ್ತರಿಗೆ ಶಿಪಾರಸ್ಸು ಮಾಡಿ ಪತ್ರ ಬರೆಯೋದಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಇದನ್ನೂ ಓದಿ:ವಿಜಯಪುರ: ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ; ಬಿಇಒ ಅಮಾನತಿಗೆ ಆದೇಶಿಸಿದ ಎಂಬಿ ಪಾಟೀಲ್
ಇದನ್ನೂ ಓದಿ: ಇನ್ನು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ. ಹಿಂದಿನ ಅಧಿಕಾರಿಗಳಿಗೆ ಕೇವಲ ನೊಟೀಸ್ ಕೊಟ್ಟರೆ ಸಾಲದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ತಪ್ಪು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು ಅಂತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಾಲು ಸಾಲಾಗಿ ಅಕ್ರಮಗಳು ಬಯಲಾಗುತ್ತಿವೆ. ಸದ್ಯ ಇಷ್ಟು ಬಯಲಾಗಿದ್ದು, ಇನ್ನು ಎಷ್ಟು ಇಲಾಖೆಯಲ್ಲಿ ಅಕ್ರಮ ನಡೆದಿದೆಯೊ ಕಾದುನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ