AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಪ್ರಯಾಣಿಕರೇ ಇತ್ತ ಗಮನಿಸಿ: ಈ ಮಾರ್ಗದ ರೈಲು ಸೇವೆಗಳು ಭಾಗಶಃ ರದ್ದು!

ಬೈಯಪ್ಪನಹಳ್ಳಿ ಮತ್ತು ಹೊಸೂರು ನಡುವಿನ ರೈಲು ಮಾರ್ಗ ಕಾಮಗಾರಿಯಿಂದಾಗಿ ಹಲವು ಮೆಮು ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಜುಲೈ 5, 7 ಮತ್ತು 8 ರಂದು ಕೆಲವು ಮೆಮು ರೈಲುಗಳು ಭಾಗಶಃ ರದ್ದಾಗಿದ್ದು, ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ರೈಲ್ವೆ ಪ್ರಯಾಣಿಕರೇ ಇತ್ತ ಗಮನಿಸಿ: ಈ ಮಾರ್ಗದ ರೈಲು ಸೇವೆಗಳು ಭಾಗಶಃ ರದ್ದು!
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Jul 02, 2025 | 7:54 AM

Share

ಬೆಂಗಳೂರು, ಜುಲೈ 02: ಬೈಯಪ್ಪನಹಳ್ಳಿ (Baiyyappanahalli) ಟು ಹೊಸೂರು ನಡುವಿನ ಜೋಡಿ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ, ಮರನಾಯಕನಹಳ್ಳಿ ಯಾರ್ಡನಲ್ಲಿ ರಸ್ತೆ ಕೆಳ ಸೇತುವೆ (ಸಂಖ್ಯೆ 427A) ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ, ಕೆಳಕಂಡ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು ಮತ್ತು ಕೆಲ ರೈಲು ಸಂಚಾರದ ಮಾರ್ಗ ಬದಲಾಯಿಸಲಾಗಿದೆ. ಈ ಕುರಿತಾಗಿ ನೈರುತ್ಯ ರೈಲ್ವೆ (South Western Railway) ಮಾಹಿತಿ ನೀಡಿದೆ.

ಯಾವೆಲ್ಲಾ ರೈಲುಗಳು ಭಾಗಶಃ ರದ್ದು 

ಜುಲೈ 5, 7, ಮತ್ತು 8 ರಂದು ಮೂರು ದಿನಗಳ ಕಾಲ ಕೆಳಕಂಡ ಮೆಮು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

ನೈರುತ್ಯ ರೈಲ್ವೆ ಟ್ವೀಟ್​

  • ರೈಲು ಸಂಖ್ಯೆ 06591 ಯಶವಂತಪುರ – ಹೊಸೂರು, ರೈಲು ಸಂಖ್ಯೆ 66563 ಯಶವಂತಪುರ – ಹೊಸೂರು, ಮತ್ತು ರೈಲು ಸಂಖ್ಯೆ 66585 ಯಶವಂತಪುರ – ಹೊಸೂರು ರೈಲುಗಳು ಹೀಲಲಿಗೆ ಮತ್ತು ಹೊಸೂರು ನಡುವೆ ಭಾಗಶಃ ರದ್ದಾಗುತ್ತವೆ. ಈ ರೈಲುಗಳು ಹೀಲಲಿಗೆ ನಿಲ್ದಾಣದಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸುತ್ತವೆ.

ಇದನ್ನೂ ಓದಿ: ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ! ನಾನ್ ಸ್ಟಾಪ್ ಬಸ್​ಗಳಿಗೆ ಭರ್ಜರಿ ಬೇಡಿಕೆ

  • ಅದೇ ರೀತಿ, ರೈಲು ಸಂಖ್ಯೆ 06592 ಹೊಸೂರು ಯಶವಂತಪುರ, ರೈಲು ಸಂಖ್ಯೆ 66564 ಹೊಸೂರು ಯಶವಂತಪುರ, ಮತ್ತು ರೈಲು ಸಂಖ್ಯೆ 66586 ಹೊಸೂರು – ಯಶವಂತಪುರ ರೈಲುಗಳು ಹೊಸೂರು ಮತ್ತು ಹೀಲಲಿಗೆ ನಡುವೆ ಭಾಗಶಃ ರದ್ದಾಗುತ್ತವೆ. ಈ ರೈಲುಗಳು ತಮ್ಮ ನಿಗದಿತ ನಿರ್ಗಮನ ಸಮಯಕ್ಕೆ ಹೊಸೂರಿನ ಬದಲು ಹೀಲಲಿಗೆಯಿಂದ ಹೊರಡಲಿವೆ.

ರೈಲುಗಳ ಮಾರ್ಗ ಬದಲಾವಣೆ: ಕೆಳಕಂಡ ರೈಲುಗಳು ತಮ್ಮ ಮೂಲ ನಿಲ್ದಾಣಗಳಿಂದ ಜುಲೈ 6ರಂದು ಪ್ರಾರಂಭವಾಗುವ ಪ್ರಯಾಣಗಳಲ್ಲಿ ಮಾರ್ಗ ಬದಲಾವಣೆಗೊಳ್ಳುತ್ತವೆ.

  • ರೈಲು ಸಂಖ್ಯೆ 20641 ಬೆಂಗಳೂರು ಕಂಟೋನ್ಸೆಂಟ್ – ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ಕಂಟೋನ್ಸೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತ್ತೂರು, ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಈ ಪ್ರಯಾಣದಲ್ಲಿ ಹೊಸೂರು ಮತ್ತು ಧರ್ಮಪುರಿ ನಿಲುಗಡೆಗಳು ಇರುವುದಿಲ್ಲ.
  • ರೈಲು ಸಂಖ್ಯೆ 16211 ಯಶವಂತಪುರ-ಸೇಲಂ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಜೋಲಾರಪೇಟೆ, ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಇದು ಬೆಳಂದೂರು ರಸ್ತೆ ಮತ್ತು ಓಮಲೂರು ನಡುವಿನ ನಿಲುಗಡೆ ಇರುವುದಿಲ್ಲ.
  • ರೈಲು ಸಂಖ್ಯೆ 17235 ಎಸ್‌ಎಂವಿಟಿ ಬೆಂಗಳೂರು-ನಾಗರಕೋಯಿಲ್ ಎಕ್ಸ್‌ಪ್ರೆಸ್ ರೈಲು ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತೂರು, ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹೊಸೂರು ಮತ್ತು ಧರ್ಮಪುರಿ ನಿಲುಗಡೆಗಳನ್ನು ಕಳೆದುಕೊಳ್ಳುತ್ತದೆ.

ಇದನ್ನೂ ಓದಿ: Karnataka Rains: ಕರ್ನಾಟಕದ 9 ಜಿಲ್ಲೆಗಳಲ್ಲಿ ಜುಲೈ 8ರವರೆಗೆ ಸುರಿಯಲಿದೆ ಭಾರಿ ಮಳೆ, ಯೆಲ್ಲೋ ಅಲರ್ಟ್

  • ರೈಲು ಸಂಖ್ಯೆ 20642 ಕೊಯಮತ್ತೂರು – ಬೆಂಗಳೂರು ಕಂಟೋನ್ವೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇಲಂ, ತಿರುಪತೂರು, ಜೋಲಾರಪೇಟೆ ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಮತ್ತು ಬೆಂಗಳೂರು ಕಂಟೋನ್ಸೆಂಟ್ ಮಾರ್ಗವಾಗಿ ಸಂಚರಿಸಲಿದೆ. ಇದು ಧರ್ಮಪುರಿ ಮತ್ತು ಹೊಸೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
  • ರೈಲು ಸಂಖ್ಯೆ 11014 ಕೊಯಮತ್ತೂರು- ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು ಸೇಲಂ, ತಿರುಪತ್ತೂರು, ಜೋಲಾರಪೇಟೆ ಎ ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಮತ್ತು ಬೆಂಗಳೂರು ಕಂಟೋನ್ಸೆಂಟ್ ಮಾರ್ಗವಾಗಿ ಸಂಚರಿಸಲಿದೆ. ಈ ರೈಲಿಗೂ ಸಹ ಧರ್ಮಪುರಿ ಮತ್ತು ಹೊಸೂರು ನಿಲುಗಡೆ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಬೆಳಗಾವಿ ಎಪಿಎಂಸಿ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ ₹800 ರಿಂದ ₹1,200!
ಬೆಳಗಾವಿ ಎಪಿಎಂಸಿ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ ₹800 ರಿಂದ ₹1,200!
ದರ್ಶನ್ ಜಾಮೀನು ರದ್ದಿಗೆ ಅರ್ಜಿ; ವಿಚಾರಣೆಯ ಲೈವ್ ವಿಡಿಯೋ ಇಲ್ಲಿದೆ
ದರ್ಶನ್ ಜಾಮೀನು ರದ್ದಿಗೆ ಅರ್ಜಿ; ವಿಚಾರಣೆಯ ಲೈವ್ ವಿಡಿಯೋ ಇಲ್ಲಿದೆ