ಮುಸ್ಲಿಂ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು ಹಿಂದೂಗಳ ಬಗ್ಗೆ ದ್ವೇಷದ ಪೋಸ್ಟ್ ಹಾಕುತ್ತಿದ್ದ ಆರೋಪಿ ಅರೆಸ್ಟ್!
ದ್ವೇಷದ ಪೋಸ್ಟ್ ಮಾಡುತ್ತಿದ್ದ ಬ್ಯಾಂಕ್ ಉದ್ಯೋಗಿ ಸಿದ್ದಾರೂಢ ನೆರಳಿ ಎಂಬುವವನನ್ನು ಬಾಗಲಕೋಟೆ ಸಿಇಎನ್ ಪೊಲೀಸರು ಅರೆಸ್ಟ್ ಮಾಡಿದ್ಧಾರೆ. ಬಂಧಿತ ಆರೋಪಿ ಮುಸ್ತಾಕ್ ಅಲಿ ಹೆಸರಲ್ಲಿ ಪೋಸ್ಟ್ ಮಾಡಿದ್ದ
ಬಾಗಲಕೋಟೆ: ಮುಸ್ಲಿಂ (Muslim) ಹೆಸರಿನಲ್ಲಿ ಫೇಸ್ಬುಕ್ (Facebook) ಖಾತೆ ತೆರೆದು ಹಿಂದೂಗಳ ಬಗ್ಗೆ ದ್ವೇಷದ ಪೋಸ್ಟ್ ಹಾಕುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದ್ವೇಷದ ಪೋಸ್ಟ್ ಮಾಡುತ್ತಿದ್ದ ಬ್ಯಾಂಕ್ ಉದ್ಯೋಗಿ ಸಿದ್ದಾರೂಢ ನೆರಳಿ ಎಂಬುವವನನ್ನು ಬಾಗಲಕೋಟೆ ಸಿಇಎನ್ ಪೊಲೀಸರು ಅರೆಸ್ಟ್ ಮಾಡಿದ್ಧಾರೆ. ಬಂಧಿತ ಆರೋಪಿ ಮುಸ್ತಾಕ್ ಅಲಿ ಹೆಸರಲ್ಲಿ ಪೋಸ್ಟ್ ಮಾಡಿದ್ದ. ಈ ಹಿನ್ನೆಲೆ ಹಿಂದೂಪರ ಸಂಘಟನೆ ಕಾರ್ಯಕರ್ತರು ದೂರು ನೀಡಿದ್ದರು. ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಸಿದ್ದಾರೂಢ ನೆರಳಿ ಬಾಗಲಕೋಟೆಯ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಿದ್ದಿಕುರಬೇಟ ಗ್ರಾಮದವನು.
ಪಾಕಿಸ್ತಾನಿ ಮುಸ್ಲಿಂ ಎಂದು ಗೂಗಲ್ ಮಾಡಿ ಸ್ಕಲ್ ಕ್ಯಾಪ್ ನ ಪೊಟೊ ಪೇಸ್ ಬುಕ್ ಖಾತೆಗೆ ಹಾಕಿದ್ದ ಸಿದ್ದಾರೂಢ ನೆರಳಿ: ಈತ ಹಿಂದೂಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದ. ಇಂತಹ ಪೋಸ್ಟ್ ಹಾಕಿ ಹಿಂದೂಗಳ ಭಾವನೆ ಕೆರಳಿಸಿ ಅವರನ್ನು ಮತ್ತಷ್ಟು ಒಗ್ಗಟ್ಟಾಗಿಸಲು ಪ್ರಯತ್ನ ಮಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಹೇಳಿರೋದಾಗಿ ತಿಳಿದು ಬಂದಿದೆ. ಇನ್ನು ಈತ ನಕಲಿ ಖಾತೆಗೆ ಫೋಟೋ ಹಾಕೋದಕ್ಕೆ “ಪಾಕಿಸ್ತಾನಿ ಮುಸ್ಲಿಂ” ಎಂದು ಗೂಗಲ್ ಸರ್ಚ್ ಮಾಡಿ ಸ್ಕಲ್ ಕ್ಯಾಪ್ ಧರಿಸಿದ ಭಾರತೀಯ ಮುಸ್ಲಿಂನಂತೆ ಕಾಣುವ ವ್ಯಕ್ತಿಯೋರ್ವನ ಫೋಟೊ ಹಾಕಿದ್ದ.
ಯಾರು ಇಂತಹ ಕೃತ್ಯ ಎಸಗಬಾರದು. ಸಾಮಾಜಿಕ ಜಾಲತಾಣದ ಮೇಲೆ ಬಾಗಲಕೋಟೆ ಪೊಲೀಸರು ವಿಶೇಷ ಕಣ್ಣಿಟ್ಟಿದ್ದಾರೆ. ಯಾರು ಎಷ್ಟೇ ಬುದ್ದಿವಂತಿಕೆ ಉಪಯೋಗಿಸಿದರೂ ಬಿಡೋದಿಲ್ಲ. ಹಿಡಿದು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಕೆಲಸ ಯಾರು ಮಾಡಬಾರದು ಎಂದು ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಸೂಚನೆ ನೀಡಿದ್ದಾರೆ.
ಹೆಚ್ಚಾಯ್ತು ಗಂಧದ ಮರಗಳ್ಳರ ಹಾವಳಿ: ಹಾಸನ ನಗರದಲ್ಲಿ ಗಂಧದ ಮರಗಳ್ಳರ ಹಾವಳಿ ಹೆಚ್ಚಾಗಿದೆ. ಮಂಗಳವಾರ ತಡರಾತ್ರಿ ಮೂರು ಕಡೆ ಗಂಧದ ಮರ ಕಡಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಹಾಸನದ ನಗರದ ಹೇಮಾವತಿನಗರದಲ್ಲಿ ಈ ಘಟನೆ ನಡೆದಿದೆ. ನಾಗಣ್ಣ ಮತ್ತು ಮಿಥುನ್ ಎಂಬುವವರ ಮನೆಯ ಕಾಂಪೌಂಡ್‌ನಲ್ಲಿದ್ದ ಗಂಧದ ಮರಗಳನ್ನ ಕದಿಯಲು ಮೂವರು ಯತ್ನಿಸಿದ್ದಾರೆ. ಮೊದಲು ನಾಗಣ್ಣ ಎಂಬುವವರ ಮನೆಯಲ್ಲಿ ಗಂಧದ ಮರ ಕಳ್ಳತನಕ್ಕೆ ಯತ್ನಿಸಿದ್ದಾರೆ. ಯಂತ್ರದ ಮೂಲಕ ಮರ ಕತ್ತರಿಸಿದ ವೇಳೆ ಮರ ಬೀಳುತ್ತಿದ್ದಂತೆ ಮನೆಯವರು ಎಚ್ಚರವಾಗಿದ್ದಾರೆ. ಕೂಡಲೇ ಕಳ್ಳರು ಕಾಲ್ಕಿತ್ತಿದ್ದಾರೆ.
ಪಿಕ್ಅಪ್ ಕದ್ದು ಎಸ್ಕೇಪ್: ರಾತ್ರೋರಾತ್ರಿ ಮಹೇಂದ್ರ ಪಿಕ್ಅಪ್ ಕದ್ದು ಕಳ್ಳರ ಗ್ಯಾಂಗ್ ಎಸ್ಕೇಪ್ ಆಗಿದೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಹನವನ್ನು ಮನೆ ಮುಂದೆ ನಿಲ್ಲಿಸಿದ್ದರು. ಆದರೆ ಬೆಳಿಗ್ಗೆ ನೋಡಿದಾಗ ವಾಹನ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ
ಮಾರ್ಚ್ 29ರವರೆಗೆ ಯಲಹಂಕ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ: ಇಲ್ಲಿದೆ ರದ್ದಾಗಿರುವ ರೈಲುಗಳ ವಿವರ
Published On - 10:34 am, Thu, 24 March 22