ಬಳ್ಳಾರಿ: ಅನಾರೋಗ್ಯದಿಂದ ಬಿಎಸ್ಎಫ್ ಯೋಧ ಕೊನೆಯುಸಿರು
ಬಳ್ಳಾರಿ ಜಿಲ್ಲೆಯ ಸಂಡೂರು(Sandur) ತಾಲೂಕಿನ ದೋಣಿಮಲೈ NMDC ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಿಎಸ್ಎಫ್ ಯೋಧ ಕೊನೆಯುಸಿರೆಳೆದಿದ್ದಾರೆ. ಕುಂದಗೋಳ ತಾಲೂಕಿನ ಬರದ್ವಾಡ ನಿವಾಸಿಯಾದ ಮೃತ ಯೋಧ, ದೋಣಿಮಲೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬಳ್ಳಾರಿ, ಜು.07: ಅನಾರೋಗ್ಯದಿಂದ ಬಿಎಸ್ಎಫ್(BSF) ಯೋಧರೊಬ್ಬರು ಜಿಲ್ಲೆಯ ಸಂಡೂರು(Sandur) ತಾಲೂಕಿನ ದೋಣಿಮಲೈ NMDC ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಯಲ್ಲಪ್ಪ ಬಸವರಾಜ್ ಸೂರಣಗಿ(34) ಮೃತ ಯೋಧ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬರದ್ವಾಡ ನಿವಾಸಿಯಾದ ಯೋಧ ಯಲ್ಲಪ್ಪ, ದೋಣಿಮಲೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ದುರ್ಮರಣ
ಬೆಂಗಳೂರು: ದಾಸನಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಅಪರಿಚಿತ ಮಹಿಳೆ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ನಡೆದಿದೆ. ಅಪಘಾತದ ನಂತರ ಲಾರಿ ಸ್ಥಳದಲ್ಲೇ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ. ಇನ್ನು ಮೃತ ಅಪರಿಚಿತ ಮಹಿಳೆ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೂವರಿಗೆ ಗಾಯ
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೂವರಿಗೆ ಗಾಯವಾದ ಘಟನೆ ನಡೆದಿತ್ತು. ಈ ಹಿನ್ನಲೆ ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆ ಸಾರ್ವಜನಿಕರು ಸೇರಿಕೊಂಡು ಚಿರತೆಯನ್ನ ಕೊಂದಿದ್ದಾರೆ. ಚಿರತೆ ತಪ್ಪಿಸಿಕೊಂಡರೆ ಮತ್ತೆ ದಾಳಿ ನಡೆಸುವ ಭಯದಲ್ಲಿ ಚಿರತೆ ಹತ್ಯೆ ಮಾಡಲಾಗಿದೆ. ಚಿರತೆ ಓಡಿಸಲು ಹೋಗಿದ್ದ ಮೂವರ ಮೇಲೆ ಬೆಳಗ್ಗೆ ದಾಳಿ ನಡೆಸಿತ್ತು. ಹೀಗಾಗಿ ಅರಣ್ಯ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರು. ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆ ಚಿರತೆ ಸೆರೆ ಸಿಗದ ಹಿನ್ನೆಲೆ ಚಿರತೆ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದಾರೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ