ಅಧಿಕಾರಿಗಳ ಎಡವಟ್ಟು: ಆಂತರಿಕ ವರದಿಯಲ್ಲಿ ತಾಯಿಗೆ ಸೋಂಕು, ಹೆಲ್ತ್ ಬುಲೆಟಿನ್‌ನಲ್ಲಿ ಮಗುವಿಗೆ!
ಬೆಂಗಳೂರು: ಬೆಂಗಳೂರಿನ P-1793, 4 ತಿಂಗಳ ಮಗುವಿಗೆ ಕೊರೊನಾ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ. ಬಿಬಿಎಂಪಿ ಸಿಬ್ಬಂದಿ ಎಡವಟ್ಟಿನಿಂದ ತಾಯಿ, ಮಗುವಿಗೆ ಸಂಕಷ್ಟ ಎದುರಾಗಿದೆ. ಮಗುವಿನ ಗಂಟಲು ದ್ರವ ಸಂಗ್ರಹಿಸಿ ಟೆಸ್ಟ್‌ಗೆ ರವಾನೆ ಮಾಡಲಾಗಿತ್ತು. ಟೆಸ್ಟ್‌ನ ಆಂತರಿಕ ವರದಿಯಲ್ಲಿ ತಾಯಿಗೆ ಸೋಂಕು ಇದೆ ಎಂದು ಉಲ್ಲೇಖಿಸಿದ್ದಾರೆ. ಹೆಲ್ತ್ ಬುಲೆಟಿನ್‌ನಲ್ಲಿ ಮಗುವಿಗೆ ಸೋಂಕು ಎಂದು ತಿಳಿಸಿದ್ರು. ಹೀಗಾಗಿ ಸಿಬ್ಬಂದಿ ಎಡವಟ್ಟಿನಿಂದ ಬಿಬಿಎಂಪಿ ಅಧಿಕಾರಿಗಳಿಗೆ ಗೊಂದಲ ಉಂಟಾಗಿದೆ. ಈಗ ಯಾರನ್ನು ಕ್ವಾರಂಟೈನ್ ಮಾಡಬೇಕೆಂಬ ಗೊಂದಲ ಶುರುವಾಗಿದೆ. ಹೀಗಾಗಿ ಮತ್ತೊಮ್ಮೆ […]
ಬೆಂಗಳೂರು: ಬೆಂಗಳೂರಿನ P-1793, 4 ತಿಂಗಳ ಮಗುವಿಗೆ ಕೊರೊನಾ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ. ಬಿಬಿಎಂಪಿ ಸಿಬ್ಬಂದಿ ಎಡವಟ್ಟಿನಿಂದ ತಾಯಿ, ಮಗುವಿಗೆ ಸಂಕಷ್ಟ ಎದುರಾಗಿದೆ. ಮಗುವಿನ ಗಂಟಲು ದ್ರವ ಸಂಗ್ರಹಿಸಿ ಟೆಸ್ಟ್‌ಗೆ ರವಾನೆ ಮಾಡಲಾಗಿತ್ತು.
ಟೆಸ್ಟ್‌ನ ಆಂತರಿಕ ವರದಿಯಲ್ಲಿ ತಾಯಿಗೆ ಸೋಂಕು ಇದೆ ಎಂದು ಉಲ್ಲೇಖಿಸಿದ್ದಾರೆ. ಹೆಲ್ತ್ ಬುಲೆಟಿನ್‌ನಲ್ಲಿ ಮಗುವಿಗೆ ಸೋಂಕು ಎಂದು ತಿಳಿಸಿದ್ರು. ಹೀಗಾಗಿ ಸಿಬ್ಬಂದಿ ಎಡವಟ್ಟಿನಿಂದ ಬಿಬಿಎಂಪಿ ಅಧಿಕಾರಿಗಳಿಗೆ ಗೊಂದಲ ಉಂಟಾಗಿದೆ. ಈಗ ಯಾರನ್ನು ಕ್ವಾರಂಟೈನ್ ಮಾಡಬೇಕೆಂಬ ಗೊಂದಲ ಶುರುವಾಗಿದೆ. ಹೀಗಾಗಿ ಮತ್ತೊಮ್ಮೆ ತಾಯಿ, ಮಗುವಿಗೆ ಕೊರೊನಾ ಟೆಸ್ಟ್ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದು, ಟೆಸ್ಟ್ ವರದಿ ಬರುವವರೆಗೆ ತಾಯಿ, ಮಗು ಇಬ್ಬರಿಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.