ಬಳ್ಳಾರಿ ವೈದ್ಯನ ಕಿಡ್ನ್ಯಾಪ್ ಮಾಡಿ 300 ರೂ ಬಸ್ ಚಾರ್ಜ್ ಕೊಟ್ಟು ವಾಪಸ್ ಕಳಿಸಿದ ಖದೀಮರು
ಬಳ್ಳಾರಿಯ ವೈದ್ಯರೊಬ್ಬರ ಅಪಹರಣ ಪ್ರಕರಣದಲ್ಲಿ ಅಪಹರಣಕಾರರು ಬಸ್ ಚಾರ್ಜ್‌ಗೆ 300 ರೂ. ನೀಡಿ ವೈದ್ಯನನ್ನು ಬಿಟ್ಟು ಕಳುಹಿಸಿರುವಂತಹ ಘಟನೆ ನಡೆದಿದೆ. ಅಪಹರಣಕಾರರು ಕೋಟ್ಯಾಂತರ ರೂ. ಬೇಡಿಕೆ ಇಟ್ಟಿದ್ದರು, ಆದರೆ ಅಂತಿಮವಾಗಿ ವೈದ್ಯರನ್ನು ಬಿಟ್ಟು ಕಳೂಹಿಸಿದ್ದಾರೆ. ಸದ್ಯ ಘಟನೆ ಬಳ್ಳಾರಿಯಲ್ಲಿ ಆತಂಕ ಸೃಷ್ಟಿಸಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬಳ್ಳಾರಿ, ಜನವರಿ 26: ಅವರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು (doctor). ಬೆಳಿಗ್ಗೆ ತಮ್ಮ ಮನೆ ಮುಂದೆ ವಾಕಿಂಗ್ ಮಾಡುತ್ತಿರುತ್ತಾರೆ. ಏಕಾಏಕಿ ಕಾರಿನಲ್ಲಿ ಬಂದ ದಾಂಡಿಗರು ಅವರನ್ನು ಕಿಡ್ನ್ಯಾಪ್ ಮಾಡುತ್ತಾರೆ. ಕಿಡ್ನ್ಯಾಪ್ ಮಾಡಿ ಊರು ಊರು ಸುತ್ತಿಸಿ ಚೆನ್ನಾಗಿ ತಳಿಸಿ ಬಳಿಕ ಬಸ್ ಚಾರ್ಜ್‌ಗೆ ಅಂತ 300 ರೂ ಕೊಟ್ಟು ಕಳುಹಿಸಿರುವಂತಹ ಘಟನೆ ನಡೆದಿದೆ.
ಊರು ಊರು ಸುತ್ತಿಸಿ ಬಳಿಕ ಬಿಟ್ಟು ಕಳುಹಿಸಿದ ಕಿಡ್ನ್ಯಾಪಸ್೯
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸುನೀಲ್ರನ್ನ ಇಂದು ಬೆಳಿಗ್ಗೆ ದಾಂಡಿಗರ ಗುಂಪೊಂದು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸುಮಾರು ಆರು ಕೋಟಿ ರೂಗೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆ ಅಲಟ್೯ ಆದ ಖಾಕಿ ಪಡೆ ಮೂರು ತಂಡವನ್ನ ರಚನೆ ಮಾಡಿ ಕಿಡ್ನ್ಯಾಪರ್ಸ್‌ಗಳಿಗೆ ಬಲೆ ಬಿಸಿತ್ತು. ವೈದ್ಯನ ಮೊಬೈಲ್ ನೆಟ್ವರ್ಕ್ ಲೊಕೇಶನ್ ಪತ್ತೆ ಮಾಡಿ ಪ್ರಕರಣದ ಹಿಂದೆ ಬಿದಿದ್ದರು. ಹೀಗಾಗಿ ಭಯಗೊಂಡ ಕಿಡ್ನ್ಯಾಪರ್ಸ್ ಗುಂಪು ವೈದ್ಯನನ್ನ ಊರು ಊರು ಸುತ್ತಿಸಿ ಬಳಿಕ ಜಿಲ್ಲೆಯ ಕುರಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ. ಕಿಡ್ನ್ಯಾಪ್ ಆಗಿದ್ದ ವೈದ್ಯ ಮರಳಿ ಸಿಕ್ಕಿದಕ್ಕೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಬೆಳ್ಳಂ ಬೆಳಿಗ್ಗೆ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಅಪಹರಣ
ಇನ್ನು ಕಿಡ್ನ್ಯಾಪ್ ಮಾಡಿದ್ದ ಗುಂಪು, ವೈದ್ಯ ಸುನೀಲ್ ಪೋನ್ ಬಳಕೆ ಮಾಡಿಯೇ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೂರು ಕೋಟಿ ಹಣ, ಮೂರು ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಗಾಬರಿಗೊಂಡಿದ್ದ ವೈದ್ಯನ ಕುಟುಂಬಸ್ಥರು ಬಳ್ಳಾರಿ ಎಸ್ಪಿ. ಡಾ. ಶೋಭಾರಾಣಿ ಮೊರೆ ಹೋಗಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬಳ್ಳಾರಿ ಪೋಲಿಸರು ಕಿಡ್ನ್ಯಾಪಸ್೯ ಬೆನ್ನುಹತ್ತಿದ್ದರು. ಆದರೆ ಕೊನೆ ರಾತ್ರಿ ಸುಮಾರು 8ಕ್ಕೆ ಕಿಡ್ನ್ಯಾಪಸ್೯ಗಳಿಗೆ ಅದೇನು ಬುದ್ದಿ ಬಂತೊ ಗೊತ್ತಿಲ್ಲ. ವೈದ್ಯನ ಕೈಗೆ 300 ರೂ ಕೊಟ್ಟು ನೀ ಬಸ್‌ಗೆ ಹೋಗು ಅಂತಾ ಬಿಟ್ಟು ಕಳಿಸಿದ್ದಾರೆ.
ಕಿಡ್ನ್ಯಾಪಸ್೯ಗಳಿಗೆ ಕೈ ಬಿಡುತ್ತಿದ್ದಂತೆ ಬದುಕಿತಲೇ ಬಡ ಜೀವ ಅಂತಾ ಓಡೋಡಿ ಬಂದ ವೈದ್ಯ ತನ್ನ ಸಹೋದರ ವೇಣು ಅವರಿಗೆ ಕರೆ ಮಾಡಿ, ನನ್ನ ಸೋಮಸಮುದ್ರ ಗ್ರಾಮದ ಹತ್ತಿರ ಬಿಟ್ಟು ಹೋಗಿದ್ದಾರೆ. ಅವರು ಮೂರು ಜನ ಇದ್ದರು. ಕನ್ನಡ ಮತ್ತು ಹಿಂದಿ ಬಾಷೆ ಮಾತನಾಡುತ್ತಿದ್ದರು, ಬಂದು ಕರಕೊಂಡು ಹೋಗಿ ಅಂತಾ ಹೇಳಿದ್ದಾರೆ. ತಕ್ಷಣ ಅಲಟ್೯ ಆದ ಕುಟುಂಬಸ್ಥರು ಪೋಲಿಸರಿಗೆ ಮಾಹಿತಿ ನೀಡಿ ಅಲ್ಲಿಂದ ವೈದ್ಯ ಸುನೀಲ್‌ರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಸದ್ಯಕ್ಕೆ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದ್ದು, ತನಿಖೆ ಮುಂದುವರೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.