ಬೆಳಗಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
2019-20ರಲ್ಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಿಂದ ಸಾಕಷ್ಟು ಬೆಳೆ, ಮನೆ ಹಾನಿಯಾಗಿವೆ. ಆ ವೇಳೆ ಯಡಿಯೂರಪ್ಪ ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ಘೋಷಣೆ ಮಾಡಿದ್ದರು.
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇಂದು (ಸೆ.26) ಬೆಳಗಾವಿಗೆ ಭೇಟಿ ನೀಡಿದ್ದಾರೆ. ಜಿಲ್ಲೆಗೆ ಆಗಮಿಸಿದ ಅವರು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಷ್ಟೇ ಆರ್ಥಿಕ ಚಟುವಟಿಕೆಗಳು ಆರಂಭವಾಗಿದೆ. ಕೊವಿಡ್ನಿಂದ ಜನರು, ರೈತರು ಸಮಸ್ಯೆ ಅನುಭವಿಸಿದ್ದಾರೆ. ಧರಣಿನಿರತರು ಎಲ್ಲ ಚಟುವಟಿಕೆಗಳಿಗೆ ಸಹಕಾರ ಕೊಡಬೇಕು ಅಂತ ತಿಳಿಸಿದರು.
ರೈತ ಮುಖಂಡರ ಜತೆ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ರೈತ ಮುಖಂಡರಿಂದ ಮಾಹಿತಿ ಪಡೆದರು. ಸಕ್ಕರೆ ಕಾರ್ಖಾನೆಗಳಿಂದ ಬರಬೇಕಿರುವ ಕಬ್ಬಿನ ಬಾಕಿ ಬಿಲ್, ನೆರೆ ಸಂತ್ರಸ್ತರ ಪರಿಹಾರ ತುರ್ತಾಗಿ ಕೊಡುವಂತೆ ಮನವಿ ಮಾಡಿದ ರೈತ ಮುಖಂಡರು, ಸಕ್ಕರೆ ಆಯುಕ್ತಾಲಯ ಬೆಳಗಾವಿಗೆ ಸ್ಥಳಾಂತರಿಸಲು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, 2019-20ರಲ್ಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಿಂದ ಸಾಕಷ್ಟು ಬೆಳೆ, ಮನೆ ಹಾನಿಯಾಗಿವೆ. ಆ ವೇಳೆ ಯಡಿಯೂರಪ್ಪ ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ಘೋಷಣೆ ಮಾಡಿದ್ದರು. ಭಾಗಶಃ ಬಿದ್ದ ಮನೆಗಳ ಎರಡು ಭಾಗ ಮಾಡಿ ಒಂದು ಲಕ್ಷ ಮೂರು ಲಕ್ಷ ರೂ. ಮಾಡಿದ್ದರು. ಮನೆಗಳ ರಿಪೇರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದರು. ಬೆಳಗಾವಿ ಜಿಲ್ಲೆಯಲ್ಲಿ 44,205 ಮನೆಗಳಿಗೆ ಈಗಾಗಲೇ ಪರಿಹಾರ ಕಾರ್ಯ ಪ್ರಾರಂಭವಾಗಿದೆ. ಈಗಾಗಲೇ 861 ಕೋಟಿ ರೂ. ಪರಿಹಾರ ಕೊಟ್ಟಿದ್ದೇವೆ. ಬೆಳೆಹಾನಿಯಾದ 1 ಲಕ್ಷ 63 ಸಾವಿರ ರೈತರಿಗೆ 263 ಕೋಟಿ ರೂ. ಕೊಟ್ಟಿದ್ದೇವೆ. ಮುಂದಿನ ಹಣಕಾಸು ಇಲಾಖೆಯವರ ಜೊತೆ ಚರ್ಚೆ ಮಾಡಿ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಅಕ್ಟೋಬರ್ 1ರಂದು ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ನಿರ್ಧರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಾನು ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹಿಂದುಳಿದ ವರ್ಗಗಳ ಆಯೋಗ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅದರ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಸಮಸ್ಯೆಗಳನ್ನು ಎಲ್ಲರೂ ಸೇರಿ ಬಗೆಹರಿಸಬೇಕಿದೆ ಎಂದರು.
ಬಾದಾಮಿ ಹಾಲು ತಂದ ಅಭಿಮಾನಿ ಇನ್ನು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅತ್ಯಾಧುನಿಕ ರವೀಂದ್ರ ಕೌಶಿಕ್ ಇ-ಗ್ರಂಥಾಲಯವನ್ನು ಉದ್ಘಾಟಿಸಿದರು. ಶಹಾಪುರದ ಶಿವಾಜಿ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಅಭಿಮಾನಿಯೊಬ್ಬ ಬಾದಾಮಿ ಹಾಲಿನ ಬಾಟಲ್ ನೀಡಲು ಬಂದನು. ಈ ವೇಳೆ ಅಭಿಮಾನಿಯನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಆದರೆ ಆತನಿಗೆ ಬರಲು ಅವಕಾಶ ನೀಡಿ ಅಂತ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ನಂತರ ಅಭಿಮಾನಿ ಬಳಿ ಬಾದಾಮಿ ಹಾಲಿನ ಬಾಟಲ್ನ ಸ್ವೀಕರಿಸುತ್ತಾರೆ.
ಸಿಎಂಗೆ ತೋರಿಸಲು ಬೆಳೆ ತಂದ ರೈತ ಮುಖ್ಯಮಂತ್ರಿಗೆ ತೋರಿಸಲೆಂದು ರೈತ ಪ್ರಕಾಶ್ ನಾಯಕ್ ಎಂಬುವವರು ಅಕ್ಕಿ, ಚನ್ನಂಗಿ ಬೆಳೆಯನ್ನು ತಂದಿದ್ದರು. ರಸ್ತೆ ನಿರ್ಮಾಣಕ್ಕೆ ರೈತರ ಫಲವತ್ತಾದ ಜಮೀನು ಸ್ವಾಧೀನ ಹಿನ್ನೆಲೆ ರೈತರು ವಿರೋಧ ವ್ಯಕ್ತಪಡಿಸಿದರು.
ಇದನ್ನೂ ಓದಿ
ಮನ ಬಂದಂತೆ ಇಂಜೆಕ್ಷನ್ ಚುಚ್ಚುವ ನಕಲಿ ವೈದ್ಯೆ; ಮೊಬೈಲ್ನಲ್ಲಿ ಸೆರೆಯಾಯ್ತು ಅಸಲಿ ಸತ್ಯ
ಚಾಮರಾಜನಗರ: ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಸೆರೆ, ನಿಟ್ಟುಸಿರುಬಿಟ್ಟ ಜನ
(Basavaraj Bommai visited to Belagavi and Bommai participating to various programme)