ಬೇಬಿ ಯಡಿಯೂರಪ್ಪ ತಮ್ಮ ನಾಯಕರ ಮೇಲಿರುವ ಕೇಸ್ಗಳ ಬಗ್ಗೆ ಮಾತನಾಡಿದ್ರೆ ಒಳ್ಳೆಯದು: ವಿಜಯೇಂದ್ರಗೆ ಹರಿಪ್ರಸಾದ್ ತಿರುಗೇಟು
ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಬಿ.ವೈ.ವಿಜಯೇಂದ್ರರನ್ನು ಬೇಬಿ ಯಡಿಯೂರಪ್ಪ ಎಂದು ಕರೆದಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲಿನ ಪ್ರಕರಣಗಳ ಕುರಿತು ಪ್ರಶ್ನಿಸಿದವರಿಗೆ, ಯಡಿಯೂರಪ್ಪರವರ ಹಗರಣಗಳನ್ನು ನೆನಪಿಸಿದ್ದಾರೆ. ರಾಮ ಮಂದಿರ ನಿಧಿ ಅಕ್ರಮ ಹಾಗೂ ಪ್ರಧಾನಿ ಮೋದಿ ರಾಜೀನಾಮೆಗೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ಸಿಬಿಐ ತನಿಖೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜುಲೈ 10: ಸೋನಿಯಾ ಗಾಂಧಿ ಮೇಲೆ ಯಾವುದೇ ಪ್ರಕರಣಗಳಿಲ್ಲವೇ ಎಂದು ಪ್ರಶ್ನಿಸುವ ಮೊದಲು, ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿದ್ದ ಬಿಎಸ್ ಯಡಿಯೂರಪ್ಪ ಇತಿಹಾಸವನ್ನು ನೆನಪಿಸಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿವೈ ವಿಜಯೇಂದ್ರ ಮಾಡಿರುವ ಟೀಕೆಗಳಿ ಬಗ್ಗೆ ಮಾತನಾಡಿದ ಅವರು, ವಿಜಯೇಂದ್ರರನ್ನ ಬೇಬಿ ಯಡಿಯೂರಪ್ಪ ಎಂದು ಕರೆದಿದ್ದಾರೆ. ತಮ್ಮ ನಾಯಕರ ಮೇಲಿನ ಆರೋಪಗಳಿಗೆ ಬೇಬಿ ಯಡಿಯೂರಪ್ಪ ಉತ್ತರಿಸಿದ್ದರೆ ಚೆನ್ನಾಗಿತ್ತು ಎಂದು ಕಿಡಿಕಾರಿದ್ದಾರೆ. ರಾಷ್ಟ್ರೀಯ ಹೆರಾಲ್ಡ್ ಪ್ರಕರಣವು 10 ವರ್ಷದಿಂದ ನಡೆಯುತ್ತಿದೆ. ಅದು ನ್ಯಾಷನಲ್ ಹೆರಾಲ್ಡ್ ಕಂಪನಿ ಆ್ಯಕ್ಟ್ನಲ್ಲಿದೆ. ಇದರಲ್ಲಿ 10 ರೂ ತೆಗೆದುಕೊಳ್ಳಲು ಆಗುವುದಿಲ್ಲ, 10 ರೂ ಕೊಡಲು ಆಗುವುದಿಲ್ಲ. ಕೇಂದ್ರದಲ್ಲಿ ಸರ್ಕಾರ ತಮ್ಮದೇ ಇರುವುದರಿಂದ, ಏನಾದರೂ ಅವ್ಯವಹಾರ ನಡೆದಿರುವುದು ಸಾಬೀತಾದರೆ, ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವಂತೆ ಸವಾಲು ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 10, 2026 03:05 PM
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

