Bagalkot News: ಬಾದಾಮಿ ಪಟ್ಟಣದ ಹೊರವಲಯದಲ್ಲಿ ಗೋ ಹತ್ಯೆಗೈದವರ ಬಂಧನಕ್ಕೆ ಹಿಂದೂ ಪರ ಕಾರ್ಯಕರ್ತರ ಆಗ್ರಹ

ಬಕ್ರೀದ್ ಹಬ್ಬ ಹಿನ್ನೆಲೆ ಬಾದಾಮಿ ಪಟ್ಟಣದ ಹೊರವಲಯದಲ್ಲಿ ಗೋವುಗಳನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಹಿಂದೂ ಪರ ಕಾರ್ಯಕರ್ತರು ಗಿಡಕ್ಕೆ ಕಟ್ಟಿ ಅವಾಚ್ಯ ಶಬ್ದದಿಂದ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ.

Bagalkot News: ಬಾದಾಮಿ ಪಟ್ಟಣದ ಹೊರವಲಯದಲ್ಲಿ ಗೋ ಹತ್ಯೆಗೈದವರ ಬಂಧನಕ್ಕೆ ಹಿಂದೂ ಪರ ಕಾರ್ಯಕರ್ತರ ಆಗ್ರಹ
ಹಿಂದೂ ಕಾರ್ಯಕರ್ತರ ಪ್ರತಿಭಟನೆ
Follow us
| Updated By: ವಿವೇಕ ಬಿರಾದಾರ

Updated on:Jun 29, 2023 | 8:19 PM

ಬಾಗಲಕೋಟೆ: ಬಕ್ರೀದ್ (Eid al-Adha) ಹಬ್ಬ ಹಿನ್ನೆಲೆ ಬಾದಾಮಿ (Badami) ಪಟ್ಟಣದ ಹೊರವಲಯದಲ್ಲಿ ಗೋವುಗಳನ್ನು (Cow) ಹತ್ಯೆ ಮಾಡಿದ ವ್ಯಕ್ತಿಯನ್ನು ಹಿಂದೂ ಪರ ಕಾರ್ಯಕರ್ತರು (Hindu Activist) ಗಿಡಕ್ಕೆ ಕಟ್ಟಿ ಅವಾಚ್ಯ ಶಬ್ದದಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಗೋವುಗಳನ್ನು ಹತ್ಯೆ ಮಾಡಿದ ವಿರುದ್ಧವಾಗಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗೋ ಹತ್ಯೆಗೈದವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಸಹಸ್ರಾರು ಹಿಂದೂ ಕಾರ್ಯಕರ್ತರು ಬಾದಾಮಿ ಪಟ್ಟಣದಲ್ಲಿ ಸೇರಿ ಬಾದಾಮಿಯ ರಾಮದುರ್ಗ ಸರ್ಕಲ್​ನಿಂದ ಬಸವೇಶ್ವರ ಸರ್ಕಲ್​ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು. ಸ್ಥಳಕ್ಕೆ ಬಾಗಲಕೋಟೆ ಎಸ್​ಪಿ ಜಯಪ್ರಕಾಶ್ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಚರ್ಚೆ ನಡೆಸಿದರು.

ಇನ್ನು ಪ್ರಕರಣ ಸಂಬಂಧ ಪೊಲೀಸರು  ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತು ಎರಡು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಒಂದು ಗೋವನ್ನು ಹತ್ಯೆ ಮಾಡಲಾಗಿದೆ.  ಒಟ್ಟು ಮೂರು ಗೋವುಗಳನ್ನು ಹತ್ಯೆ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರು ತೆರಳಿ ಎರಡು ಗೋವುಗಳನ್ನು ರಕ್ಷಣೆ ಮಾಡಿ, ಗೋಶಾಲೆಗೆ ಬಿಟ್ಟಿದ್ದಾರೆ. ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾಂಸಹಾರ ತ್ಯಜಿಸಿ ಬಕ್ರೀದ್​​ ಆಚರಿಸಿದ ಮುಸ್ಲಿಂ ಬಾಂಧವರು

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬಿಡ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಮಾಂಸಹಾರ ತ್ಯಜಿಸಿ ಬಕ್ರೀದ್​ ಆಚರಣೆ ಮಾಡಿದ್ದಾರೆ. ಗ್ರಾಮಸ್ಥರ ನಿರ್ಣಯದಂತೆ ಮುಸ್ಲಿಮರು ಮಾಂಸಹಾರ ತ್ಯಜಿಸಿ ಸಿಹಿ ತಿಂದು ಬಕ್ರೀದ್​​ ಹಬ್ಬವನ್ನು ಆಚರಿಸಿದ್ದಾರೆ. ಒಂದೇ ತಿಂಗಳಲ್ಲಿ ಗ್ರಾಮದ ಐವರು ಯುವಕರು ಮೃತಪಟ್ಟ ಹಿನ್ನೆಲೆ ಗ್ರಾಮಸ್ಥರು ಧರ್ಮಾತೀತವಾಗಿ ಮಾಂಸಹಾರ ತ್ಯಜಿಸಲು ನಿರ್ಣಯಿಸಿದ್ದರು.

12 ದಿನ ಮಾಂಸಹಾರ ತ್ಯಜಿಸಿ  ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಲು ನಿರ್ಣಯಿಸಿದ್ದರು. ಹೀಗಾಗಿ ಕಳೆದ 10 ದಿನಗಳಿಂದ ಗ್ರಾಮಸ್ಥರು ಮಾಂಸಹಾರ ತ್ಯಜಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Thu, 29 June 23