Sanjjanaa Galrani: ಗಂಡನ ಮನೆಯಲ್ಲಿ ಬಕ್ರೀದ್ ಆಚರಿಸಿದ ನಟಿ ಸಂಜನಾ ಗಲ್ರಾನಿ; ಇಲ್ಲಿದೆ ಗ್ಯಾಲರಿ
Bakrid 2023: ನಟಿ ಸಂಜನಾ ಗಲ್ರಾನಿ ಅವರು ಬಹಳ ಖುಷಿಯಿಂದ ಬಕ್ರೀದ್ ಹಬ್ಬ ಆಚರಿಸಿದ್ದಾರೆ. ಈ ಪ್ರಯುಕ್ತ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Updated on: Jun 29, 2023 | 12:05 PM

ನಟಿ ಸಂಜನಾ ಗಲ್ರಾನಿ ಅವರು ಈಗ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾರೆ. ಪ್ರತಿ ಹಬ್ಬವನ್ನೂ ಅವರು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಿದ್ದಾರೆ.

ಮದುವೆ ಬಳಿಕ ಸಂಜನಾ ಗಲ್ರಾನಿ ಅವರಿಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಮೂಡಿದೆ. ಅದನ್ನು ಅವರು ಈಗಾಗಲೇ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ಸಂಜನಾ ಗಲ್ರಾನಿ ಅವರು ಈಗ ಸಂಸಾರದ ಕಡೆಗೆ ಗಮನ ಹರಿಸುತ್ತಿದ್ದಾರೆ.

ಗಂಡನ ಮನೆಯಲ್ಲಿ ಸಂಜನಾ ಗಲ್ರಾನಿ ಅವರು ಬಕ್ರೀದ್ ಹಬ್ಬ ಆಚರಿಸಿದ್ದಾರೆ. ಈ ಪ್ರಯುಕ್ತ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಗಲ್ರಾನಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ದಿನಚರಿ ಬಗ್ಗೆ ಅವರು ಆಗಾಗ ಅಪ್ಡೇಟ್ ನೀಡುತ್ತಾರೆ.

ಸಂಜನಾ ಗಲ್ರಾನಿ ಅವರು ಇತ್ತೀಚೆಗೆ ಮೆಕ್ಕಾ, ಮದೀನಾಗೆ ತೆರಳಿದ್ದರು. ಆಗಲೂ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದರು.

ಕಳೆದ ವರ್ಷ ಸಂಜನಾ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಗಂಡ ಮತ್ತು ಮಗನ ಜೊತೆಗಿನ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದೆ.



















