AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕುಟುಂಬಕ್ಕೆ ಏನೇ ಆದ್ರೂ ಲಕ್ಷ್ಮೀ ಹೆಬ್ಬಾಳ್ಕರ್​, ಹಟ್ಟಿಹೊಳಿ ಕಾರಣ: ಬಿಜೆಪಿ ಮುಖಂಡ ಪೃಥ್ವಿ ಸಿಂಗ್

ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಅವರ ಅತ್ಯಾಪ್ತ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಬಿಜೆಪಿ ಮುಖಂಡ ಪೃಥ್ವಿ ಸಿಂಗ್​ ಟಿವಿ9 ಜೊತೆ ಮಾತನಾಡಿ, ಈಗಲೂ ನನಗೆ ಹಾಗೂ ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ. ಕುಟುಂಬಕ್ಕೆ ಏನೇ ಆದರೂ ಲಕ್ಷ್ಮೀ ಹೆಬ್ಬಾಳ್ಕರ್​ ಮತ್ತು ಹಟ್ಟಿಹೊಳಿ ಕಾರಣ ಎಂದು ಹೇಳಿದ್ದಾರೆ.

ನನ್ನ ಕುಟುಂಬಕ್ಕೆ ಏನೇ ಆದ್ರೂ ಲಕ್ಷ್ಮೀ ಹೆಬ್ಬಾಳ್ಕರ್​, ಹಟ್ಟಿಹೊಳಿ ಕಾರಣ: ಬಿಜೆಪಿ ಮುಖಂಡ ಪೃಥ್ವಿ ಸಿಂಗ್
ಲಕ್ಷ್ಮೀ ಹೆಬ್ಬಾಳ್ಕರ್, ಪೃಥ್ವಿ ಸಿಂಗ್, ಹಟ್ಟಿಹೊಳಿ
Sahadev Mane
| Edited By: |

Updated on: Dec 06, 2023 | 12:12 PM

Share

ಬೆಳಗಾವಿ, ಡಿಸೆಂಬರ್​​​​​ 06: ಈಗಲೂ ನನಗೆ ಹಾಗೂ ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ.  ಕುಟುಂಬಕ್ಕೆ ಏನೇ ಆದರೂ ಲಕ್ಷ್ಮೀ ಹೆಬ್ಬಾಳ್ಕರ್​ ಮತ್ತು ಹಟ್ಟಿಹೊಳಿ ಕಾರಣ ಎಂದು ಬಿಜೆಪಿ ಮುಖಂಡ ಪೃಥ್ವಿ ಸಿಂಗ್​ (Prithvi Singh) ಹೇಳಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು,  ಈ ಹಿಂದೆ ಚುನಾವಣೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಧಮ್ಕಿ ಹಾಕಿದ್ದ. ಚಾಕು ಇರಿತವಾದ ದಿನ ಚನ್ನರಾಜ್​ ಬಂದಿದ್ದಾರೆ ಅಂತಾ ಕರೆದಿದ್ದರು. ನಾನು ಮಾತನಾಡಲು ಹೋದಾಗ ಸುಜಯ್​, ಸದ್ದಾಂ ಹಲ್ಲೆ ಮಾಡಿದರು. ನಾನೇ ಕೈ ಕೊಯ್ದುಕೊಂಡಿದ್ದೇನೆ ಅಂತಾ ಘಟನೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

2018ರಲ್ಲಿ ನನ್ನ ಮನೆಯನ್ನ ಚನ್ನರಾಜ್​ ಹಟ್ಟಿಹೊಳಿ ಲೀಸ್​ ಪಡೆದಿದ್ದರು. ಲಕ್ಕಿ ಮನೆ ಅಂತಾ ಬಿಟ್ಟುಕೊಟ್ಟಿರಲಿಲ್ಲ, ಆ ಬಳಿಕ ನನಗೆ ನಿಂದಿಸಿದರು. ನಾನು ರಮೇಶ್​ ಜಾರಕಿಹೊಳಿ ಜೊತೆ ಇರೋದಕ್ಕೆ ಸೇಡು ತೀರಿಸಿಕೊಳ್ಳುತ್ತಾರೆ ಎಂದಿದ್ದಾರೆ.

ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ: ಪೃಥ್ವಿ ಸಿಂಗ್

ನನ್ನ ಮೇಲೆ ಯಾವ ಕಾರಣಕ್ಕೆ ಹಲ್ಲೆ ಮಾಡಿದರೂ ಗೊತ್ತಾಗುತ್ತಿಲ್ಲ. ಅಂದು ಸಂಜೆ ಚನ್ನರಾಜ ಹಟ್ಟಿಹೊಳಿ ಅವರ ಪಿಎ, ಆಪ್ತ, ಗನ್ ಮ್ಯಾನ್ ಮನೆ ಬಳಿ ಬಂದರು. ಸುಜಯ್ ಜಾಧವ್, ಸದ್ದಾಂ ಮನೆಗೆ ಬಂದು ಅಣ್ಣ ಕರೆಯುತ್ತಿದ್ದಾರೆ ಅಂತಾ ಕರೆದುಕೊಂಡು ಹೋದರು. ನಮ್ಮ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡುತ್ತಿದ್ದೀಯಾ ಎಂದು ಅವಾಚ್ಯವಾಗಿ ಚನ್ನರಾಜ ಹಟ್ಟಿಹೊಳಿ ನಿಂದಿಸುತ್ತಾ ಕಪಾಳಕ್ಕೆ ಹೊಡೆದರು.

ಇದನ್ನೂ ಓದಿ: ಬೆಳಗಾವಿ ಬಿಜೆಪಿ ಮುಖಂಡ ಪೃಥ್ವಿ ಸಿಂಗ್​ಗೆ ಚಾಕು ಇರಿತ: ಕಾಂಗ್ರೆಸ್ ಎಂಎಲ್‌ಸಿ ಸೇರಿ ಐವರ ವಿರುದ್ಧ ಎಫ್​ಐಆರ್

ನಾನು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಂತೆ ಕಸಿದುಕೊಂಡರು. ಬಳಿಕ ಚನ್ನರಾಜ ಸೂಚನೆ ಮೇರೆಗೆ ಸುಜಯ್ ಹೊಡೆದರು. ಹರಿತವಾದ ಆಯುಧದಿಂದ ಸದ್ದಾಂ ಹಲ್ಲೆ ಮಾಡಿದರು. ಪೊಲೀಸ್ ಕೇಸ್ ಕೊಡಬೇಡಾ ಅಂತಾ ನನ್ನ ಮೇಲೆ ಬಹಳಷ್ಟು ಒತ್ತಡ ಬಂತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ಕೊನೆಗೂ ದೂರು ದಾಖಲು

ಹಲ್ಲೆಯಾದ ದಿನವೇ ದೂರು ಕೊಟ್ಟರು ನೆಪ ಹೇಳಿ ವಾಪಾಸ್ ಕೊಟ್ಟರು. ನಿನ್ನೆ ಮಧ್ಯಾಹ್ನ ದೂರು ಪಡೆದು ಕೇಸ್ ದಾಖಲಿಸಿದ್ದಾರೆ. ಚನ್ನರಾಜ ಬಂದ ಸುದ್ದಿ ಕೇಳಿ ನಾನು ಡ್ರೆಸ್ ಬದಲಿಸಿಕೊಂಡು ಹೋಗಿದ್ದೆ. ಕರೆಂಟ್ ಹೋದ ಕಾರಣ ನಾನು ಮತ್ತೊಮ್ಮೆ ಹೊರ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ. 2018ರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾದ ಮೇಲೆ ನನ್ನ ಮನೆ ಲೀಸ್​ಗೆ ಪಡೆದರು ಎಂದಿದ್ದಾರೆ.

ಇದಾದ ಬಳಿಕ ನನ್ನ ಮನೆ ಕಬ್ಜಾ ಮಾಡುತ್ತಾರೆ ಅಂತಾ ಗೊತ್ತಾಗಿ ನಾನು ಬಿಜೆಪಿಗೆ ಸೇರಿ, ನನ್ನ ಗಾಡ್‌ಫಾದರ್ ರಮೇಶ್ ಜಾರಕಿಹೊಳಿ‌ ಜತೆ ಸೇರಿಕೊಂಡು‌ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡಲು ಶುರು ಮಾಡಿದೆ. ಆಗ ಚನ್ನರಾಜ ಹಟ್ಟಿಹೊಳಿ ನಿಂದು ಬಹಳ ಆಗಿದೆ ನಿನಗ್ಯಾಕೆ ಬೇಕು ಮಗನೆ ಅಂದಿದ್ದ. ಹೆಬ್ಬಾಳ್ಕರ್ ಪುತ್ರ ಮೃಣಾಲ್ ಚುನಾವಣೆ ವೇಳೆ ಕರೆ ಮಾಡಿ ಧಮಕಿ ಹಾಕಿದ್ದ. ಆಗ ದೂರು ಕೂಡ ಕೊಟ್ಟಿದೆ. ಆದರೆ ಪ್ರಭಾವ ಬಳಸಿ ಏನು ಆಗದಂತೆ ನೋಡಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.