ವಿಜಯನಗರ: ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ವಿಶ್ವ ವಿಖ್ಯಾತ ಹಂಪಿ ಉತ್ಸವ (Hampi Utsava) ವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಹಂಪಿ ಉತ್ಸವ ಅಂದರೆ ನಮ್ಮ ನಾಡಿನ ಗತವೈಭವದ ಉತ್ಸವ. ಚರಿತ್ರೆಯಲ್ಲಿ ಬದಲಾವಣೆ ತಂದಿದ್ದು ವಿಜಯನಗರ ಸಾಮ್ರಾಜ್ಯ. ಐತಿಹಾಸಿಕ ಹಂಪಿ ಉತ್ಸವ ಎಂ.ಪಿ.ಪ್ರಕಾಶ್ರಿಂದ ಆರಂಭವಾಗಿದೆ. ಹಂಪಿ ಉತ್ಸವ ರಾಜ್ಯದ ಗತವೈಭವ ಬಿಂಬಿಸುವಲ್ಲಿ ಕಾರಣವಾಗಿದೆ. ಆನಂದ್ ಸಿಂಗ್ ಹೋರಾಟ ಮಾಡಿ ಜಿಲ್ಲೆ ಮಾಡಿಕೊಂಡಿದ್ದಾರೆ. ವಿಜಯನಗರದ ಅಭಿವೃದ್ಧಿಗೆ ಆನಂದ್ ಸಿಂಗ್ ಶ್ರಮಿಸುತ್ತಿದ್ದಾರೆ. ನೈಸರ್ಗಿಕ ಸಂಪತ್ತು ಮತ್ತು ಇತಿಹಾಸ ಬಿಂಬಿಸುವ ಕುರುಹು ಇಲ್ಲಿವೆ. ದೊಡ್ಡ ಪ್ರಮಾಣದಲ್ಲಿ ಹಂಪಿಯನ್ನ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಹೇಳಿದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 120 ಕೋಟಿ ಅನುದಾನ ಕೊಟ್ಟಿದ್ದೇನೆ. ಇನ್ನೊಂದು 2 ವಾರದಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ. ಸಮಗ್ರ ಕರ್ನಾಟಕ, ನವ ಕರ್ನಾಟಕ ಕಟ್ಟುವ ಸಂಕಲ್ಪ ಮಾಡಬೇಕಿದೆ. ಹಂಪಿ ಅಭಿವೃದ್ಧಿಗೆ ಪ್ರಾಚ್ಯವಸ್ತು ಇಲಾಖೆ ಅನುಮತಿ ಪಡೆಯಬೇಕಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: Hampi Utsav 2023: ಮನ ಸೆಳೆಯುತ್ತಿರುವ ಹಂಪಿ ಉತ್ಸವ: ಜಿಲ್ಲೆಯ ಜೀವ ವೈವಿಧ್ಯತೆ ಅನಾವರಣ
ಇಂದು ವಿಜಯನಗರದ ಹಂಪಿಯಲ್ಲಿ ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ಉದ್ಘಾಟಿಸಿ, ಮಾತನಾಡಿದೆನು. ವಿಜಯನಗರ ಸಾಮ್ರಾಜ್ಯದ ಗತವೈಭವಕ್ಕೆ ಸಾಕ್ಷಿಯಾಗಿರುವ ಹಂಪಿಯ ಪ್ರವಾಸೋದ್ಯಮವನ್ನು ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. pic.twitter.com/pDx4aiCAyv
— Basavaraj S Bommai (@BSBommai) January 27, 2023
ಕೋವಿಡ್ನಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ವಿಶ್ವ ವಿಖ್ಯಾತ ಹಂಪಿ ಉತ್ಸವ ಈ ಭಾರಿ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯುತ್ತಿದೆ. ಹಂಪಿಯ ಗಾಯತ್ರಿ ಪೀಠದ ಬಳಿ ನಿರ್ಮಿಸಿರುವ ಅದ್ದೂರಿಯಾದ ವೇದಿಕೆಯಲ್ಲಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೊದಲ ಭಾರಿ ಚಾಲನೆ ನೀಡಿದ್ರು. ಸಮಾರಂಭದಲ್ಲಿ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಸೇರಿದಂತೆ ಹಲವು ಗಣ್ಯರು ಉತ್ಸವದಲ್ಲಿ ಭಾಗಿಯಾಗಿದ್ರು.
ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿರುವ ಉತ್ಸವದಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಪ್ರದರ್ಶನಗಳನ್ನ ಆಯೋಜಿಸಲಾಗಿದ್ದು, ಉತ್ಸವದಲ್ಲಿ ಓಡಿಸ್ಸಾದ ಕಲಾವಿದರು ಮರಳಿನಲ್ಲಿ ಅಪರೂಪದ ಮರಳು ಕೃತಿಗಳನ್ನ ರಚಿಸಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಫಲಪುಪ್ಪ ಪ್ರದರ್ಶನ ಆಯೋಜಿಸಿರುವ ಫಲಪುಪ್ಪ ಪ್ರದರ್ಶನದಲ್ಲಿ ಹಂಪಿಯ ವಿವಿದ ಸ್ಮಾರಕಗಳು ಅರಳಿವೆ. ಸಾಲು ಮಂಟಪವನ್ನ ರಚನೆ ಮಾಡಿರುವುದು ಪೇಕ್ಷಕರ ಆಕರ್ಷಣೆಗೆ ಪಾತ್ರವಾಗಿವೆ. ಉತ್ಸವದಲ್ಲಿ ಮೊದಲ ದಿನ ಅರ್ಜುನ ಜನ್ಯ ಸೇರಿದಂತೆ ವಿವಿಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳು ನೀಡಲಿದ್ದು, ಸಾಂಸ್ಕೃತಿಕ ಪ್ರೀಯರ ರಂಜನೆಗೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:41 pm, Fri, 27 January 23