ಬೆಂಗಳೂರಲ್ಲಿ ಮತ್ತೊಮ್ಮೆ ಜೆಸಿಬಿ ಸದ್ದು: ಅಕ್ರಮ 200 ಮನೆಗಳು ತೆರವು ಮಾಡಿದ ಬಿಡಿಎ

ಬೆಂಗಳೂರಿನಲ್ಲಿ ಬಿಡಿಎ ಅಕ್ರಮ ಮನೆಗಳನ್ನು ನೆಲಸಮ ಮಾಡಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗೊರೆಗುಂಟೆಪಾಳ್ಯದಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ಧ್ವಂಸ ಮಾಡಲಾಗಿದೆ. ವಯಸ್ಸಾದವರು, ಬಾಣಂತಿಯರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ವಾಸಿಸುತ್ತಿದ್ದ ಮನೆಗಳು ನೆಲಸಮವಾಗಿರುವುದು ದುರಂತ. ಜನರು ಪರಿಹಾರಕ್ಕಾಗಿ ಮನವಿ ಮಾಡುತ್ತಿದ್ದಾರೆ.

ಬೆಂಗಳೂರಲ್ಲಿ ಮತ್ತೊಮ್ಮೆ ಜೆಸಿಬಿ ಸದ್ದು: ಅಕ್ರಮ 200 ಮನೆಗಳು ತೆರವು ಮಾಡಿದ ಬಿಡಿಎ
ಬೆಂಗಳೂರಲ್ಲಿ ಮತ್ತೊಮ್ಮೆ ಜೆಸಿಬಿ ಸದ್ದು: ಅಕ್ರಮ 200 ಮನೆಗಳು ತೆರವು ಮಾಡಿದ ಬಿಡಿಎ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Nov 07, 2024 | 3:10 PM

ಬೆಂಗಳೂರು, ನವೆಂಬರ್​​​ 07: ನಗರದಲ್ಲಿ ಇಂದು ಬೆಳಿಗ್ಗೆ ಬಿಡಿಎ (BDA) ಜೆಸಿಬಿ ಮತ್ತೆ ಘರ್ಜನೆ ಮಾಡಿದೆ. ಗೊರೆಗುಂಟೆಪಾಳ್ಯ ಬಳಿಯ ಆಶ್ರಯ ನಗರ ಬಡಾವಣೆಯಲ್ಲಿ ಅಕ್ರಮ 200 ಮನೆಗಳನ್ನು ಬಿಡಿಎ ನೆಲಸಮ ಮಾಡಿದೆ. ಆ ಮೂಲಕ ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ವಾಸ ಮಾಡುತ್ತಿದ್ದ ಮನೆಗಳು ಧರೆಗುರುಳಿವೆ.

ಜಾಗ ಖಾಲಿ ಮಾಡಿ ಅಂತಾ ಬಿಡಿಎ ಸೂಚನೆ ನೀಡಲಾಗಿತ್ತು. ಆದರೆ ಜಾಗ ಖಾಲಿ ಮಾಡದ ಹಿನ್ನೆಲೆ ತೆರವು ಕಾರ್ಯಾಚರಣೆ ಮಾಡಲಾಗಿದೆ. ಮನೆಗಳನ್ನು ಬಿಡಿಎ ನೆಲಸಮ ಮಾಡಿದಕ್ಕೆ ಸಾರ್ಮಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 279 ಅನಧಿಕೃತ ಲೇಔಟ್​​ಗಳು ಪತ್ತೆ: ಈ ಸ್ಥಳಗಳಲ್ಲಿ ಜಾಗ ಖರೀದಿಸದಂತೆ ಬಿಡಿಎ ಎಚ್ಚರಿಕೆ

ಪ್ರತಿ ಮನೆಯಲ್ಲಿ ವಯಸ್ಸಾದವರು, ಬಾಣಂತಿಗರು ಸೇರಿದಂತೆ ಅನಾರೋಗ್ಯ ಪೀಡಿತರಿದ್ದಾರೆ. ಈ ರೀತಿ ಮನೆ ನೆಲಸಮ ಮಾಡಿದರೆ ಅವರು ಎಲ್ಲಿಗೆ ಹೋಗಬೇಕು. ಇದಕ್ಕೆಲ್ಲಾ ಅಧಿಕಾರಿಗಳೇ ಉತ್ತರ ನೀಡಬೇಕು. ಜನರು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಕೊಡಬೇಕು ಎಂದು ಮಹಿಳೆಯೊಬ್ಬರು ಟಿವಿ9 ಎದುರು ಅಳಲು ತೊಡಿಕೊಂಡಿದ್ದಾರೆ.

ಇನ್ನು ಇತ್ತೀಚೆಗೆ ಬೆಳ್ಳಂಬೆಳಿಗ್ಗೆ ಬಿಡಿಎ ಜೆಸಿಬಿಗಳು ನಾಗರಬಾವಿ ಸಮೀಪದ ಚಂದ್ರ ಲೇಔಟ್​ನಲ್ಲಿ ಕೂಡ ಜೆಸಿಬಿ ಘರ್ಜಿಸಿತ್ತು. ಅದರ ಎಫೆಕ್ಟ್​ಗೆ ಅಂಗಡಿಗಳೆಲ್ಲ ನೆಲಸಮವಾಗಿದ್ದವು. ಬಿಡಿಎ ಜಾಗದಲ್ಲಿದ್ದ 40ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳನ್ನ ಬಿಡಿಎ ಕ್ಷಣಮಾತ್ರದಲ್ಲಿ ನೆಲಸಮ ಮಾಡಿದ್ದು, ಬಿಡಿಎ ಇತಿಹಾಸದಲ್ಲೇ ಅತಿದೊಡ್ಡ ಡೆಮಾಲಿಷನ್ ಮಾಡಿ ಕಟ್ಟಡಗಳನ್ನ ಧರೆಗುರುಳಿಸಿತ್ತು.

ಇದನ್ನೂ ಓದಿ: ಯಡಿಯೂರಪ್ಪ ಮಂಜೂರು ಮಾಡಿದ್ದ ಜಾಗ 8 ವರ್ಷಗಳ ಬಳಿಕ ಪತ್ತೆ: ರುದ್ರಭೂಮಿಗೆ ಈಗ ಗುದ್ದಲಿ ಪೂಜೆ

9 ಎಕರೆ 13 ಗುಂಟೆಯ ಬಿಡಿಎ ಜಾಗ. ತನ್ನದೇ ಜಾಗವನ್ನ ಖಾಸಗಿ ವ್ಯಕ್ತಿ ಕಬ್ಜ ಮಾಡಿದ್ದು ಕೋರ್ಟ್ ಅಂಗಳದಲ್ಲಿ ಹಲವು ವರ್ಷಗಳಿಂದ ಜಾಗ ವಿವಾದದಲ್ಲಿತ್ತು. ವಿವಾದದ ಭೂಮಿ ಬಿಡಿಎಗೆ ಸೇರಿದೆ ಅಂತಾ ಆದೇಶ ಬಂದಿದ್ದೆ ತಡ ಪೊಲೀಸರ ಜೊತೆ ಎಂಟ್ರಿಕೊಟ್ಟ ಬಿಡಿಎ ಅಧಿಕಾರಿಗಳು ಸರ್ವೇ ನಂಬರ್ 78ರಲ್ಲಿದ್ದ 9 ಎಕರೆ ಜಾಗದ 500 ಕೋಟಿ ರೂ. ಮೌಲ್ಯದ ಜಾಗವನ್ನ ತೆಕ್ಕೆಗೆ ಪಡೆದುಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:09 pm, Thu, 7 November 24

ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ
ವ್ಲಾಗ್ ಮಾಡುವಾಗ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ, ಕಣ್ಣೀರಿಟ್ಟ ಯುವತಿ
ವ್ಲಾಗ್ ಮಾಡುವಾಗ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ, ಕಣ್ಣೀರಿಟ್ಟ ಯುವತಿ
ರಾಜ್ಯ ವಕ್ಫ್ ಬೋರ್ಡ್​ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು: ಜಮೀರ್
ರಾಜ್ಯ ವಕ್ಫ್ ಬೋರ್ಡ್​ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು: ಜಮೀರ್
ಚಿಕ್ಕಮಗಳೂರು: ಈ ಗ್ರಾಮಗಳಲ್ಲಿ ಹಿಂಡುಹಿಂಡಾಗಿ ಓಡಾಡುತ್ತಿವೆ ಆನೆಗಳು, ಎಚ್ಚರ
ಚಿಕ್ಕಮಗಳೂರು: ಈ ಗ್ರಾಮಗಳಲ್ಲಿ ಹಿಂಡುಹಿಂಡಾಗಿ ಓಡಾಡುತ್ತಿವೆ ಆನೆಗಳು, ಎಚ್ಚರ
ಮೋಕ್ಷಿತಾ ಪ್ರಶ್ನೆಗೆ ನಡುಗಿ ಕಣ್ಣೀರು ಹಾಕಿದ ಧನರಾಜ್
ಮೋಕ್ಷಿತಾ ಪ್ರಶ್ನೆಗೆ ನಡುಗಿ ಕಣ್ಣೀರು ಹಾಕಿದ ಧನರಾಜ್
ಕನಸಿನಲ್ಲಿ ದೇವರು, ದೇವಾಲಯಗಳು ಬಂದ್ರೆ ಏನರ್ಥ? ಇಲ್ಲಿದೆ ವಿವರ
ಕನಸಿನಲ್ಲಿ ದೇವರು, ದೇವಾಲಯಗಳು ಬಂದ್ರೆ ಏನರ್ಥ? ಇಲ್ಲಿದೆ ವಿವರ
ಈ ಒಂದು ರಾಶಿಯವರಿಗಿಂದು ಆರೋಗ್ಯ ಭಾಗ್ಯ, 12 ರಾಶಿಗಳ ದಿನಭವಿಷ್ಯ ಇಲ್ಲಿದೆ
ಈ ಒಂದು ರಾಶಿಯವರಿಗಿಂದು ಆರೋಗ್ಯ ಭಾಗ್ಯ, 12 ರಾಶಿಗಳ ದಿನಭವಿಷ್ಯ ಇಲ್ಲಿದೆ