AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿಯಲ್ಲಿ ಹೆಚ್ಚಾಯ್ತು ಉಪ ಚುನಾವಣೆ ಕಾವು; ಸಂಡೂರನ್ನು ವಶಪಡಿಸಿಕೊಳ್ಳಲು ಬಿಜೆಪಿ ಪ್ಲಾನ್​​

ಗಣಿನಾಡು ಬಳ್ಳಾರಿಯಲ್ಲಿ ಉಪ - ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಈಗಾಗಲೇ ಸಂಡೂರಿಗೆ ಎಂಟ್ರಿ ಕೊಟ್ಟಿರುವ ಕಮಲ ಪಡೆ, ಚುನಾವಣೆಯ ರಣಕಹಳೆಯನ್ನು ಊದಿದೆ. ಹೇಗಾದರೂ ಮಾಡಿ ಸಂಡೂರು ವಿಧಾನಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಬಿಜೆಪಿ ರಣತಂತ್ರವನ್ನು ರೂಪಿಸುತ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬಳ್ಳಾರಿಯಲ್ಲಿ ಹೆಚ್ಚಾಯ್ತು ಉಪ ಚುನಾವಣೆ ಕಾವು; ಸಂಡೂರನ್ನು ವಶಪಡಿಸಿಕೊಳ್ಳಲು ಬಿಜೆಪಿ ಪ್ಲಾನ್​​
ಸಂಡೂರನ್ನು ವಶಪಡಿಸಿಕೊಳ್ಳಲು ಬಿಜೆಪಿ ಪ್ಲಾನ್​​
ವಿನಾಯಕ ಬಡಿಗೇರ್​
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 20, 2024 | 10:28 PM

Share

ಬಳ್ಳಾರಿ, ಜು.20: ಗಡಿನಾಡು ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರ(Sandur Assembly Constituency)ಕ್ಕೆ ಯಾವುದೇ ಕ್ಷಣದಲ್ಲಾದರೂ ಉಪ ಚುನಾವಣೆ ಘೋಷಣೆ ಆಗುತ್ತದೆ. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲು ರಣ ತಂತ್ರ ರೂಪಿಸುತ್ತಿವೆ. ಆಕಾಂಕ್ಷಿಗಳ ಪಟ್ಟಿಯನ್ನು ತೆಗೆದುಕೊಂಡು ಯಾರು ಸೂಕ್ತ ಅಭ್ಯರ್ಥಿ ಎಂದು ಸಭೆ ಮೇಲೆ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೆ ಬಂದಿದೆ. ಜೊತೆಗೆ ನಿಲ್ಲಿಸುವ ಅಭ್ಯರ್ಥಿ ಪರ, ಮತದಾರರ ಒಲವು ಹೇಗಿದೆ ಎಂದೂ ಸರ್ವೇ ಮಾಡುತ್ತಿದೆ. ಇನ್ನು ಮುಂದುವರೆದಂತೆ ಇಂದು(ಶನಿವಾರ) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B. Y. Vijayendra) ಸಂಡೂರಿಗೆ ಎಂಟ್ರಿ ಕೊಟ್ಟಿದ್ದು, ಕಾರ್ಯಕಾರಣಿ ಸಭೆ ಮಾಡಿ ಯಾರನ್ನ ಅಭ್ಯರ್ಥಿ ಮಾಡಬೇಕು ಎಂದು ಸಮಾಲೋಚನೆ ನಡೆಸಿದ್ದಾರೆ.

ಸಂಡೂರಿನ ಖಾಸಗಿ ರೆಸಾರ್ಟ್​ನಲ್ಲಿ ಕಾರ್ಯಕಾರಣಿ ಸಭೆ ನಡೆಸಿರುವ ಬಿ. ವೈ. ವಿಜಯೇಂದ್ರ, ‘ಆಕಾಂಕ್ಷಿಗಳ ಪಟ್ಟಿಯನ್ನ ತೆಗೆದುಕೊಂಡು ಹೋಗಿದ್ದಾರೆ. ಯಾವ ಅಭ್ಯರ್ಥಿ ನಿಲ್ಲಿಸಿದ್ರೆ ಗೆಲ್ಲಬಹುದು ಎಂದು ಲೆಕ್ಕಾಚಾರ ನಡೆಸಿದ್ದಾರೆ. ಈಗಾಗಲೇ ಕೆ.ಎಸ್.ದಿವಾಕರ್, ಮಾಜಿ ಸಂಸದ ದೇವೇಂದ್ರಪ್ಪ ಅಥವಾ ಅವರ ಪುತ್ರ ಅಣ್ಣಪ್ಪ, ಬಿ. ಶ್ರೀರಾಮುಲು, ಈ ನಾಲ್ವರ ಹೆಸರು ಪ್ರಬಲವಾಗಿ ಕೇಳಿಬಂದಿವೆ.  ಇವರಲ್ಲಿ ಯಾರು ಫೈನಲ್ ಆಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಅಸೆಂಬ್ಲಿ ಉಪ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಫರ್ದಿಸುವ ಅಸೆ ನಿಖಿಲ್ ಕುಮಾರಸ್ವಾಮಿಗಿದೆಯೇ?

ಸಂಡೂರು ಉಪ ಚುನಾವಣೆಯ ರಣಕಹಳೆ ಊದಿದ ಕಮಲ ಪಡೆ

ಇನ್ನು ಸಂಡೂರ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿ ಜೊತೆಗೆ ಅಲ್ಲಿಯ ಪಕ್ಷದ ಮುಖಂಡರೊಂದಿಗೆ ಸಭೆ ಮಾಡಿರುವ ವಿಜಯೇಂದ್ರ, ಅಂತಿಮವಾಗಿ ಯಾರನ್ನ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಕೆಲವೇ ದಿನಗಳಲ್ಲಿ ತಿಳಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಯಾರೇ ಅಭ್ಯರ್ಥಿ ಆದರೂ ಎಲ್ಲರೂ ಒಟ್ಟಾಗಿಯೇ, ಒಡಕು ಇಲ್ಲದೆ ಬಿಜೆಪಿ ಗೆಲ್ಲಿಸುವ ಕೆಲಸ ಮಾಡಬೇಕು. ಸಂಡೂರ ಕಾಂಗ್ರೆಸ್ ಭದ್ರಕೋಟೆ. ಇದನ್ನ ಚಿದ್ರ ಮಾಡಿ ಕಮಲ ವಶ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಹೋರಾಟ ಎಂದು ರಣ ಕಹಳೆ ಊದಿದ್ದಾರೆ.

ಒಟ್ಟಿನಲ್ಲಿ ಸಂಡೂರು ವಿಧಾನ ಸಭಾ ಕ್ಷೇತ್ರ ಉಪಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳ ಪ್ರತಿಷ್ಠೆಯಾಗಿದ್ದು, ಹೇಗಾದರೂ ಮಾಡಿ ಕಾಂಗ್ರೆಸ್ ಭದ್ರ ಕೋಟೆ ಚಿದ್ರ ಮಾಡಲು ಬಿಜೆಪಿ ಹವಣಿಸುತ್ತಿದೆ. ಇತ್ತ ಕಾಂಗ್ರೆಸ್ ಕೂಡ ತನ್ನ ಕೋಟೆಯನ್ನ ಕಾಯ್ದುಕೊಂಡು ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದೆ. ಅಂತಿಮವಾಗಿ ಜನ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ