11 ವರ್ಷದ ಬಾಲಕಿ ಗಾಂಧಾರಿ ವಿದ್ಯೆ ಪ್ರವೀಣೆ, ಕಣ್ಣಿಗೆ ಬಟ್ಟೆ ಕಟ್ಟಿದ್ರೂ 3ನೇ ಕಣ್ಣಿಂದ ನೋಡೋ ಚತುರೆ
ಕಣ್ಣಿಗೆ ಬಟ್ಟೆ ಕಟ್ಟಿದ್ರೂ ಮೈಯೆಲ್ಲ ಕಣ್ಣು.. ಯಾವ ವಸ್ತು ಕೊಟ್ಟರೂ ಅದರ ಬಣ್ಣ ಹೇಳುತ್ತಾಳೆ. ಯಾವ ಗಣ್ಯರ ಫೋಟೋ ಕೊಟ್ಟರೂ ಅವರ ಹೆಸರು ಹೇಳುತ್ತಾಳೆ. ನಂಬರ್ ಆದರೂ ಸರಿ.. ಸೈಕಲ್ ತುಳಿಯೋಕು ಸೈ..ಅಷ್ಟಕ್ಕೂ ಆ ಬಾಲಕಿಗೆ ಒಲಿದಿರುವ ಗಾಂಧಾರಿ ವಿದ್ಯೆಯ ಮಹಿಮೆಯಾದ್ರು ಎನು? ಇಲ್ಲಿದೆ ಡಿಟೇಲ್ಸ್.
ಬಳ್ಳಾರಿ: ಇವಳಿಗಿನ್ನು ಆಟ ಆಡುತ್ತಾ ಪಾಠ ಕಲಿಯಬೇಕಾದ ವಯಸ್ಸು. ಆದ್ರೆ ಆ ಬಾಲಕಿ(girl) ಈಗ ಗಾಂಧಾರಿ ವಿದ್ಯೆ(gandhari vidya) ಪ್ರವೀಣೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅವಳು ಕಂಡು ಹಿಡಿಯದ ವಸ್ತುಗಳಿಲ್ಲ. ಕಣ್ಣು ಕಾಣದಿದ್ದರೂ ಅವಳಲ್ಲಿ ಆ ವಿದ್ಯೆ ಎಲ್ಲರನ್ನೂ ಬೆರಗುಗೊಳಿಸುತ್ತೆ. ಹೌದು.. ಈ ಬಾಲಕಿಯ ಹೆಸರು ಹಿಮಬಿಂದು. ಬಳ್ಳಾರಿ(Bellary) ತಾಲೂಕಿನ ಕೊರ್ಲಗುಂದಿ ಗ್ರಾಮದ ಈಕೆ 6ನೇ ಕ್ಲಾಸ್( 6th standard )ಓದುತ್ತಿದ್ದಾಳೆ. ಆಟ ಆಡುತ್ತಾ ಪಾಠ ಕಲಿಯಬೇಕಾದ ವಯಸ್ಸಿನಲ್ಲೇ ಈ ಬಾಲಕಿ ಗಾಂಧಾರಿ ವಿದ್ಯೆಯ ಮೂಲಕ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾಳೆ. ಮಹಾಭಾರತದಲ್ಲಿ ಗಾಂಧಾರಿ ಕಣ್ಣಿದ್ರೂ ಬಟ್ಟೆಕಟ್ಟಿಕೊಂಡಿದ್ದಳು. ಯಾವುದೇ ವಸ್ತು, ವ್ಯಕ್ತಿಗಳನ್ನ ಗುರುತಿಸುತ್ತಾಳೆ. ಗಾಂಧಾರಿ ರೀತಿಯೇ ಈಗ ಈ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಗೆ ಯಾವುದೇ ವಸ್ತು ಕೊಟರೂ ಅದರ ಬಣ್ಣ, ರೂಪವನ್ನ ಹೇಳುತ್ತಾಳೆ.
ಹಿಮಬಿಂದು ವರ್ಷದ ಹಿಂದೆ ಆನಂದ ಗುರುಜೀ ಮೂಲಕ ಆರಂಭಿಸಿದ ಗಾಂಧಾರಿ ವಿದ್ಯೆಯನ್ನ ಆನ್ಲೈನ್ ಮೂಲಕ ಪದ್ಮನಾಭ ಗುರೂಜೀ ಬಳಿ ಕಲಿತಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಸ್ತುಗಳನ್ನ ಗುರುತಿಸುತ್ತಾಳೆ. ನೋಟಿನ ಮೌಲ್ಯ ಅದರಲ್ಲಿರುವ ನಂಬರ್ ಸಹ ಹೇಳುತ್ತಾಳೆ. ಅಷ್ಟೇ ಅಲ್ಲ ಮೊಬೈಲ್ನಲ್ಲಿರುವ ನಂಬರ್ಗಳನ್ನ ಯಥಾವತ್ತಾಗಿ ಹೇಳುತ್ತಾಳೆ. ಇನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಓದುತ್ತಾಳೆ, ಸೈಕಲ್ ತುಳೀತಾಳೆ. ಗಾಂಧಾರಿ ವಿದ್ಯೆಯ ಸಾಧನೆಯಿಂದ ಶ್ರದ್ಧೆ, ನೆನಪಿನ ಶಕ್ತಿ ಹೆಚ್ಚಳವಾಗುತ್ತಂತೆ.
ಇನ್ನು ಗಾಂಧಾರಿ ವಿದ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹುಲಿಕಲ್ ನಟರಾಜ್, ಸವಾಲು ಎಸೆದಿದ್ದಾಳೆ. ಬಾಲಕಿಯ ಜೀವನದಲ್ಲಿ ಆಟವಾಡಬೇಡಿ.. ಜನರನ್ನ ಮೋಸ ಮಾಡಬೇಡಿ.. ಗಾಂಧಾರಿ ವಿದ್ಯೆ ಇರುವುದಾದರೆ ಬನ್ನಿ ಸಾಬೀತು ಮಾಡೋಣ ಎಂದು ಸವಾಲು ಹಾಕಿದ್ದಾರೆ.
ಅದೇನೆ ಇರಲಿ, ಗಾಂಧಾರಿ ವಿದ್ಯೆ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದೆ. ಇದೆಲ್ಲ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:24 am, Wed, 5 July 23