Belagavi News: ವಿದ್ಯುತ್ ಮೀಟರ್‌ನಲ್ಲಿ ಫ್ರೀ ಕರೆಂಟ್, ನೋ ರೀಡಿಂಗ್ ಸಂದೇಶ ಹಾಕಿದ ಬೆಳಗಾವಿ ನಿವಾಸಿ!

ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಚೌಗುಲೆ ಎಂಬವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಮನೆಯಲ್ಲಿನ ವಿದ್ಯುತ್ ಮೀಟರ್‌ಗೆ ‘ಫ್ರೀ ಕರೆಂಟ್, ನೋ ರೀಡಿಂಗ್’ ‌ಎಂದು ಬರೆದು ಅಂಟಿಸಿದ್ದಾರೆ.

Belagavi News: ವಿದ್ಯುತ್ ಮೀಟರ್‌ನಲ್ಲಿ ಫ್ರೀ ಕರೆಂಟ್, ನೋ ರೀಡಿಂಗ್ ಸಂದೇಶ ಹಾಕಿದ ಬೆಳಗಾವಿ ನಿವಾಸಿ!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: May 30, 2023 | 4:03 PM

ಬೆಳಗಾವಿ: ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳ (guarantee scheme) ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ(Belagavi) ಹಲವೆಡೆ ಜನ ಆಗ್ರಹಿಸಿದ್ದಾರೆ. ಜತೆಗೆ, ಸದಾಶಿವ ನಗರದಲ್ಲಿ ಜನರು ಈ ತಿಂಗಳ ವಿದ್ಯುತ್ ಶುಲ್ಕ ಪಾವತಿ ಮಾಡದೇ ಇರಲು ನಿರ್ಧರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಚೌಗುಲೆ ಎಂಬವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಮನೆಯಲ್ಲಿನ ವಿದ್ಯುತ್ ಮೀಟರ್‌ಗೆ ‘ಫ್ರೀ ಕರೆಂಟ್, ನೋ ರೀಡಿಂಗ್’ ‌ಎಂದು ಬರೆದು ಅಂಟಿಸಿದ್ದಾರೆ.

ಅಧಿಕಾರಕ್ಕೆ ಬಂದರೆ 200 ಯುನಿಟ್ ಫ್ರೀ ವಿದ್ಯುತ್ ನೀಡುವುದಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಭರವಸೆ ನೀಡಿತ್ತು. ಕಾಂಗ್ರೆಸ್ ‌ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಹೆಸ್ಕಾಂ ಸಿಬ್ಬಂದಿ ರೀಡಿಂಗ್ ಪಡೆಯಬಾರದು, ನಾನು ವಿದ್ಯುತ್ ಪಾವತಿಸಲ್ಲ ಎಂದು ಪ್ರಸಾದ್ ಚೌಗುಲೆ ಹೇಳಿದ್ದಾರೆ.

ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ರಾಜ್ಯದ ಹಲವು ಕಡೆಗಳಲ್ಲಿ ಜನರು ಈಗಾಗಲೇ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ, ಬೆಳಗಾವಿಯ ಜನರು ಒಗ್ಗಟ್ಟಿನಿಂದ ಶುಲ್ಕ ಪಾವತಿಸದೇ ಇರಲು ಮುಂದಾಗಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ

ಈ ಮಧ್ಯೆ, ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ. ನಾಲ್ಕು ನಿಗಮಗಳ ವ್ಯವಸ್ಥಾಪಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಘೋಷಣೆ ಮಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್​ದಾರರು ಎಂದು ಹೇಳಿಲ್ಲ. ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ