AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರುಗೋಡು ಠಾಣೆ ಪಿಎಸ್ಐ ಮಣಿಕಂಠ ದರ್ಪ ಪ್ರಕರಣ; ಪಿಎಸ್ಐ ಕೆ.ಹೆಚ್​.ಮಣಿಕಂಠ ಅಮಾನತು

ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದ ಕುರುಗೋಡು ಠಾಣೆ ಪಿಎಸ್ಐ ಕೆ.ಹೆಚ್​.ಮಣಿಕಂಠರನ್ನು ಅಮಾನತುಗೊಳಿಸಿ, ಇಲಾಖೆ ವಿಚಾರಣೆಗೆ ಬಳ್ಳಾರಿ ಎಸ್​ಪಿ ಸೈದುಲು ಅಡಾವತ್ ಸೂಚಿಸಿದ್ದಾರೆ.

ಕುರುಗೋಡು ಠಾಣೆ ಪಿಎಸ್ಐ ಮಣಿಕಂಠ ದರ್ಪ ಪ್ರಕರಣ; ಪಿಎಸ್ಐ ಕೆ.ಹೆಚ್​.ಮಣಿಕಂಠ ಅಮಾನತು
ಪಿಎಸ್ಐ ಕೆ.ಹೆಚ್​.ಮಣಿಕಂಠ
TV9 Web
| Edited By: |

Updated on:Aug 12, 2022 | 7:14 PM

Share

ಬಳ್ಳಾರಿ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದ ಕುರುಗೋಡು ಠಾಣೆ ಪಿಎಸ್ಐ (PSI) ಕೆ.ಹೆಚ್​.ಮಣಿಕಂಠರನ್ನು ಅಮಾನತುಗೊಳಿಸಿ, ಇಲಾಖೆ ವಿಚಾರಣೆಗೆ ಬಳ್ಳಾರಿ (Bellary) ಎಸ್​ಪಿ (SP) ಸೈದುಲು ಅಡಾವತ್ ಸೂಚಿಸಿದ್ದಾರೆ. ಕುರಗೋಡು ಠಾಣೆಗೆ ನೂತನ PSI ಆಗಿ ಎನ್​.ರಘು ನೇಮಕಗೊಂಡಿದ್ದಾರೆ. ಹಲ್ಲೆ, ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ ಆರೋಪ ಹಿನ್ನೆಲೆ PSI ಕೆ.ಹೆಚ್​ಮಣಿಕಂಠ ವಿರುದ್ಧ ಈರಣ್ಣ ದೂರು ನೀಡಿದ್ದರು. ಈರಣ್ಣರ ಮೇಲಿನ ಹಲ್ಲೆ ಖಂಡಿಸಿ ಕೊಳೂರು ಗ್ರಾಮಸ್ಥರು ಪಿಎಸ್​​ಐ ವಿರುದ್ಧ ಧರಣಿ ನಡೆಸಿದ್ದರು. ಪ್ರತಿಭಟನೆ ಬೆನ್ನಲ್ಲೇ ಕುರಗೋಡು ಠಾಣೆ PSI ವಿರುದ್ಧ ಪ್ರಕರಣ ದಾಖಲಾಗಿತ್ತು.

ನಡೆದಿದ್ದೇನು?

ಮೊಹರಂ ಹಬ್ಬದ ಹಿನ್ನೆಲೆ ಕೊಳೂರು ಗ್ರಾಮದಲ್ಲಿ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣದ ಗಲಾಟೆ ಸಂಬಂಧ ಗ್ರಾಮಕ್ಕೆ ಪಿಎಸ್ಐ ಮಣಿಕಂಠ ಹೋಗಿದ್ದರು.ಈ ವೇಳೆ ಪಿಎಸ್ಐ ಮಣಿಕಂಠ ಪಕ್ಕದಲ್ಲಿ ನಿಂತಿದ್ದ ಈರಣ್ಣನಿಗೆ ಘಟನೆಗೆ ನೀನೇ ಕಾರಣ ಅಂತಾ ಸಾರ್ವಜನಿಕವಾಗಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.

ಕಳೆದ ಹದಿನೈದು ದಿನಗಳ ಹಿಂದೆ ಕೊಳೂರು ಗ್ರಾಮದ ಕಾಲುವೆಯಲ್ಲಿ ಅನಾಮಿಕ ಶವ ನೋಡಲು ಹೋದಾಗ ಪಿಎಸ್ಐ ಈರಣ್ಣನ ಮೇಲೆ ಯೂ ಹಲ್ಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಹಲ್ಲೆಯಿಂದಾಗಿ ಕಾಲು‌ಮುರಿದುಕೊಂಡಿದ್ದ ಈರಣ್ಣರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಳೀಯ ಶಾಸಕ ಗಣೇಶ್ ನೇತೃತ್ವದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ಇದೀಗ ಮತ್ತೆ ಪಿಎಸ್ಐ ಮಣಿಕಂಠರಿಂದ ಈರಣ್ಣನ ಮೇಲೆ ಕ್ಷುಲ್ಲಕ ಕಾರಕ್ಕೆ ಹಲ್ಲೆ ಮಾಡಲಾಗಿದೆ.

ಈ ಸಂಬಂಧ ಪಿಎಸ್ಐ ಅನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಠಾಣೆ ಮುಂದೆ ನೂರಕ್ಕೂ ಹೆಚ್ಚು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದರು. ಕುರುಗೋಡ್ ಪೊಲೀಸ ಠಾಣೆಗೆ ಎಸ್​ಪಿ ಸ್ಥಳಕ್ಕೆ ಬರುವಂತೆ ಜನರ ಪಟ್ಟು ಹಿಡಿದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಇ ಇಲ್ಲಿ ಕ್ಲಿಕ್​ ಮಾಡಿ

Published On - 7:14 pm, Fri, 12 August 22

Follow Us
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!