ಇನ್ಮೇಲೆ ಯಾರಾದ್ರೂ ಬಾಲ ಬಿಚ್ಚಿದ್ರೆ ಖೇಲ್ ಖತಂ, ನಾಟಕ ಬಂದ್; ಶಾಸಕ ವಿಜಯಾನಂದ ಕಾಶಪ್ಪನವರ್ ಖಡಕ್ ವಾರ್ನಿಂಗ್

| Updated By: ಆಯೇಷಾ ಬಾನು

Updated on: Jun 15, 2023 | 3:16 PM

ಯಾವನಾದ್ರೂ ಒಂದು ರೂಪಾಯಿ ಬಡವರ ರೊಕ್ಕ, ಬೀದಿ ವ್ಯಾಪಾರಸ್ಥರ ಹತ್ತಿರ, ಚಹಾ ಅಂಗಡಿ, ಢಾಬಾದವರ ಹತ್ತಿರ ಯಾರಾದ್ರು ಒಂದು ರೂಪಾಯಿ ಕೇಳಿದ್ರೆ. ನಿಮ್ಮನ್ನ ವಿಜಯಾನಂದ ಕಾಶಪ್ಪನವರ ಸುಮ್ಮನೇ ಬಿಡೋದಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಇನ್ಮೇಲೆ ಯಾರಾದ್ರೂ ಬಾಲ ಬಿಚ್ಚಿದ್ರೆ ಖೇಲ್ ಖತಂ, ನಾಟಕ ಬಂದ್; ಶಾಸಕ ವಿಜಯಾನಂದ ಕಾಶಪ್ಪನವರ್ ಖಡಕ್ ವಾರ್ನಿಂಗ್
ವಿಜಯಾನಂದ ಕಾಶಪ್ಪನವರ
Follow us on

ಬಾಗಲಕೋಟೆ: ಇನ್ಮೇಲೆ ತಾಲೂಕಿನಲ್ಲಿ ಯಾರಾದ್ರೂ ಬಾಲ ಬಿಚ್ಚಿದ್ರೆ ಖೇಲ್ ಖತಂ, ನಾಟಕ ಬಂದ್ ಎಂದು ವಿರೋಧಿಗಳಿಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ(Vijayanand Kashappanavar) ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇಳಕಲ್ ನಗರದ ಕಂಠಿ ವೃತ್ತದಲ್ಲಿ ಕಾಶಪ್ಪನವರ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ಕಾಶಪ್ಪನವರ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಯಾವನಾದ್ರೂ ಒಂದು ರೂಪಾಯಿ ಬಡವರ ರೊಕ್ಕ, ಬೀದಿ ವ್ಯಾಪಾರಸ್ಥರ ಹತ್ತಿರ, ಚಹಾ ಅಂಗಡಿ, ಢಾಬಾದವರ ಹತ್ತಿರ ಯಾರಾದ್ರು ಒಂದು ರೂಪಾಯಿ ಕೇಳಿದ್ರೆ. ನಿಮ್ಮನ್ನ ವಿಜಯಾನಂದ ಕಾಶಪ್ಪನವರ ಸುಮ್ಮನೇ ಬಿಡೋದಿಲ್ಲ. ನೋ ಹಫ್ತಾ, ನೋ ಗಿಫ್ತಾ ಎಲ್ಲಾ ಬಂದ್. ಖೇಲ್ ಖತಂ ನಾಟಕ ಬಂದ್ ಎಂದು ಪರೋಕ್ಷವಾಗಿ ಪೊಲೀಸರಿಗೆ ಹಾಗೂ ಹಫ್ತಾ ವಸೂಲಿ ಮಾಡುವವರಿಗೆ ಶಾಸಕ ಕಾಶಪ್ಪನವರ ಎಚ್ಚರಿಕೆ ನೀಡಿದ್ದಾರೆ. ಮತ್ತೆ ಬಾಲಾ ಬಿಚ್ಚಿದ್ರೆ, ಬಾಲಾ ಕತ್ತರಿಸ್ತೀವಿ ಈ ಸಾರಿ ಅದಕ್ಕ ಬಂದಿದ್ದೀವಿ. ಅಭಿವೃದ್ಧಿ ಮಾಡ್ತಿವಿ. ಇಳಕಲ್ ನಗರ ಅಭಿವೃದ್ಧಿ ಮಾಡ್ತೀವಿ, 24 ತಾಸು ನೀರು ತಂದ್ದಿದ್ದೀವಿ. ಒಳಚರಂಡಿ ವ್ಯವಸ್ಥೆ ಮಾಡಿದ್ದೀವಿ, ಸಿಸಿ ರಸ್ತೆಗಳನ್ನ ಮಾಡಿಸಿದ್ದೇವೆ, ಬಡವರಿಗೆ ಮನೆ ಕೊಟ್ಟಿದ್ದೇವೆ ಎಂದು ಕಾಶಪ್ಪನವರ್ ಭಾಷಣದ ಮೂಲಕ ಗುಡುಗಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿದ್ದನ್ನು ನಾನು ಚಾಚೂ ತಪ್ಪದೇ ಪಾಲಿಸುವೆ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್

ಮಾಜಿ ಸಿಎಂ ಬೊಮ್ಮಾಯಿ ಕುಂಟಾ ಎಂದು ನಾಲಿಗೆ ಹರಿಬಿಟ್ಟ ಶಾಸಕ ಕಾಶಪ್ಪನವರ

42 ಎಕರೆ ಭೂಮಿ ತಗೊಂಡು, 1560 ಫ್ಲಾಟ್ ಮಾಡಿವಿ. ನೀವೇನು ಮಾಡಿರಪ್ಪಾ? ಅಂತ ಬೆನ್ನು ತಟ್ಟಿಕೊಂಡರು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಶಾಸಕ ಕಾಶಪ್ಪನವರ ಅಪಹಾಸ್ಯ ಮಾಡಿದರು. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದು. ಒಂದರ ಪಾಪ ಬಡವರ ಮನೆ ಕಟ್ಟಿದ್ದ ಹಣೆಬರಹ ಇತಿಹಾಸ. ಅಲ್ಲೊ ಮಾರಾಯ ನಾನ ತಂದು ಇಟ್ಟಿದ್ನೆಲ್ಲಾ 1520 ಫ್ಲಾಟ್. ಅವನು ಕೊಟ್ಟು, ಹಕ್ಕು ಪತ್ರ ಕೊಟ್ಟ ಮನೆ ಕಟ್ಟಿಸಿದ್ರೆ ನಿನ್ನ ಹೆಸರು ನೆನಸ್ತಿದ್ವಲ್ಲೊ ಪುಣ್ಯಾತ್ಮ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಟಾಂಗ್ ಕೊಟ್ಟಿದ್ದಾರೆ. ಲಾಸ್ಟ್ ಎಲೆಕ್ಷನ್ ಬಂದಿದೆ ಅಂದಾಗ ಸನ್ಮಾನ್ಯ ಬೊಮ್ಮಾಯಿಯವರು ಅಮೃತ ಹಂಚ್ತಾರೆ ಅಂತ ಎನ್ಯಾಕ್ಟ್ ಮಾಡಿದ ಕಾಶಪ್ಪನವರ ಎಲ್ಲಿ ಹಂಚಿದ್ರೂ, ಬೊಮ್ಮಾಯಿ ಕುಂಟಾ? ಎಂದು ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಅವಂದ್ ಕಾಲ ಒಂದೈತಿ ಎಂದು ಮಾತಿನ ಬರದಲ್ಲಿ ಏಕವಚನದಲ್ಲೇ ವಾಗ್ಧಾಳಿ ನಡೆಸಿದ್ದಾರೆ.

ಇವರಾದ್ಮೇಲೆ ಯಾರ ಬಂದಿದ್ದರಪ್ಪಾ? ಸನ್ಮಾನ್ಯ ಅಮಿತ್ ಶಾ ಈ ದೇಶದ ಗೃಹ ಸಚಿವರು. ನಾನೇನು ಹೇಳಿಲ್ಲಾ, ಆ ನರೇಂದ್ರ ಮೋದಿ ಒಬ್ರು ಬಾಕಿ ಅದಾರ ಹಿಡ್ಕೊಂಡ ಬಂದು ಬಿಡ್ರಿ ಅವ್ರನು ಅಂದೆ. ನಾ ಆವಾಗ ಮತ್ತೆ ಬರ್ತಿವಿ ಅಂದಿದ್ದೆ, ಮತ್ತೆ ಬಂದೀವಿ. ಅಭಿವೃದ್ಧಿ ಮಾಡೋದಕ್ಕೆ ಬಂದೀವಿ. ಮತ್ತೆ ಬಾಲ ಬಿಚ್ಚಿದ್ರೆ ಒಬ್ಬೊಬ್ಬರಿಗೂ ಐತಿ ಎಂದು ಎದುರಾಳಿಗಳಿಗೆ ಆವಾಜ್ ಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:49 pm, Thu, 15 June 23