AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nadoja Award 2022: ಹಂಪಿ ಕನ್ನಡ ವಿವಿಯಿಂದ ಮೂವರು ಗಣ್ಯರಿಗೆ ನಾಡೋಜ ಗೌರವ

ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

Nadoja Award 2022: ಹಂಪಿ ಕನ್ನಡ ವಿವಿಯಿಂದ ಮೂವರು ಗಣ್ಯರಿಗೆ ನಾಡೋಜ ಗೌರವ
ಭಾಷ್ಯಂ ಸ್ವಾಮಿ, ಗೊ.ರು. ಚನ್ನಬಸಪ್ಪ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ
TV9 Web
| Updated By: ಆಯೇಷಾ ಬಾನು|

Updated on: Apr 07, 2022 | 3:51 PM

Share

ವಿಜಯನಗರ: ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ. ಹಂಪಿ ಕನ್ನಡ ವಿವಿಯ ನಾಡೋಜ ಗೌರವಕ್ಕೆ ಜಿ. ಕೃಷ್ಣಪ್ಪ, ಮಲೆಯೂರು ಗುರುಸ್ವಾಮಿ, ಡಾ ಎಸ್.ಸಿ. ಶರ್ಮಾ, ಗುರುಲಿಂಗ ಕಾಪಸೆ, ಡಾ. ಶಿವಾನಂದ ನಾಯಕ, ರಮೇಶ ಎಂ.ಕೆ. ನಾಸೀರ್ ಅಹಮ್ಮದ್ ಸೇರಿದಂತೆ ಒಟ್ಟು ಹತ್ತು ಜನರ ಹೆಸರು ನಾಡೋಜಕ್ಕೆ ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ರಾಜ್ಯಪಾಲರು ಮೂವರ ಹೆಸರಿಗೆ ಅಂಕಿತ ಹಾಕಿದ್ದಾರೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ತಿಳಿಸಿದ್ದಾರೆ.

ಏಪ್ರಿಲ್ 12 ರಂದು ಸಂಜೆ 5.30 ಕ್ಕೆ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ನುಡಿಹಬ್ಬದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾಡೋಜ ಪ್ರದಾನ ಮಾಡುವರು. ಚಿತ್ರದುರ್ಗದ ಮುರುಘಾ ಶರಣರು, ಪತ್ರಕರ್ತ ಪದ್ಮರಾಜ ದಂಡಾವತಿ, ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಬಿ.ಎಸ್. ಪುಟ್ಟಸ್ವಾಮಿ, ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಅವರಿಗೆ ಡಿ.ಲಿಟ್ ಹಾಗೂ 1387 ವಿದ್ಯಾರ್ಥಿಗಳಿಗೆ ವಿವಿಧ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್ . ಅಶ್ವತ್ಥನಾರಾಯಣ ಪ್ರದಾನ ಮಾಡಲಿದ್ದಾರೆ. ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟಿಮನಿ ಘಟಿಕೋತ್ಸವ ಭಾಷಣ ಮಾಡುವರು ಎಂದು ವಿವರಿಸಿದರು.

ನಾಡೋಜ ಗೌರವಕ್ಕೆ ಇದೆ ಮಹತ್ವ ರಾಜ್ಯದ ಹಲವು ವಿಶ್ವ ವಿದ್ಯಾಲಯಗಳು ಪ್ರತಿ ವರ್ಷ ಘಟಿಕೋತ್ಸವದ ವೇಳೆ ಗಣ್ಯರು, ಸಾಹಿತಿಗಳು, ಚಲನಚಿತ್ರರಂಗದ ಸಾಧಕರು, ಸಮಾಜ ಕಾರ್ಯ ಕೈಗೊಂಡವರಿಗೆ ಡಾಕ್ಟರೇಟ್ ಗೌರವ ನೀಡಿ ಪ್ರದಾನ ಮಾಡಿ ಗೌರವಿಸುತ್ತವೆ. ಆದ್ರೆ 1991ರ ನವಂಬರ್ 1 ರಂದು ರಾಜೋತ್ಸವದಂದು ಸ್ಪಾಪನೆಯಾಗಿರುವ. ರಾಜ್ಯದ ಎಕೈಕ ಕನ್ನಡ ವಿಶ್ವ ವಿದ್ಯಾಲಯವಾಗಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪ್ರದಾನದ ಬದಲಾಗಿ ನಾಡೋಜ ಗೌರವ ನೀಡಿ ಗಣ್ಯರನ್ನ ಗೌರವಿಸಲಾಗುತ್ತದೆ.

ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಪ್ರತಿ ವರ್ಷ ಆಚರಿಸುವ ನುಡಿಹಬ್ಬದಲ್ಲಿ ಕರ್ನಾಟಕದ ಜನ, ಭಾಷೆ,ಕಲೆ, ಸಂಸ್ಕೃತಿಗಳ ಏಳಿಗೆಗಾಗಿ ದುಡಿದ ಮಹನೀಯರನ್ನ ಗುರುತಿಸಿ ಅವರಿಗೆ ನಾಡೋಜ ಎಂಬ ಗೌರವ ಪದವಿಯನ್ನ ನೀಡುತ್ತ ಬಂದಿದೆ. ಆದಿ ಕವಿ ಪಂಪನಿಗೆ ಸಂಬಂಧಿಸಿದ ನಾಡೋಜ ಎಂಬ ಶಬ್ಧವು ಕರ್ನಾಟಕದ ಪರಂಪರೆಯ ಸ್ವಾತಂತ್ರ್ಯವನ್ನು, ನಾಡನ್ನು ಕಟ್ಟಿದವರು ಎಂಬ ಮನ್ನಣೆಯನ್ನು ಸೂಚಿಸುವಂಥದ್ದಾಗಿದೆ.

ವಿಜಯನಗರ ಜಿಲ್ಲೆಯ ಕಮಲಾಪುರದಲ್ಲಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಇದೂವರೆಗೂ ನುಡಿಹಬ್ಬಗಳು ಜರುಗಿದ್ದು. ಇಲ್ಲಿಯವರೆಗೂ ಒಟ್ಟು 91ಗಣ್ಯರಿಗೆ ನಾಡೋಜ ಗೌರವ ಪ್ರದಾನ ಮಾಡಿ ಗೌರವಿಸಿದೆ. ಕುವೆಂಪು, ಗಂಗೂಬಾಯಿ ಹಾನಗಲ್, ಪಾಟೀಲ ಪುಟ್ಟಪ್ಪ, ಶಿವರಾಂ ಕಾರಂತ, ಪಂಡಿತ ಪುಟ್ಟರಾಜ ಗವಾಯಿ, ಡಾಕ್ಟರ್ ರಾಜಕುಮಾರ್, ಚಂದ್ರಶೇಖರ ಕಂಬಾರ್, ಪ್ರೋ ಕೆಎಸ್ ನಿಸಾರ್ ಅಹ್ಮಮದ್, ಡಾ ಸರೋಜಿನಿ ಮಹಿಷಿ, ನ್ಯಾಯಮೂರ್ತಿ ಎಸ್ ಆರ್ ನಾಯಕ, ಏಣಗಿ ಬಾಳಪ್ಪ, ವಿರೇಂದ್ರ ಹೆಗಡೆ, ಎಸ್ ಎಲ್ ಬೈರಪ್ಪ ಸೇರಿದಂತೆ ನಾಡಿನ 91 ಗಣ್ಯರಿಗೆ ಇದೂವರೆಗೂ ನಾಡೋಜ ಪದವಿ ನೀಡಿ ಗೌರವಿಸಲಾಗಿದೆ.

ವರದಿ: ವೀರಪ್ಪ ದಾನಿ, ಟಿವಿ9 ಬಳ್ಳಾರಿ.

ಇದನ್ನೂ ಓದಿ: ಬ್ಯಾಂಕ್ ಹಣ ಅಕ್ರಮ ವರ್ಗಾವಣೆ ಪ್ರಕರಣ: ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ವಿಚಾರಣೆ ನಡೆಸಿದ ಇಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!