ಶಿವಾಜಿಯನ್ನು ಮುಸ್ಲಿಂ ವಿರೋಧಿ ಅನ್ನಬಾರದು: ಲಾಡ್ ಹೇಳುತ್ತಿದ್ದಂತೆಯೇ ಮೊಳಗಿತು ಜೈ ಶ್ರೀರಾಮ್ ಘೋಷಣೆ
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಇಂದು ಶಿವಾಜಿ ಪ್ರತಿಮೆ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ನಾನು ಮರಾಠ ಸಮುದಾಯದವನು. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ. ಹೀಗಾಗಿ ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು ಎಂದಿದ್ದಾರೆ.

ಬೆಳಗಾವಿ, ಡಿಸೆಂಬರ್ 14: ಮರಾಠರು (Marathas) ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ. ಯಾರು ಶಿವಾಜಿ ಮಹಾರಾಜರನ್ನು ಮುಸ್ಲಿಂ ವಿರೋಧಿ ಅಂತ ಹೇಳಬಾರದು. ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು. ನಾನು ಮರಾಠ ಸಮುದಾಯದವನೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.
ಎಲ್ಲರೂ ಮರಾಠರ ಬಗ್ಗೆ ಮಾತಾಡ್ತಾರೆ, ಆದ್ರೆ ಟಿಕೆಟ್ ಕೊಡಲ್ಲ: ಸಚಿವ ಸಂತೋಷ ಲಾಡ್
ಜಿಲ್ಲೆಯ ಅಥಣಿಯಲ್ಲಿ ನಡೆದ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸಂತೋಷ ಲಾಡ್, ಎಲ್ಲರೂ ಮರಾಠರ ಬಗ್ಗೆ ಮಾತನಾಡುತ್ತಾರೆ. ಆದರೆ ಯಾರೂ ಗ್ರಾಮ ಪಂಚಾಯಿತಿಯಿಂದ ಹಿಡಿದು ಬೇರೆ ಸ್ಥಾನಕ್ಕೆ ಟಿಕೆಟ್ ಕೊಡಿವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಘರ್ ವಾಪ್ಸಿ ಚರ್ಚೆ: ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಹಿಂದೂ ಹುಲಿ
ಶಿವಾಜಿ ಮಹಾರಾಜರನ್ನು ಮುಸ್ಲಿಂ ವಿರೋಧಿ ಅಂತ ಯಾರು ಹೇಳಬಾರದು ಎಂದ ಸಚಿವ ಸಂತೋಷ್ ಲಾಡ್ಗೆ ಶಿವಾಜಿ ಸಹೋದರ ಸಂಭಾಜಿ ಮಹಾರಾಜರ ಮೇಲೆ ಮುಸ್ಲಿಂ ಸುಲ್ತಾನರು ನಡೆಸಿದ್ದ ದೌರ್ಜನ್ಯದ ವೇದಿಕೆ ಮೇಲೆ ಶಾಸಕ ಯತ್ನಾಳ್ ವಿವರಿಸಿದರು. ಈ ಇತಿಹಾಸ ಸುಳ್ಳು ಎಂದು ವಾದಿಸಿ ಸಚಿವ ಸಂತೋಷ್ ಲಾಡ್ ತಮ್ಮ ಭಾಷಣ ಮಾಡಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಿಷ್ಟು
ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಶಿವಾಜಿ ಮಹಾರಾಜರು ನಮ್ಮ ದೇಶದ ಆದರ್ಶ ವ್ಯಕ್ತಿ. ವಿಜಯಪುರದಲ್ಲಿ ಶಿವಾಜಿ ಪ್ರತಿಮೆ ಕೂರಿಸೋದು ಸುಲಭ ಅಲ್ಲ, ಏಕೆಂದರೆ ಅಲ್ಲಿ ಪಾಕಿಸ್ತಾನ ಮೇಡ್ ಬಹಳಷ್ಟಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್: ಅಮಿತ್ ಶಾ ಮುಂದೇನಾಯ್ತು? ಎಳೆ ಎಳೆಯಾಗಿ ಬಿಚ್ಚಿಟ್ಟ ಯತ್ನಾಳ್
ಒಂದು ಮುಂಜಾನೆ ಶಿವಾಜಿ ವಿಜಯಪುರಕ್ಕೆ ಹೊರಟಿದ್ದರು. ದೇಶದ್ರೋಹಿಗಳ ರುಂಡ ಕಡಿಯುವ ಕೆಲಸ ಈಗ ಆಗಬೇಕು. 2028ಕ್ಕೆ ನಾವೆಲ್ಲಾ ಈ ಕೆಲಸ ಮಾಡಬೇಕಿದೆ. ಮರಾಠ ಅಭಿವೃದ್ಧಿ ನಿಗಮ ವಿಚಾರವಾಗಿ ಚರ್ಚೆ ನಡೆಯಿತು. ಮರಾಠಿ ಭಾಷೆ ವಿರೋಧಿಸುತ್ತೀರಿ, ಉರ್ದು ಭಾಷೆ ಎಲ್ಲಿಯದ್ದು? ಮರಾಠಿ ಭಾಷೆ ವಿರೋಧಿಸುವವರು, ಉರ್ದು ಯಾಕೆ ವಿರೋಧಿಸಲ್ಲ. ಧಮ್, ತಾಕತ್ ಇದ್ದರೆ ಉರ್ದು ಭಾಷೆ ಬೋರ್ಡ್ ತೆಗೆಸಿರಿ. ಇಲ್ಲಿ ನಾವು ಇನ್ಮುಂದೆ ಜೀವನ ಮಾಡುವುದೇ ಕಷ್ಟ ಇದೆ. ಎಲ್ಲರೂ ಯೋಗಿ ಆದಿತ್ಯನಾಥ್ ಆಗಬೇಕು. ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು. ಬಸನಗೌಡ ಇದ್ದವ ನಾನು ಬಷೀರ್ ಅಹ್ಮದ್ ಆಗಬೇಕಾಗುತ್ತಿತ್ತು ಎಂದು ಹೇಳಿದ್ದಾರೆ.
ದ್ವೇಷ ಭಾಷಣ ವಿಧೇಯಕ ತರುವವರೇ ಮೊದಲು ಜೈಲಿಗೆ ಹೋಗುತ್ತಾರೆ: ಯತ್ನಾಳ್ ಕಿಡಿ
ದ್ವೇಷ ಭಾಷಣ ವಿಧೇಯಕ ವಿಚಾರವಾಗಿ ಮಾತನಾಡಿದ ಯತ್ನಾಳ್, ದ್ವೇಷ ಭಾಷಣ ವಿಧೇಯಕ ತರುತ್ತಾರಂತೆ. ದ್ವೇಷ ಭಾಷಣ ಮಾಡಿದವರನ್ನು 7 ವರ್ಷ ಒಳಗೆ ಹಾಕುತ್ತಾರಂತೆ. ಯಾರು ತರುವವರಿದ್ದಾರೆ ಅವರೇ ಮೊದಲು ಒಳಗೆ ಹೋಗುತ್ತಾರೆ. ನಾನು ಹೋಗುತ್ತೇನೆ ಆದರೆ ಹೊರಗೆ ಬರುವುದು ಹೇಗೆ ನನಗೆ ಗೊತ್ತಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




