AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bagalkote News: ಬಾಗಲಕೋಟೆಯಲ್ಲಿ ಮತ್ತೆ ಹಿಂದೂ-ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ: ನಾಲ್ವರು ಅರೆಸ್ಟ್

ಜಿಲ್ಲೆಯ ನವನಗರದಲ್ಲಿ ನಿನ್ನೆ(ಜೂ.21) ರಾತ್ರಿ ಬೈಕ್ ವೇಗವಾಗಿ ಓಡಿಸಿದ ವಿಚಾರಕ್ಕೆ 2 ಗುಂಪುಗಳ ಮಧ್ಯೆ ಘರ್ಷಣೆಯಾಗಿದ್ದು, ಘಟನೆ ಸಂಬಂಧ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Bagalkote News: ಬಾಗಲಕೋಟೆಯಲ್ಲಿ ಮತ್ತೆ ಹಿಂದೂ-ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ: ನಾಲ್ವರು ಅರೆಸ್ಟ್
ಬಾಗಲಕೋಟೆ
ಕಿರಣ್ ಹನುಮಂತ್​ ಮಾದಾರ್
|

Updated on: Jun 22, 2023 | 1:51 PM

Share

ಬಾಗಲಕೋಟೆ: ಜಿಲ್ಲೆಯ ನವನಗರ(Navanagar)ದಲ್ಲಿ ನಿನ್ನೆ(ಜೂ.21) ರಾತ್ರಿ 2 ಗುಂಪುಗಳ ಮಧ್ಯೆ ಘರ್ಷಣೆಯಾಗಿದ್ದು, ಘಟನೆ ಸಂಬಂಧ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಬೈಕ್ ವೇಗವಾಗಿ ಓಡಿಸಿದ ವಿಚಾರಕ್ಕೆ ನಿನ್ನೆ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದ್ದು, ಬಳಿಕ ಪ್ರವೀಣ್ ದಲಭಂಜನ್ ಮನೆಯ ಮೇಲೆ ಕಲ್ಲೆಸೆದಿದ್ದರು. ಇದಾದ ನಂತರ ಹಿಂದು ಮುಸ್ಲಿಂ ಘರ್ಷಣೆಗೆ ತಿರುಗಿತು. ಘರ್ಷಣೆಯಲ್ಲಿ ಗಾಯಗೊಂಡ 7 ಜನರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಕುರಿತು ರಾತ್ರಿ ಹಿಂದುಪರ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದ್ದರು. ಈ ವೇಳೆ ಪೊಲೀಸರ ಜೊತೆಗೂ ವಾಗ್ವಾದ ನಡೆದಿತ್ತು. ಈ ಹಿನ್ನಲೆ ಹಿಂದು ಹಾಗೂ ಮುಸ್ಲಿಂ ಕಡೆಯ ತಲಾ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬೂದಿ ಮುಚ್ಚಿದ ಕೆಂಡದಂತಿರುವ ಬಾಗಲಕೋಟೆಯ ನವನಗರ

ಇನ್ನು ಈ ಘಟನೆಯಿಂದ ಮುಂಜಾಗ್ರತ ಕ್ರಮವಾಗಿ 4 ಡಿಎಆರ್, 4 ಕೆಎಸ್​​ಆರ್​ಪಿ ತುಕಡಿ, 4 ಡಿವೈಎಸ್​ಪಿ, 6 ಸಿಪಿಐ, 15 ಪಿಎಸ್​ಐ, 25 ಎಎಸ್​ಐ ಸೇರಿ 160 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಲಾಗಿದೆ. ಜೊತೆಗೆ ಜಿಲ್ಲಾಸ್ಪತ್ರೆ ಮುಂಭಾಗದಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಮೂಲಕ ಬಾಗಲಕೋಟೆಯ ನವನಗರ ಬೂದಿ ಮುಚ್ಚಿದ ಕೆಂಡದಂತಿದೆ.

ಇದನ್ನೂ ಓದಿ:ಹೋಳಿ ಹಬ್ಬದ ನಿಮಿತ್ತ ಹಲಗೆ ಬಾರಿಸುವ ವಿಚಾರವಾಗಿ 2 ಕೋಮಿನ ಮಧ್ಯೆ ಗಲಾಟೆ

ಪಡಿತರ ಅಕ್ಕಿ ಕಳ್ಳ ಸಾಗಣೆ; ಪೊಲೀಸರಿಂದ ವಾಹನ ಜಪ್ತಿ

ಕೊಪ್ಪಳ: ಪಡಿತರ ಅಕ್ಕಿಯನ್ನ ಕಳ್ಳ ಸಾಗಣೆ ಮಾಡುತ್ತಿದ್ದವರನ್ನ ಜಿಲ್ಲೆಯ ಗಂಗಾವತಿ ನಗರದ ಎಪಿಎಂಸಿ ಬಳಿ ಪೊಲೀಸರು ಬಂಧಿಸಿದ್ದಾರೆ. ಹೌದು ಎರಡೂ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 250 ಕ್ವಿಂಟಾಲ್ ಕ್ಕಿಂತ ಹೆಚ್ಚು ಪಡಿತರ ಅಕ್ಕಿಯ ಸಮೇತ ವಾಹನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಗಂಗಾವತಿಯಿಂದ ತಾವರಗೇರ ಪಟ್ಟಣಕ್ಕೆ ಸಾಗಣೆ ಮಾಡುವ ವೇಳೆ ಜಪ್ತಿ ಮಾಡಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ