AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಲೆಬ್ರೇಟಿಂಗ್ ಪಾಕಿಸ್ತಾನ ರೆವಲ್ಯೂಷನ್ ಡೇ ಎಂದು ಪೋಸ್ಟ್ ಹಾಕಿದ್ದ ಯುವತಿ; ಪೊಲೀಸರಿಂದ ಕತ್ತುಮಾ ಶೇಖ್ ಬಂಧನ

ಪಾಕಿಸ್ತಾನದ ಧ್ವಜ ಇರುವ ಫೋಟೋ ಮೇಲೆ ದಿಲ್ ಚಿತ್ರ ಇರುವ ಪೋಟೊ ಹಾಕಿ ಪಾಕ್ ಪರ ವ್ಯಾಮೋಹವನ್ನು ಯುವತಿ ವ್ಯಕ್ತಪಡಿಸಿದ್ದಳು. ಸದ್ಯ ಮುಧೋಳ ಪೊಲೀಸ್ ಠಾಣೆಯಲ್ಲಿ ಕತ್ತುಮಾ ವಿರುದ್ಧ ರಾಷ್ಟ್ರದ್ರೋಹದ ದೂರು ದಾಖಲಾಗಿದ್ದು, ಆರೋಪಿ ಕತ್ತುಮಾ ಶೇಖ್​ಳನ್ನು ಮುಧೋಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೆಲೆಬ್ರೇಟಿಂಗ್ ಪಾಕಿಸ್ತಾನ ರೆವಲ್ಯೂಷನ್ ಡೇ ಎಂದು ಪೋಸ್ಟ್ ಹಾಕಿದ್ದ ಯುವತಿ; ಪೊಲೀಸರಿಂದ ಕತ್ತುಮಾ ಶೇಖ್ ಬಂಧನ
ಪಾಕ್ ಪರ ವ್ಯಾಮೋಹದಿಂದ ಸೆಲೆಬ್ರೇಟಿಂಗ್ ಪಾಕಿಸ್ಥಾನ ರೆವಲ್ಯೂಷನ್ ಡೇ ಎಂದು ಮೊಬೈಲ್ ಸ್ಟೇಟಸ್ ಇಟ್ಟು ಯುವತಿ
TV9 Web
| Edited By: |

Updated on:Mar 24, 2022 | 4:24 PM

Share

ಬಾಗಲಕೋಟೆ: ಪಾಕಿಸ್ತಾನದ ಪರ ಪೋಸ್ಟ್ ಹಾಕಿದ್ದ ಯುವತಿಯನ್ನು ಪೊಲೀಸರು (Police) ಬಂಧಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಮಾರ್ಚ್ 23ರಂದು ಪಾಕಿಸ್ತಾನ ಪರ ಸೆಲೆಬ್ರೇಟಿಂಗ್ ಪಾಕಿಸ್ತಾನ ರೆವಲ್ಯೂಷನ್ ಡೇ ಎಂದು ಕತ್ತುಮಾ ಶೇಖ್ ಎಂಬ ಯುವತಿ ಪೋಸ್ಟ್(Post) ಹಾಕಿದ್ದಳು. ಹೀಗಾಗಿ ಪಾಕಿಸ್ತಾನದ ಮೇಲೆ ಅಭಿಮಾನ ಪರ ವಾಟ್ಸಪ್ ಸ್ಟೇಟಸ್ (Whatsapp) ಹಾಕಿ ರಾಷ್ಟ್ರವಿರೋಧಿ ಧೋರಣೆ ತೆಳೆದ ಯುವತಿಯನ್ನು ಬಂಧಿಸುವಂತೆ ಅರುಣ್ ಭಜಂತ್ರಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು (ಮಾರ್ಚ್​ 24)  ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸರು ಕತ್ತುಮಾ ಶೇಖ್​ನನ್ನು ಬಂಧಿಸಿದ್ದಾರೆ.

ಪಾಕ್ ಪರ ವ್ಯಾಮೋಹದಿಂದ ಸೆಲೆಬ್ರೇಟಿಂಗ್ ಪಾಕಿಸ್ತಾನ ರೆವಲ್ಯೂಷನ್ ಡೇ ಎಂದು ಮೊಬೈಲ್ ಸ್ಟೇಟಸ್ ಇಟ್ಟು ಯುವತಿ ಹುಚ್ಚಾಟ ಪ್ರದರ್ಶಿಸಿದ್ದಳು. ಪಾಕಿಸ್ತಾನದ ಧ್ವಜ ಇರುವ ಫೋಟೋ ಮೇಲೆ ದಿಲ್ ಚಿತ್ರ ಇರುವ ಪೋಟೊ ಹಾಕಿ ಪಾಕ್ ಪರ ವ್ಯಾಮೋಹವನ್ನು ಯುವತಿ ವ್ಯಕ್ತಪಡಿಸಿದ್ದಳು. ಸದ್ಯ ಮುಧೋಳ ಪೊಲೀಸ್ ಠಾಣೆಯಲ್ಲಿ ಕತ್ತುಮಾ ವಿರುದ್ಧ ರಾಷ್ಟ್ರದ್ರೋಹದ ದೂರು ದಾಖಲಾಗಿದ್ದು, ಆರೋಪಿ ಕತ್ತುಮಾ ಶೇಖ್​ಳನ್ನು ಮುಧೋಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಸ್ಲಿಂ ಹೆಸರಿನಲ್ಲಿ ಫೇಸ್​ಬುಕ್ ಖಾತೆ ತೆರೆದು ಹಿಂದೂಗಳ ಬಗ್ಗೆ ದ್ವೇಷದ ಪೋಸ್ಟ್ ಹಾಕುತ್ತಿದ್ದ ಆರೋಪಿ ಅರೆಸ್ಟ್!

ಮುಸ್ಲಿಂ ಹೆಸರಿನಲ್ಲಿ ಫೇಸ್​ಬುಕ್​  ಖಾತೆ ತೆರೆದು ಹಿಂದೂಗಳ ಬಗ್ಗೆ ದ್ವೇಷದ ಪೋಸ್ಟ್ ಹಾಕುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದ್ವೇಷದ ಪೋಸ್ಟ್ ಮಾಡುತ್ತಿದ್ದ ಬ್ಯಾಂಕ್​ ಉದ್ಯೋಗಿ ಸಿದ್ದಾರೂಢ ನೆರಳಿ ಎಂಬುವವನನ್ನು ಬಾಗಲಕೋಟೆ ಸಿಇಎನ್ ಪೊಲೀಸರು ಅರೆಸ್ಟ್ ಮಾಡಿದ್ಧಾರೆ. ಬಂಧಿತ ಆರೋಪಿ ಮುಸ್ತಾಕ್ ಅಲಿ ಹೆಸರಲ್ಲಿ ಪೋಸ್ಟ್ ಮಾಡಿದ್ದ. ಈ ಹಿನ್ನೆಲೆ ಹಿಂದೂಪರ ಸಂಘಟನೆ ಕಾರ್ಯಕರ್ತರು ದೂರು ನೀಡಿದ್ದರು. ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಸಿದ್ದಾರೂಢ ನೆರಳಿ ಬಾಗಲಕೋಟೆಯ ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಿದ್ದಿಕುರಬೇಟ ಗ್ರಾಮದವನು.

ಪಾಕಿಸ್ತಾನಿ ಮುಸ್ಲಿಂ ಎಂದು ಗೂಗಲ್ ಮಾಡಿ ಸ್ಕಲ್ ಕ್ಯಾಪ್​ನ ಪೊಟೊ ಪೇಸ್ ಬುಕ್ ಖಾತೆಗೆ ಹಾಕಿದ್ದ ಸಿದ್ದಾರೂಢ ನೆರಳಿ: ಈತ ಹಿಂದೂಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದ. ಇಂತಹ ಪೋಸ್ಟ್ ಹಾಕಿ ಹಿಂದೂಗಳ ಭಾವನೆ ಕೆರಳಿಸಿ ಅವರನ್ನು ಮತ್ತಷ್ಟು ಒಗ್ಗಟ್ಟಾಗಿಸಲು ಪ್ರಯತ್ನ ಮಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಹೇಳಿರೋದಾಗಿ ತಿಳಿದು ಬಂದಿದೆ. ಇನ್ನು ಈತ ನಕಲಿ ಖಾತೆಗೆ ಫೋಟೋ ಹಾಕೋದಕ್ಕೆ “ಪಾಕಿಸ್ತಾನಿ ಮುಸ್ಲಿಂ” ಎಂದು ಗೂಗಲ್ ಸರ್ಚ್ ಮಾಡಿ ಸ್ಕಲ್ ಕ್ಯಾಪ್ ಧರಿಸಿದ ಭಾರತೀಯ ಮುಸ್ಲಿಂನಂತೆ ಕಾಣುವ ವ್ಯಕ್ತಿಯೋರ್ವನ ಫೋಟೊ ಹಾಕಿದ್ದ.

ಯಾರು ಇಂತಹ ಕೃತ್ಯ ಎಸಗಬಾರದು. ಸಾಮಾಜಿಕ‌ ಜಾಲತಾಣದ‌ ಮೇಲೆ ಬಾಗಲಕೋಟೆ ಪೊಲೀಸರು ವಿಶೇಷ ಕಣ್ಣಿಟ್ಟಿದ್ದಾರೆ. ಯಾರು ಎಷ್ಟೇ ಬುದ್ದಿವಂತಿಕೆ ಉಪಯೋಗಿಸಿದರೂ ಬಿಡೋದಿಲ್ಲ‌. ಹಿಡಿದು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸಮಾಜದ ಸ್ವಾಸ್ಥ್ಯ  ಹದಗೆಡಿಸುವ ಕೆಲಸ ಯಾರು ಮಾಡಬಾರದು ಎಂದು ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:

ಬಳ್ಳಾರಿ: ಪಲ್ಸ್ ವರ್ಡ್ಸ್ ಕಂಪನಿ ವಿರುದ್ಧ ಸಾರ್ವಜನಿಕರಿಗೆ ಕೋಟ್ಯಾಂತರ ರೂ. ವಂಚನೆ; ಮ್ಯಾನೇಜರ್ ಬಂಧನ

ಬಿಪಿನ್ ರಾವತ್ ಸಾವಿನ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಮೈಸೂರು ಮೂಲದ ಟಿಕೆ ವಸಂತ್ ಕುಮಾರ್ ಬಂಧನ

Published On - 4:17 pm, Thu, 24 March 22