AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Byelection Exit Poll: ಬಿಜೆಪಿಗೆ ಬಸವಕಲ್ಯಾಣ ಒಲಿಯುವ ಸಾಧ್ಯತೆ

Basavakalyana Byelection Exit Poll ಏಪ್ರಿಲ್​ 17 ರಂದು ನಡೆದಿದ್ದ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ರವಿವಾರ ನಡೆಯಲಿದೆ. ಟಿವಿ9 ನಡೆಸಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಎದ್ದು ಕಾಣುತ್ತಿದೆ.

TV9 Byelection Exit Poll: ಬಿಜೆಪಿಗೆ ಬಸವಕಲ್ಯಾಣ ಒಲಿಯುವ ಸಾಧ್ಯತೆ
ಬಿಜೆಪಿ ಅಭ್ಯರ್ಥಿ ಶರಣು ಸಲಗರ
ಸಾಧು ಶ್ರೀನಾಥ್​
| Updated By: Digi Tech Desk|

Updated on:Apr 29, 2021 | 7:18 PM

Share

ಬೀದರ್: ಬಸವಕಲ್ಯಾಣ ಕ್ಷೇತ್ರದಲ್ಲಿ ಕೊರೊನಾ 2ನೇ ಅಲೆ, ಸಾರಿಗೆ ನಿಗಮಗಳ ಮುಷ್ಕರ ಜೊತೆಗೆ ಬಿರುಬಿಸಿಲು, ಇವುಗಳ ನಡುವೆಯೂ ರಾಜ್ಯದ ಜನರ ಗಮನ ಸೆಳೆದಿದ್ದ ಮತ್ತೊಂದು ಮಹತ್ವದ ಅಸೆಂಬ್ಲಿ ಉಪಚುನಾವಣೆ ಅಂದ್ರೆ ಅದು ಬಸವಕಲ್ಯಾಣ ಕ್ಷೇತ್ರದ್ದು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಏಪ್ರಿಲ್ 17ಂದು ಶನಿವಾರ ಮತದಾನ ನಡೆದಿತ್ತು. ಉಮೇದುವಾರರ ಭವಿಷ್ಯ ಇದೀಗ ಮತಯಂತ್ರಗಳಲ್ಲಿ ದಾಖಲಾಗಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ. ಈ ಮಧ್ಯೆ ವಾಡಿಕೆಯಂದು ಮತಗಟ್ಟೆ ಕೇಂದ್ರಗಳಲ್ಲಿ ಟಿವಿ9 ನಡೆಸಿದ್ದ ಎಕ್ಸಿಟ್ ಪೋಲ್​ ನಡೆದಿದ್ದು, ಅದರ ಫಲಿತಾಂಶ ಇದೀಗ ಹೊರಬಿದ್ದಿದೆ. ಆ ಪ್ರಕಾರ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕಂಡು ಬರುತ್ತಿದೆ.

ಬಸವಕಲ್ಯಾಣ ಮತದಾನದ ವಿವರ ಹೀಗಿತ್ತು: ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದಲ್ಲಿ ಶೇ 59.57ರಷ್ಟು ಮತದಾನವಾಗಿದೆ. 2018ರ ಬಸವಕಲ್ಯಾಣ ಅಸೆಂಬ್ಲಿ ಚುನಾವಣೆಯಲ್ಲಿ ಶೇ. 65 ರಷ್ಟು ಮತದಾನವಾಗಿತ್ತು. ಬಿಜೆಪಿಯಿಂದ ಶರಣು ಸಲಗರ, ಜೆಡಿಎಸ್‌ನ ಸಯ್ಯದ್ ಯಸ್ರಬ್ ಅಲಿ ಖಾದ್ರಿ ಮತ್ತು ಕಾಂಗ್ರೆಸ್​ನಿಂದ ಮಾಲಾ ನಾರಾಯಣರಾವ್ ಸ್ಪರ್ಧಿಸಿದ್ದಾರೆ. ಶಾಸಕ ನಾರಾಯಣರಾವ್ ನಿಧನರಾದ ಕಾರಣ ಬಸವಕಲ್ಯಾಣ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಟಿವಿ9 ನಡೆಸಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಯಾವ ಪ್ರಶ್ನೆ ಕೇಳಲಾಗಿತ್ತು ಅದಕ್ಕೆ ಜನ ಏನೆಲ್ಲ ಉತ್ತರ ನೀಡಿದ್ದರು ಎಂಬುದರ ವಿವರ ಇಲ್ಲಿದೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ – ಎಕ್ಸಿಟ್ ಪೋಲ್ ಫಲಿತಾಂಶ

Q6 ಈ ಉಪ ಚುನಾವಣೆಯಲ್ಲಿ ಮತ ಹಾಕುವಾಗ ನೀವು ಪರಿಗಣಿಸಿದ ನಿರ್ಣಾಯಕ ಅಂಶ ಯಾವುದು ?
ಉತ್ತರ 1 ಮುಂದುವರಿಕೆ 45% 2 ಬದಲಾವಣೆ 49% 3 ಹೇಳೋಕಾಗಲ್ಲ 6%
Q7 ಮರಾಠ ಮತ್ತು ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ರಚಿಸಿದ್ದು ನಿಮ್ಮ ಮೇಲೆ ಪ್ರಭಾವ ಬೀರಿದೆಯೇ?
ಉತ್ತರ 1 ಹೌದು 33% 2 ಇಲ್ಲ 60% 3 ಹೇಳೋಕಾಗಲ್ಲ 7%
Q8 ನಿಮಗೆ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದ ಕಾರ್ಯವೈಖರಿ ಇಷ್ಟವಾಗಿದೆಯೇ?
ಉತ್ತರ 1 ಹೌದು 49% 2 ಇಲ್ಲ 45% 3 ಹೇಳೋಕಾಗಲ್ಲ 6%
Q9 ನೀವು ಯಾವ ನಾಯಕನಿಂದ ಪ್ರಭಾವಿತರಾಗಿ ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದೀರಾ?
ಉತ್ತರ 1 ಬಿಎಸ್‌ವೈ 47% 2 ಸಿದ್ದರಾಮಯ್ಯ 39% 3 ಹೆಚ್‌ಡಿಕೆ 8% 4 ಹೇಳೋಕಾಗಲ್ಲ 6%
Q10 ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಈಗ ನೀವು ಯಾರಿಗೆ ಮತ ಹಾಕಿದ್ದೀರಿ?
ಉತ್ತರ 1 ಬಿಜೆಪಿ 46% 2 ಕಾಂಗ್ರೆಸ್ 38% 3 ಜೆಡಿಎಸ್ 7% 4 ಇತರೆ 9%

ಇದನ್ನೂ ಓದಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಆಯೋಗ ಮುಟ್ಟುಗೋಲು ಹಾಕಿಕೊಂಡ ಮೊತ್ತ ₹ 1000 ಕೋಟಿ

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?

(TV9 Exit poll suggests that BJP candidate has better chance to win Basavakalyan assembly bypoll)

Published On - 7:12 pm, Thu, 29 April 21

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ