AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ಇಳುವರಿ ಬಂದ್ರೂ ಒಳ್ಳೆಯ ದರ ಸಿಗ್ತಿಲ್ಲ, ರೈತರ ಗೋಳು ಕೇಳೂರ್ಯಾರು

ಬಳ್ಳಾರಿ: ಆ ಭಾಗದ ರೈತರಿಗೆ ಜಮೀನಲ್ಲಿ ನಿರೀಕ್ಷೆಗಿಂತ ಹೆಚ್ಚು ಇಳುವರಿ ಬಂದಿತ್ತು. ಒಳ್ಳೆ ಮಳೆಯಾಗಿರೋದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದ್ರೆ, ಲಾಭದ ಕನಸು ಕಂಡಿದ್ದ ರೈತರು ಶಾಕ್ ಆಗಿದ್ದಾರೆ. ರೊಟ್ಟಿ ಸವೀಲಿ.. ರಾಗಿಮುದ್ದೆ ತಿನ್ಲಿ.. ಒಬ್ಬಟ್ಟಾದ್ರೂ ಚಪ್ಪರಿಸ್ಲಿ.. ಊಟ ಆದ್ಮೇಲೆ ಲಾಸ್ಟ್​​ಗೆ ಒಂದ್ ಚೂರು ರೈಸ್​​ ತಿನ್ಲಿಲ್ಲ ಅಂದ್ರೆ ನೆಮ್ಮದಿನೇ ಆಗಲ್ಲ.. ದೇಶದಲ್ಲಿ ರೈಸ್ ಪ್ರಿಯರೇ ಹೆಚ್ಚು. ಅದ್ರಲ್ಲೂ, ಬರ ಪ್ರವಾಹದಿಂದ ಕಂಗೆಟ್ರೂ ರೈತರು ಭತ್ತ ಬೆಳೆಯೋದನ್ನ ಇನ್ನೂ ಕಡಿಮೆ ಮಾಡಿಲ್ಲ. ಅಂತದ್ರಲ್ಲಿ ಒಳ್ಳೆ ಭತ್ತದ […]

ಉತ್ತಮ ಇಳುವರಿ ಬಂದ್ರೂ ಒಳ್ಳೆಯ ದರ ಸಿಗ್ತಿಲ್ಲ, ರೈತರ ಗೋಳು ಕೇಳೂರ್ಯಾರು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 17, 2020 | 12:12 PM

Share

ಬಳ್ಳಾರಿ: ಆ ಭಾಗದ ರೈತರಿಗೆ ಜಮೀನಲ್ಲಿ ನಿರೀಕ್ಷೆಗಿಂತ ಹೆಚ್ಚು ಇಳುವರಿ ಬಂದಿತ್ತು. ಒಳ್ಳೆ ಮಳೆಯಾಗಿರೋದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದ್ರೆ, ಲಾಭದ ಕನಸು ಕಂಡಿದ್ದ ರೈತರು ಶಾಕ್ ಆಗಿದ್ದಾರೆ.

ರೊಟ್ಟಿ ಸವೀಲಿ.. ರಾಗಿಮುದ್ದೆ ತಿನ್ಲಿ.. ಒಬ್ಬಟ್ಟಾದ್ರೂ ಚಪ್ಪರಿಸ್ಲಿ.. ಊಟ ಆದ್ಮೇಲೆ ಲಾಸ್ಟ್​​ಗೆ ಒಂದ್ ಚೂರು ರೈಸ್​​ ತಿನ್ಲಿಲ್ಲ ಅಂದ್ರೆ ನೆಮ್ಮದಿನೇ ಆಗಲ್ಲ.. ದೇಶದಲ್ಲಿ ರೈಸ್ ಪ್ರಿಯರೇ ಹೆಚ್ಚು. ಅದ್ರಲ್ಲೂ, ಬರ ಪ್ರವಾಹದಿಂದ ಕಂಗೆಟ್ರೂ ರೈತರು ಭತ್ತ ಬೆಳೆಯೋದನ್ನ ಇನ್ನೂ ಕಡಿಮೆ ಮಾಡಿಲ್ಲ. ಅಂತದ್ರಲ್ಲಿ ಒಳ್ಳೆ ಭತ್ತದ ಇಳುವರಿ ಬಂದಿದ್ರೂ ಅನ್ನದಾತರ ಬದುಕಲ್ಲಿ ಬರಸಿಡಿಲು ಅಪ್ಪಳಿಸಿದೆ.

ಉತ್ತಮ ಇಳುವರಿ ಬಂದ್ರೂ ಒಳ್ಳೆಯ ದರ ಸಿಗ್ತಿಲ್ಲ..! ಯೆಸ್​.. ಇಷ್ಟು ದಿನ ಮಳೆ ಇಲ್ಲ. ಸರಿಯಾದ ನೀರಿಲ್ಲ ಅಂತ ರೈತರು ಗೊಣಗ್ತಿದ್ರು. ಆದ್ರೆ, ಈ ವರ್ಷ ಸುರಿದ ಅಬ್ಬರದ ಮಳೆಗೆ ತುಂಗಭದ್ರಾ ಡ್ಯಾಂ ಭಾಗದ ರೈತರು ಉತ್ತಮ ಭತ್ತ ಬೆಳೆದಿದ್ದಾರೆ. ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಇಳುವರಿ ಬಂದಿದೆ. ಆದ್ರೆ, ಅರಬ್ ದೇಶಗಳಲ್ಲಿ ಸೋನಾ ಮಸೂರಿ ಅಕ್ಕಿಗೆ ಡಿಮ್ಯಾಂಡ್ ಕಡಿಮೆಯಾಗಿರೋದು ರೈತರ ನಿದ್ದೆಗೆಡಿಸಿದೆ. ಅಲ್ದೇ, ಮಾರ್ಕೆಟ್​ನಲ್ಲಿ ಬೇಡಿಕೆಗಿಂತ ಮಾಲು ಹೆಚ್ಚಾಗಿರೋದ್ರಿಂದ ಕಡಿಮೆ ರೇಟ್​ಗೆ ಭತ್ತ, ಅಕ್ಕಿ ಕೇಳ್ತಿದ್ದಾರಂತೆ. ಜೊತೆಗೆ ಚೆನ್ನೈ, ಹೈದರಾಬಾದ್, ಬೆಂಗಳೂರಲ್ಲೂ ಸೋನಾ ಮಸೂರಿ ಅಕ್ಕಿ ಕೇಳೋರಿಲ್ವಂತೆ. ಹೀಗಾಗಿ ಅನ್ನದಾತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಇನ್ನು, ಈ ಬಾರಿ ತುಂಗಭದ್ರಾ ಡ್ಯಾಂ ತುಂಬಿದ್ದು, ನದಿ ಪಾತ್ರದ ಜನ ಈಗಾಗಲೇ 2ನೇ ಬೆಳೆ ಬೆಳೆಯೋಕೆ ರೆಡಿಯಾಗಿದ್ದಾರೆ. ಆದ್ರೆ, ಈ ವರ್ಷ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಮರ್ಪಕ ಬೆಲೆ ಸಿಗ್ತಿಲ್ಲ. ಇದರ ಜೊತೆಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಭತ್ತ ಖರೀದಿಗೆ ಮಾರ್ಕೆಟ್​ನಲ್ಲಿ ಖರೀದಿ ಕೇಂದ್ರ ಕೂಡ ತೆರೆದಿದೆ. ಒಂದು ಕ್ವಿಂಟಾಲ್ ಭತ್ತಕ್ಕೆ 1815 ರೂಪಾಯಿ, ಎ-ಗ್ರೇಡ್ ಭತ್ತಕ್ಕೆ 1835 ರೂಪಾಯಿಯಂತೆ ಖರೀದಿಸಲಾಗ್ತಿದೆ. ಇದಕ್ಕೆ ಸಾಕಷ್ಟು ರೂಲ್ಸ್ ಅಂಡ್ ರೆಗ್ಯುಲೇಷನ್ ಇರೋದ್ರಿಂದ ಕಡಿಮೆ ರೇಟ್​ಗೆ ಬೆಳೆದ ಬೆಳೆಯನ್ನ ರೈತರು ಸೇಲ್ ಮಾಡ್ತಿದ್ದಾರೆ.

ಒಟ್ನಲ್ಲಿ, ಇಷ್ಟು ದಿನ ಬೆಳೆದ ಬೆಳೆ ಕೈಗೆ ಸಿಕ್ತಿಲ್ಲ ಅಂತಿದ್ದ ರೈತರು ಉತ್ತಮ ಇಳುವರಿ ಬಂದಿದ್ರೂ ಬರಸಿಡಿಸಲು ಅಪ್ಪಳಿಸಿದೆ. ವಿದೇಶಕ್ಕೆ ಅಕ್ಕಿ ರಫ್ತು ಕಡಿಮೆಯಾಗಿರೋದು ಒಳ್ಳೆ ಲಾಭದ ನಿರೀಕ್ಷೆಯಲ್ಲಿದ್ದ ಅನ್ನದಾತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

Published On - 12:09 pm, Fri, 17 January 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ