AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಿ ಸಾಕಾಣಿಕೆ‌ ಮೂಲಕ ಬಂಪರ್ ಲಾಭ ಗಳಿಸಿ ಮಾದರಿಯಾದ ಬ್ಯಾಂಕ್ ಉದ್ಯಮಿ: ಆದಾಯವೆಷ್ಟು ಗೊತ್ತಾ?

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರೂ ಪ್ರಾಣಿಗಳ‌ ಮೇಲಿನ ಪ್ರೀತಿಗಾಗಿ ಕುರಿ ಸಾಕಾಣಿಕೆ‌ ಮಾಡುವ ಮೂಲಕ ಬಾಗಲಕೋಟೆಯ ಸಹಕಾರಿ ಬ್ಯಾಂಕ್ ಉದ್ಯಮಿಯೊಬ್ಬರು ಅದರಲ್ಲೂ ಯಶಸ್ಸು ಕಂಡಿದ್ದಾರೆ. ಜೊತೆಗೆ ಇತರರಿಗೆ ಮಾದರಿ ಆಗಿದ್ದಾರೆ. ಆಳು ಕಾಳು ಔಷಧಿ ಮೇವು ಎಲ್ಲ ಖರ್ಚು ತೆಗೆದು ವರ್ಷಕ್ಕೆ 25 ಲಕ್ಷದಷ್ಟು ಆದಾಯ ಇವರ ಕೈ ಸೇರುತ್ತಿದೆ.

ಕುರಿ ಸಾಕಾಣಿಕೆ‌ ಮೂಲಕ ಬಂಪರ್ ಲಾಭ ಗಳಿಸಿ ಮಾದರಿಯಾದ ಬ್ಯಾಂಕ್ ಉದ್ಯಮಿ: ಆದಾಯವೆಷ್ಟು ಗೊತ್ತಾ?
ಕುರಿ ಸಾಕಾಣಿಕೆ‌ ಮೂಲಕ ಬಂಪರ್ ಲಾಭ ಗಳಿಸಿ ಮಾದರಿಯಾದ ಬ್ಯಾಂಕ್ ಉದ್ಯಮಿ: ಆದಾಯವೆಷ್ಟು ಗೊತ್ತಾ?
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: May 24, 2024 | 10:40 PM

Share

ಬಾಗಲಕೋಟೆ, ಮೇ 24: ಕೃಷಿ ಒಂದು ವೇಳೆ ಕೈ ಕೊಡಬಹುದು ಆದರೆ ಉಪಕಸುಬುಗಳು ಶಿಸ್ತಿನಿಂದ ಮಾಡಿದರೆ ಕೈ ಕೊಡೋದಕ್ಕೆ ಎಂದೂ ಸಾಧ್ಯವಿಲ್ಲ. ಇಲ್ಲಿ ಒಬರು ಸಹಕಾರಿ ಬ್ಯಾಂಕ್ ಉದ್ಯಮಿ (bank employee) ಕುರಿ ಸಾಕಾಣಿಕೆ‌ (sheep farming) ಮಾಡಿ ಬಂಪರ್‌ ಲಾಭ ಪಡೆದು ಮಾದರಿಯಾಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರೂ ಪ್ರಾಣಿಗಳ‌ ಮೇಲಿನ ಪ್ರೀತಿಗಾಗಿ ಕುರಿ ಸಾಕಾಣಿಕೆ‌ ಮಾಡಿ ಅದರಲ್ಲೂ ಯಶಸ್ಸು ಕಂಡಿದ್ದಾರೆ.

ಪ್ರಕಾಶ್ ತಪಶೆಟ್ಟಿ ಎಂಬುವವರು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇವರು ಈಗಾಗಲೇ ಸಾಕಷ್ಟು ಹೆಸರು ‌ಮಾಡಿದ್ದಾರೆ. ಮೂಲತಃ ಕೃಷಿ ಕುಟುಂಬವಾದ ಕಾರಣ ಪ್ರಾಣಿಗಳ ‌ಮೇಲೆ ಪ್ರೀತಿ. ಇದರಿಂದ ಕುರಿ‌, ಮೇಕೆ, ಸಾಕಾಣಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಂತ್ಯಸಂಸ್ಕಾರ ಸಿದ್ಧತೆ ವೇಳೆ ಕೆಮ್ಮಿದ ಮಗು, ಇಳಕಲ್​​ನಲ್ಲೊಂದು ಅಚ್ಚರಿ! ಆದರೆ ವೈದ್ಯರು ಹೇಳೋದೇ ಬೇರೆ

ಬಾಗಲಕೋಟೆ ಹೊರವಲಯದಲ್ಲಿ ಕುರಿ ಫಾರ್ಮ್ ಮಾಡಿದ್ದು, ನಾಲ್ಕುನೂರು ಕುರಿಗಳು, 150 ಮೇಕೆ ಸಾಕಾಣಿಕೆ ಮಾಡಿದ್ದಾರೆ. ಇವುಗಳ ಮೂಲಕ ಭರ್ಜರಿ ಬಂಪರ್ ಲಾಭ ಪಡೆಯುತ್ತಿದ್ದಾರೆ. ತಮ್ಮ ಫಾರ್ಮ್ ನಲ್ಲಿ ಶಿರೋಹಿ, ಸೌಜಾತ್, ಉಸ್ಮನಾಬಾದಿ, ಬೀಟಲ್, ಗೊಯೆರ್ ತಳಿಯ ಮೇಕೆ ಸಾಕಾಣಿಕೆ ಮಾಡಿದ್ದಾರೆ. ಡಾಲ್ಫರ್, ಎಳಗ, ಆರಿ ಸುವರ್ಣ, ತಳಿಯ ಕುರಿ ಟಗರು ಸಾಕಿದ್ದಾರೆ. ದಿನಾಲು ತಾವೆ ಬೆಳಿಗ್ಗೆ ಬಂದು ಕಾರ್ಮಿಕರ ಜೊತೆ ಮೇವು ಹಾಕೋದು, ಮರಿಗಳಿಗೆ ಹಾಲು ಕುಡಿಸುವ ಕಾರ್ಯ ಮಾಡುತ್ತಾರೆ.

ಬಕ್ರೀದ್​ ಹಬ್ಬದ ಸನಿಹದಲ್ಲಿ‌ ಕುರಿ, ಟಗರು, ಮೇಕೆಗಳಿಗೆ ಬಾರಿ ಬೇಡಿಕೆ ಬಂದಿದ್ದು ಬಂಪರ್ ಲಾಭ ಪಡೆಯುತ್ತಿದ್ದಾರೆ. ಕುರಿ ಸಾಕಾಣಿಕೆ ಬಗ್ಗೆ ಮಾತಾಡಿದ ತಪಶೆಟ್ಟಿ ಅವರು ಸುಮ್ಮನೆ ಎಲ್ಲರೂ ಕುರಿ ಸಾಕಾಣಿಕೆ ಮಾಡಿದ್ದನ್ನು ನೋಡಿ ನಾನು ಮಾಡ್ತಿನಿ ಅಂತ ಬರಬೇಡಿ ತರಬೇತಿ ಪಡೆದು ಶಿಸ್ತಿನಿಂದ‌ ಮಾಡಿ‌ ಒಳ್ಳೆಯ ಆದಾಯ ಬರೋದು ಪಕ್ಕಾ ಅಂತಾರೆ.

ಇವರು ಬಕ್ರೀದ್ ಹಬ್ಬವನ್ನೇ ಟಾರ್ಗೆಟ್ ಮಾಡಿಕೊಂಡು ಕುರಿ ಸಾಕಾಣಿಕೆ‌ ಮಾಡ್ತಾರೆ. ಬಕ್ರೀದ್ ಹಬ್ಬದ ವೇಳೆಗೆ ದಷ್ಟಪುಷ್ಟವಾಗಿ ಮೈ ಹಿಡಿಯುವಂತೆ ಇವುಗಳನ್ನು ತಯಾರು ಮಾಡ್ತಾರೆ. ಬಕ್ರೀದ್ ಹಿನ್ನೆಲೆ ಕುರಿ ಟಗರು, ಮೇಕೆಗೆ ಬಾರಿ ಬೆಲೆ ಬಂದಿದೆ. ಒಂದು ಟಗರಿಗೆ 25 ರಿಂದ 30 ಸಾವಿರ ರೂ. ಬೆಲೆ ಇದೆ. ಇವರ ಫಾರ್ಮ್ ನಲ್ಲಿನ ಕೋಟಾ ಎಂಬ ವಿದೇಶಿ ತಳಿಯ ಲವ್ಲಿ ಬಾಯ್ ಎಂಬ ಹೋತು ಮರಿ(ಗಂಡು ಮೇಕೆಗೆ) 110 ಕೆಜಿ ಇದ್ದು, 90 ಸಾವಿರ ರೂ. ಬೆಲೆ ಕಟ್ಟಿದ್ದಾರೆ. ಆದರೂ ಮಾರಾಟ‌ ಮಾಡಿಲ್ಲ.

ಸುಲ್ತಾನ್ ಎಂಬ ಇನ್ನೊಂದು ಗಂಡು ಮೇಕೆಗೆ 75 ರಿಂದ 80 ಸಾವಿರ ರೂ. ಬೆಲೆಗೆ ಕೇಳಿದ್ದಾರೆ. ಬಕ್ರೀದ್ ‌ಮುಂದಿನ ತಿಂಗಳು ನಡೆಯಲಿದ್ದು, ಈಗಲೇ ‌ಇವುಗಳ ಖರೀದಿಗೆ ವರ್ತಕರು ಜನಸಾಮಾನ್ಯರು ಆಗಮಿಸುತ್ತಿದ್ದಾರೆ. ಇನ್ನು ಇವುಗಳ ಸಾಕಾಣಿಕೆಗೆ ಪ್ರತಿದಿನ ಏಳು ಜನ ನಿತ್ಯ ‌ಕೆಲಸ‌ ಮಾಡುತ್ತಿದ್ದಾರೆ. ದಿನಾಲು ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಹೊಟ್ಟು, ಹಸಿ ಮೇವು, ಕಾಳಿನ ಮೇವು ನೀಡ್ತಾರೆ. ರೋಗರುಜಿನ ಬಾರದಂತೆ ಔಷಧಿ ಇಂಜೆಕ್ಷನ್ ಎಲ್ಲವನ್ನೂ ನಿಭಾಯಿಸಬೇಕು.

ಇದನ್ನೂ ಓದಿ; ರಕ್ತದಲ್ಲಿ ವಿರಾಟ್ ಕೊಹ್ಲಿ ಚಿತ್ರ ಬಿಡಿಸಿ ಅಭಿಮಾನ ಪ್ರದರ್ಶಿಸಿದ ಚಿತ್ರಕಲಾ ಶಿಕ್ಷಕ; ಇಲ್ಲಿದೆ ಝಲಕ್​

ಆಳು ಕಾಳು ಔಷಧಿ ಮೇವು ಎಲ್ಲ ಖರ್ಚು ತೆಗೆದು ವರ್ಷಕ್ಕೆ 25 ಲಕ್ಷದಷ್ಟು ಆದಾಯ ಇವರ ಕೈ ಸೇರುತ್ತಿದೆ. ರೈತರು ಕೇವಲ ಕೃಷಿ ಮೇಲೆ‌ ಮಾತ್ರ ಅವಲಂಭಿತರಾಗಬಹುದು. ಕೃಷಿ ಜೊತೆಗೆ ಇಂತಹ ಉಪಕಸುಬು ಮಾಡಬೇಕು. ಕೃಷಿಯಲ್ಲೂ ಲಾಸ್ ಆದರೂ ಉಪಕಸುಬು ಕೈ ಹಿಡಿಯುತ್ತವೆ ಅಂತಾರೆ ಕುರಿ‌ಸಾಕಾಣಿಕೆ‌ ಕೇಂದ್ರದ ನಿರ್ವಾಹಕರು.

ಒಟ್ಟಿನಲ್ಲಿ ಬಕ್ರೀದ್ ವೇಳೆ ಕುರಿ, ಟಗರು, ಮೇಕೆಗಳಿಗೆ ಭರ್ಜರಿ ಬೇಡಿಕೆ‌ ಬಂದಿದೆ. ಬ್ಯಾಂಕಿಂಗ್ ಉದ್ಯಮಿ ಕುರಿ ಸಾಕಾಣಿಕೆಯಲ್ಲೂ ಬಂಪರ್ ಲಾಭ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ