AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಅವಾಂತರ: 5ಕ್ಕೂ ಹೆಚ್ಚು ಮನೆಗೆ ಹಾನಿ, ಒಬ್ಬನಿಗೆ ಗಾಯ

ಬೆಳಗಾವಿ: ಜಿಲ್ಲೆಯಾದ್ಯಂತ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಬಾರಿಯಷ್ಟೇ ಜಲಪ್ರವಾಹಕ್ಕೆ ಸಿಕ್ಕು ಹೊರ ಬರುವ ಮುನ್ನವೇ ಇಂದು ಒಂದೇ ದಿನ ಸುರಿದ ಭಾರಿ ಮಳೆಗೆ ಜನರು ಕಂಗಾಲಾಗಿದ್ದಾರೆ. ಬೆಳಗಾವಿ ನಗರದ ವಡಗಾವಿಯಲ್ಲಿ ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ರೆ, ಇತ್ತ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಓರ್ವನಿಗೆ ಗಂಭೀರ ಗಾಯವಾಗಿದೆ. ಮಾರುಕಟ್ಟೆ ಪ್ರದೇಶಗಳಲ್ಲಿ ಕೂಡ ಮಳೆಯ ನೀರು ಬಂದು ಅವಾಂತರ ಸೃಷ್ಟಿಮಾಡಿದ್ದು, ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಬೇಂಡಿ ಬಜಾರ್, ಖಡೇಬಜಾರ್, […]

ಮಳೆ ಅವಾಂತರ: 5ಕ್ಕೂ ಹೆಚ್ಚು ಮನೆಗೆ ಹಾನಿ, ಒಬ್ಬನಿಗೆ ಗಾಯ
ಸಾಧು ಶ್ರೀನಾಥ್​
| Edited By: |

Updated on: May 31, 2020 | 6:05 PM

Share

ಬೆಳಗಾವಿ: ಜಿಲ್ಲೆಯಾದ್ಯಂತ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಬಾರಿಯಷ್ಟೇ ಜಲಪ್ರವಾಹಕ್ಕೆ ಸಿಕ್ಕು ಹೊರ ಬರುವ ಮುನ್ನವೇ ಇಂದು ಒಂದೇ ದಿನ ಸುರಿದ ಭಾರಿ ಮಳೆಗೆ ಜನರು ಕಂಗಾಲಾಗಿದ್ದಾರೆ. ಬೆಳಗಾವಿ ನಗರದ ವಡಗಾವಿಯಲ್ಲಿ ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ರೆ, ಇತ್ತ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಓರ್ವನಿಗೆ ಗಂಭೀರ ಗಾಯವಾಗಿದೆ.

ಮಾರುಕಟ್ಟೆ ಪ್ರದೇಶಗಳಲ್ಲಿ ಕೂಡ ಮಳೆಯ ನೀರು ಬಂದು ಅವಾಂತರ ಸೃಷ್ಟಿಮಾಡಿದ್ದು, ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಬೇಂಡಿ ಬಜಾರ್, ಖಡೇಬಜಾರ್, ಪಾಂಗೂಲ್ ಗಲ್ಲಿಯಲ್ಲಿರುವ ಅಂಗಡಿಗಳಿಗೆ ಚರಂಡಿ ನೀರು ನುಗ್ಗಿ ಪರದಾಡುಂತಾಯಿತು. ಅಷ್ಟೇ ಅಲ್ಲದೆ ಅಂಗಡಿಯಲ್ಲಿ ನುಗ್ಗಿದ ನೀರನ್ನ ಹೊರ ಹಾಕಲು ಹರಸಾಹಸ ಪಡುವಂತಾಯಿತು.

ಲಾಕ್​ಡೌನ್ ನಂತರ ಅಂಗಡಿ ತೆಗೆದು ಲಕ್ಷಾಂತರ ರೂ. ಖರ್ಚು ಮಾಡಿ ಹೊಸದಾಗಿ ಸಾಮಾಗ್ರಿಗಳನ್ನ ಹಾಕಿದ್ದ ಅಂಗಡಿ ಮಾಲೀಕರಿಗೆ ಮಳೆಯ ನೀರು ನುಗ್ಗಿ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಯಿತು. ಇನ್ನೂ ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಇರುತ್ತೆ. ಒಳಚರಂಡಿ ವ್ಯವಸ್ಥೆಯೂ ಸರಿ ಇಲ್ಲ. ಈ ಕುರಿತು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ನಗರದಲ್ಲಿ ರಸ್ತೆ ಕಾಮಗಾರಿ ಕೂಡ ನಡೆಯುತ್ತಿದ್ದು ಮಳೆ ಆರಂಭಕ್ಕೂ ಮುನ್ನ ತಗ್ಗು ಗುಂಡಿಗಳನ್ನ ಮುಚ್ಚಿ ಅಪಘಾತಗಳಿಂದ ಜನರನ್ನ ರಕ್ಷಣೆ ಮಾಡುವ ಕೆಲಸ ಪಾಲಿಕೆ ಅಧಿಕಾರಿಗಳು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಳೆಗಾಲದ ಆರಂಭ ಇದಾಗಿದ್ದರಿಂದ ಎಲ್ಲಾ ಅನುಕೂಲ ಮಾಡಿಕೊಡಬೇಕೆಂದು ಕೂಡ ಜನರು ಆಗ್ರಹಿಸಿದ್ದಾರೆ.