ಕೋರಮಂಗಲ ಪಿಜಿ ಹತ್ಯೆ ಕೇಸ್​: ಕೋರ್ಟ್​​ಗೆ 1205 ಪುಟಗಳ ಚಾರ್ಜ್​​ಶೀಟ್ ಸಲ್ಲಿಸಿದ ಪೊಲೀಸರು

ಕೋರಮಂಗಲದಲ್ಲಿ ಇತ್ತೀಚೆಗೆ ರಾತ್ರೋ ರಾತ್ರಿ ಪಿಜಿಯಲ್ಲಿದ್ದ ಹುಡುಗಿಗೆ ಯುವಕನೋರ್ವ ಚಾಕು ಚುಚ್ಚಿದ ಪ್ರಕರಣ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, 85 ಸಾಕ್ಷಿಗಳನ್ನು ಒಳಗೊಂಡ ಚಾರ್ಜ್​ಶೀಟ್​ ಅನ್ನು ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್​​ಗೆ ಸಲ್ಲಿಕೆ ಮಾಡಿದ್ದಾರೆ.

ಕೋರಮಂಗಲ ಪಿಜಿ ಹತ್ಯೆ ಕೇಸ್​: ಕೋರ್ಟ್​​ಗೆ 1205 ಪುಟಗಳ ಚಾರ್ಜ್​​ಶೀಟ್ ಸಲ್ಲಿಸಿದ ಪೊಲೀಸರು
ಕೋರಮಂಗಲ ಪಿಜಿ ಹತ್ಯೆ ಕೇಸ್​: ಕೋರ್ಟ್​​ಗೆ 1205 ಪುಟಗಳ ಚಾರ್ಜ್​​ಶೀಟ್ ಸಲ್ಲಿಸಿದ ಪೊಲೀಸರು
Follow us
|

Updated on: Aug 31, 2024 | 4:39 PM

ಬೆಂಗಳೂರು, ಆಗಸ್ಟ್​ 31: ಕೋರಮಂಗಲ (Koramangala) ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್​​ಗೆ 1205 ಪುಟಗಳ ಚಾರ್ಜ್​​ಶೀಟ್​ ಅನ್ನು ಪೊಲೀಸರು ಸಲ್ಲಿಸಿದ್ದಾರೆ. 85 ಸಾಕ್ಷಿಗಳನ್ನು ಒಳಗೊಂಡ ಚಾರ್ಜ್​​ಶೀಟ್​ ಅನ್ನು ಪೊಲೀಸರು ಸಲ್ಲಿಸಿದ್ದಾರೆ. ಜುಲೈ 24ರಂದು ಕೋರಮಂಗಲದ ಪಿಜಿಗೆ ನುಗ್ಗಿ ಕೃತಿಕುಮಾರಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಮಧ್ಯಪ್ರದೇಶದ ಬೇಗಂಗಂಜ್ ಮೂಲದ ಅಭಿಷೇಕ್ ಘೋಷಿ ಎಂಬಾತ ಹತ್ಯೆ ಮಾಡಿದ್ದ.

ಜುಲೈ 23ರ ರಾತ್ರಿ ಕೋರಮಂಗಲದಲ್ಲಿ ಲೇಡಿಸ್ ಪಿಜಿಯಲ್ಲಿ ನೆತ್ತರು ಹರಿದಿತ್ತು. ಪಿಜಿಗೆ ನುಗ್ಗಿದ್ದ ಅಭಿಷೇಕ್ ಘೋಷಿ ಕೃತಿ ಕುಮಾರಿ ಎಂಬ ಯುವತಿಯ ಕತ್ತು ಸೀಳಿ ಎಸ್ಕೇಪ್ ಆಗಿದ್ದ. ಬಳಿಕ ಕೋರಮಂಗಲ ಪೊಲೀಸರು ಆತನನ್ನು ಬಂಧಿಸಿದ್ದರು.

ಇದನ್ನೂ ಓದಿ: ಕೋರಮಂಗಲದ ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧ್ಯ ಪ್ರದೇಶದಲ್ಲಿ ಅರೆಸ್ಟ್

ಅಭಿಷೇಕ್, ಎಂಬಿಎ ಪದವೀಧರ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಕೃತಿ ಸ್ನೇಹಿತೆಯನ್ನ ಲವ್ ಮಾಡುತ್ತಿದ್ದ. ಆದರೆ ಆಕೆಯನ್ನ ರೂಮ್​ನಲ್ಲಿ ಕೂಡಿಟ್ಟು ಟಾರ್ಚರ್ ಕೊಡುತ್ತಿದ್ದ. ಈ ವಿಷಯ ಗೊತ್ತಾಗಿ ಕೃತಿ ತನ್ನ ಗೆಳತಿಯನ್ನ ರಕ್ಷಿಸಿದ್ದಳು. ಇದೇ ಸಿಟ್ಟಲ್ಲಿ ಪಿಜಿಗೆ ಬಂದು ಯುವತಿಯನ್ನ ಕೊಂದಿದ್ದ. ಬಳಿಕ ಸೀದಾ ಆಟೋ ಏರಿ, ಮೆಜೆಸ್ಟಿಕ್ ತಲುಪಿದ್ದ. ಅಲ್ಲಿಂದ ಮಧ್ಯಪ್ರದೇಶ ರೈಲು ಹತ್ತಿ ಎಸ್ಕೇಪ್ ಆಗಿದ್ದ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಪೊಲೀಸರು ಭೋಪಾಲ್​ನಲ್ಲಿ ಅಭಿಷೇಕ್​ನ ಬಂಧಿಸಿ, ಎತ್ತಾಕ್ಕೊಂಡು ಬಂದಿದ್ದರು.

ಯುವತಿ ಪ್ರತಿರೋಧ ಮಾಡಿದರೂ ಲೆಕ್ಕಿಸದೇ ಒಂದಲ್ಲಾ ಎರಡಲ್ಲಾ ಐದಾರು ಬಾರಿ ಚಾಕುವಿನಿಂದ ಕತ್ತು ಕುಯ್ದಿದ್ದ. ಬಳಿಕ ಕ್ಷಣಾರ್ಧದಲ್ಲಿ ಸ್ಥಳದಿಂದ ಎಸ್ಕೇಪ್ ಆಗಿದ್ದ. ಈ ಭೀಕರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇಡೀ ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸಿತ್ತು.

ಇದನ್ನೂ ಓದಿ: ಕೊರಮಂಗಲ ಪಿಜಿಯಲ್ಲಿ ಯುವತಿ ಕೊಲೆ ಬಳಿಕ ಎಚ್ಚೆತ್ತ ಪೊಲೀಸರು, ಬೆಂಗಳೂರು ಪಿಜಿಗಳಿಗೆ ಕಠಿಣ ಮಾರ್ಗಸೂಚಿ

ಇನ್ನು ಚಾಕು ಇರಿತಕ್ಕೊಳಗಾದ ಯುವತಿ ರಕ್ತದ ಮಡುವಿನಲ್ಲಿ ಒದ್ದಾಡಿದ್ದರೂ, ನೆರವಿಗೆ ಅಂಗಲಾಚಿದರೂ ಅದನ್ನು ನೋಡಿದ ಪಿಜಿಯ ಯುವತಿಯರು ತಕ್ಷಣ ಸಹಾಯಕ್ಕೆ ದಾವಿಸದೆ ಅಮಾನವೀಯತೆ ಮೆರೆದಿದ್ದರು. ಈ ಪ್ರಕಣದಿಂದ ಎಚ್ಚೆತ್ತ ಪೊಲೀಸರು, ಬೆಂಗಳೂರು ಪಿಜಿಗಳಿಗೆ ಕಠಿಣ ಮಾರ್ಗಸೂಚಿ ಹೊರಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.